ಬೆಂಗಳೂರು: ಟಿಪ್ಪು, ಅಕ್ಬರ್‌ ಮತ್ತು ಬಾಬರ್‌ ವೈಭವೀಕರಿಸಿ ಪಠ್ಯದಲ್ಲಿ ಸೇರಿಸಲಾಗಿದೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(​Basangouda Patil Yatnal) ಕಿಡಿಕಾರಿದ್ದಾರೆ.


COMMERCIAL BREAK
SCROLL TO CONTINUE READING

ವಿಧಾನಸೌಧದಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಶಾಲಾ ಪಠ್ಯ ಪರಿಷ್ಕರಣೆ(School Textbook)ಯನ್ನು ನಾನು ಸ್ವಾಗತಿಸುತ್ತೇನೆ. ಯಾರ್ಯಾರ ವೈಭವೀಕರಣ ಆಗಿದೆಯೋ ಅದಕ್ಕೆಲ್ಲ ಕಡಿವಾಣ ಹಾಕಬೇಕಿದೆ’ ಎಂದು ಹೇಳಿದರು.


ಇದನ್ನೂ ಓದಿ: ನಮ್ ಮನೆ ದೇವ್ರು ಹೆಸ್ರು ಇಟ್ಕಂಡಿದೀರಿ, ಹಿಂಗಾಡ್ತಿರಲ್ಲ; ಸದನದಲ್ಲಿ ರಾಮ ಜಪ..!


ಪಠ್ಯದಲ್ಲಿ ಮುಸ್ಲಿಂ ರಾಜರ(Muslim Kings) ವೈಭವೀಕರಣ ತೆಗೆದು ವಾಸ್ತವಿಕತೆಯ ಪಾಠ ಅಳವಡಿಸಬೇಕು. ಟಿಪ್ಪು, ಅಕ್ಬರ್‌, ಬಾಬರ್‌ ಮುಂತಾದ ಮುಸ್ಲಿಂ ರಾಜರ ವೈಭವೀಕರಣಕ್ಕೆ ಕಡಿವಾಣ ಹಾಕಿ ಶಿವಾಜಿ ಕುರಿತ ಇತಿಹಾಸವನ್ನು ತಿಳಿಸಬೇಕಿದೆ ಎಂದು ಒತ್ತಾಯಿಸಿದರು.


ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿಕೆಗೆ ತಿರುಗೇಟು ನೀಡಿದ ಯತ್ನಾಳ್, ‘ಮುಸ್ಲಿಂರನ್ನು ಕಾಂಗ್ರೆಸ್ ನವರು ವ್ಯವಸ್ಥಿತವಾಗಿ ಪ್ರಚೋದಿಸುತ್ತಿದ್ದಾರೆ. ಮುಸ್ಲಿಂರ ಕಾರ್ಯಕ್ರಮದಲ್ಲಿ ಅವರ ಧರ್ಮದ ಪೋಷಾಕು ಹಾಕುತ್ತಾರೆ. ಹಿಂದೂಗಳ ಕಾರ್ಯಕ್ರಮದಲ್ಲಿ ವಿರೋಧಿಸ್ತಾರೆ. ಸಿದ್ದರಾಮಯ್ಯ ಹಿಂದೂ ವಿರೋಧಿ(Hinduism) ಧೋರಣೆ ಮುಂದುವರೆಸಿಕೊಂಡು ಹೋಗ್ತಿದ್ದಾರೆ ಎಂದು ಕುಟುಕಿದರು.


ಇದನ್ನೂ ಓದಿ: 'ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ:ಮೂರು ತಿಂಗಳು ಹಿಂದೆಯೇ ಇದನ್ನ ಭವಿಷ್ಯ ನುಡಿದಿದ್ದೆ!'


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.