ವಿಜಯಪುರ : ಕೆಪಿಎಸ್‌ಸಿ ನೇಮಕದಲ್ಲು ಭ್ರಷ್ಟಾಚಾರ ನಡೆದಿದೆ. ಕೆಪಿಎಸ್‌ಸಿ ಸದಸ್ಯರಾಗಲು 5 ರಿಂದ 10 ಕೋಟಿ ರೂಪಾಯಿ ಕೊಡ್ತಾರೆ. ಕೆಪಿಎಸ್‌ಸಿ ಚೇರ್ಮನ್ ಆಗಲು ಹಣ ಕೊಡ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಹೊಸ ಬಾಂಬ್ ಸಿಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ನಗರದಲ್ಲಿ ಸುದ್ದಿರರ ಜೊತೆ ಮಾತನಾಡಿದ ಶಾಸಕ ಯತ್ನಾಳ್‌, ಶಾಮ್ ಭಟ್‌ ರ ಮನೆ ರೇಡ್ ಆಗಾದ ಎಷ್ಟು ಹಣ ಸಿಕ್ತು. ನೇಮಕಾತಿಗಳೆ ದಂಧೆಗಳಾಗಿವೆ. ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ಆಗಬೇಕು, ಪಾರದರ್ಶಕತೆ ಆಗಬೇಕು. ಮಾಡಿದವರು ಬಿಜೆಪಿ, ನಮ್ಮ‌ ಪಕ್ಷದವರಲ್ಲ ಎಂದು ಸಬೂಬು ಹೇಳಿ ಜನರನ್ನ ಹುಚ್ಚು ಮಾಡೋಕೆ ಆಗೋಲ್ಲ. ಕೆಲ ಲಪುಟ ಲೀಡರ್ ಗಳು ಸಿಎಂಗೆ ಹತ್ತಿರ ಆಗ್ತಾರೋ ಗೊತ್ತಿಲ್ಲ. ಸಿಎಂಗಳು ಅವರ ಸೌಂದರ್ಯ ಮೆಚ್ಚಿ ಒಳಗೆ ಬೀಳ್ತಾವೋ. "ಏನರೇ.. ಏನರೇ ಕೊಡ್ತಾರೋ...." ಎಂದು ವ್ಯಂಗ್ಯವಾಡಿದರು. ಮುಖ್ಯಮಂತ್ರಿ ಕಚೇರಿ, ವಿಧಾನಸೌಧದಲ್ಲಿ ನೋಡಿದ್ದೀನಿ ಅಲ್ಲಿ ಲಕ...ಲಕ ಮಂದಿ ಬರ್ತಾರೆ. 30 ವರ್ಷ ಪಾರ್ಟಿಗೆ ದುಡಿದವರನ್ನ ಯಾರು ಕೇಳೋದಿಲ್ಲ. ಅಂಥವ್ರನ್ನ ಜೊತೆಗೆ ಕೂರಿಸಿಕೊಂಡು ಸಿಎಂ ಮಾತಾಡ್ತಾರೆ. ಬೆಂಗಳೂರಲ್ಲಿ ಇದೆ ನಡೆಯೋದು. ಇವೆಲ್ಲ ವ್ಯವಹಾರ ಬಂದ್ ಆಗಬೇಕಿದೆ. ಎಲ್ಲಾ ಮೆರಿಟ್ ಮೇಲೆ ನಡೆದ್ರೆ ಭ್ರಷ್ಟಾಚಾರ ನಿಲ್ಲುತ್ತೆ. ಇದರಲ್ಲಿ ಕೇವಲ ರಾಜಕಾರಣಿಗಳಲ್ಲ, ಪೊಲೀಸ್ ಅಧಿಕಾರಿಗಳು ಇರಲೇ ಬೇಕಲ್ಲ.ಐಪಿಎಸ್ ಗಳು ಇರ್ತಾರೆ.. ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲದೆ ಆಗುತ್ತಾ, ಓರ್ವ ಗೃಹ ಮಂತ್ರಿಗೆ ಗೊತ್ತಿರಲ್ವಾ. ನಾನು ಇದೆ ಗೃಹಮಂತ್ರಿ ಅಂತಾ ಹೇಳೋದಿಲ್ಲ.ಇದೊಂದು ಜಾಲ ಇದೆ.. ಇದರಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನವರಿದ್ದಾರೆ. ಇದೊಂದು ಜಾಲ ಇದೆ.ಕಾನೂನು ಮಾಡಿ ಒಂದು ಸಿಸ್ಟಮ್ ತೆಗೆಯಬೇಕು ಎಂದು ಗುಡುಗಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.