Siddharamaiah Allegations On BJP: ಜೇಮ್ಸ್ ಚಿತ್ರ ನಿಲ್ಲಿಸಲು ಬಿಜೆಪಿ ಒತ್ತಡ, ಸಿದ್ದರಾಮಯ್ಯ ಆರೋಪ!

Siddharamaiah Allegations On BJP - ಪುನೀತ್ ರಾಜಕುಮಾರ್ (Puneeth Rajkumar) ಅಭಿನಯದ ಜೇಮ್ಸ್ (James) ಚಿತ್ರ ಥಿಯೇಟರ್ ನಿಂದ ತೆರವು ಮಾಡಲು ಬಿಜೆಪಿ (BJP) ಒತ್ತಡ ಹೇರುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Opposition Leader Siddharamaiah) ಆರೋಪಿಸಿದ್ದಾರೆ.

Written by - Prashobh Devanahalli | Edited by - Nitin Tabib | Last Updated : Mar 22, 2022, 06:47 PM IST
  • James ಚಿತ್ರವನ್ನು ಥಿಯೇಟರ್ ನಿಂದ ತೆರವು ಮಾಡಲು ಬಿಜೆಪಿ ಯತ್ನ
  • ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪ
  • ಯಾರಿಗೆ ಯಾವ ಸಿನಿಮಾ ಇಷ್ಟವೋ ಅವರು ಅದನ್ನು ನೋಡಲಿ ಎಂದ ಸಿದ್ಧರಾಮಯ್ಯ
Siddharamaiah Allegations On BJP: ಜೇಮ್ಸ್ ಚಿತ್ರ ನಿಲ್ಲಿಸಲು ಬಿಜೆಪಿ ಒತ್ತಡ, ಸಿದ್ದರಾಮಯ್ಯ ಆರೋಪ! title=
Siddharamaiah Allegations On BJP

ಬೆಂಗಳೂರು: Siddharamaiah Allegations On BJP - ಪುನೀತ್ ರಾಜಕುಮಾರ್ (Puneeth Rajkumar) ಅಭಿನಯದ ಜೇಮ್ಸ್ (James) ಚಿತ್ರ ಥಿಯೇಟರ್ ನಿಂದ ತೆರವು ಮಾಡಲು ಬಿಜೆಪಿ (BJP) ಒತ್ತಡ ಹೇರುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Opposition Leader Siddharamaiah) ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ  ಮಾತನಾಡಿರುವ ಅವರು, ನಿನ್ನೆ ರಾತ್ರಿ ಜೇಮ್ಸ್ ಚಿತ್ರದ ನಿರ್ಮಾಪಕರು ಭೇಟಿಯಾಗಿದ್ದರು. ಅನೇಕ ಕಡೆಗಳಲ್ಲಿ ಬಿಜೆಪಿ ಶಾಸಕರು ಜೇಮ್ಸ್ ಚಿತ್ರ ನಡೆಯುತ್ತಿರುವ ಥಿಯೇಟರ್ ನಲ್ಲಿ ಶೋ ನಿಲ್ಲಿಸಲು ಒತ್ತಡ ಹಾಕುತ್ತಿದ್ದಾರೆ. 'ಕಾಶ್ಮೀರಿ ಫೈಲ್' (The Kashmir Files) ಚಿತ್ರಕ್ಕಾಗಿ ಅವರ ಈ ಒತ್ತಡ ಹಾಕುತ್ತಿದ್ದು, ನಿರ್ಮಾಪಕರು ನನ್ನ ಬಳಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ-Mysore University Convocation: ಪಾರ್ವತಮ್ಮ & ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ 2 ಚಿನ್ನದ ಪದಕ ಘೋಷಣೆ

ನಿರ್ಮಾಪಕರು ಮೊದಲೇ ಅಡ್ವಾನ್ಸ್ ಕೊಟ್ಟಿರುತ್ತಾರೆ, ಬಿಜೆಪಿಯವರು ಬಲವಂತದಿಂದ ಜೇಮ್ಸ್ ಚಿತ್ರ ತೆರವುಗೊಳಿಸುವ ದೌರ್ಜನ್ಯ ಎಸಗುತ್ತಿದ್ದಾರೆ. ಪುನಿತ್ ರಾಜ್ ಕುನಾರ್ ಅಭಿಮಾನಿಗಳು ತುಂಬಾ ಆಸಕ್ತಿಯಿಂದ ಇದ್ದಾರೆ. ಇಂತಹ ಸಂದರ್ಭದಲ್ಲಿ ಬಲವಂತವಾಗಿ ಸಿನಿಮಾ ತೆಗೆಸುವುದು ಸರಿ ಅಲ್ಲ. ನಾನು ಬಿಜೆಪಿ ಶಾಸಕರಿಗೂ ಹೇಳ್ತಿನಿ, ಬಿಜೆಪಿಯವರು ಸಜ್ಜನರ ಥರ ಆಡ್ತಾರೆ. ನಾವು ಯಾರ ಸಿನಿಮಾ ನೋಡಬೇಡ ಅನ್ನೋದಿಲ್ಲ. ಯಾರಿಗೆ ಯಾವ ಸಿನಿಮಾ ಇಷ್ಟವೋ ಅವರು ನೋಡಲಿ, ಆದರೆ ದೌರ್ಜನ್ಯ ಎಸಗಬಾರದು ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ -ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ ಡಾಕ್ಟರೇಟ್

ಇದೆ ಸಂದರ್ಭದಲ್ಲಿ ಮುಸ್ಲಿಂ ಮಳಿಗೆಗಳಿಗೆ ಜಾತ್ರೆಗಳಲ್ಲಿ ಅವಕಾಶ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಈ ರೀತಿ ಅವಕಾಶ ನಿರಾಕರಣೆ ಅಥವಾ ಮಳಿಗೆ ನೀಡದೇ ಇರುವುದು, ಅಂಗಡಿಗಳಿಗೆ ಟೆಂಡರ್ ನಿರಾಕರಿಸುವುದು ತಪ್ಪು. ಇದು ಫ್ರೀ ಟ್ರೇಡಿಂಗ್ (Free Trading) ಗೆ ವಿರೋಧವಾಗಿದೆ. ನಮ್ಮ ದೇಶದಲ್ಲಿ ಫ್ರೀ ಟ್ರೆಡಿಂಗ್ ಇದೆ. ಈ ರೀತಿ ಅವಕಾಶ ನಿರಾಕರಣೆ ಮಾಡುವುದು ದೌರ್ಜನ್ಯ. ಮೂಲಭೂತ ಹಕ್ಕನ್ನು ಹತ್ತಿಕ್ಕುವ ಕೆಲಸ ಹಾಗೂ ಇದು ಸಂಪೂರ್ಣ ಕಾನೂನುಬಾಹಿರ ಎಂದು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News