ದಾವಣಗೆರೆ: ಮದುವೆ ಮನೆಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕರಿಮಣಿ ಪೋಣಿಸಿದ್ದಾರೆ. ವಧು-ವರರ ಪಕ್ಕವೇ ಕುಳಿತುಕೊಂಡಿದ್ದ ಅವರು ಮಹಿಳೆಯರನ್ನು ಬಿಡಿಸಿ ತಾಳಿ ಪೋಣಿಸಿದ್ದಾರೆ.   


COMMERCIAL BREAK
SCROLL TO CONTINUE READING

ತಾಳಿ ಪೋಣಿಸಲು ಮುಂದಾದ ರೇಣುಕಾಚಾರ್ಯರಿಗೆ ಆ ಕೆಲಸ ಸುಲಭವಾದಂತೆ ಕಾಣಿಸಿಲ್ಲ. ಹೀಗಾಗಿ ಕರಿಮಣಿ ಪೋಣಿಸಲು ಶಾಸಕರು ಹರಸಾಹಸಪಡಬೇಕಾಯಿತು. ಒಂದು ಕರಿಮಣಿ ಪೋಣಿಸಲು ರೇಣುಕಾಚಾರ್ಯ ಐದಾರು ನಿಮಿಷ ಸಮಯ ತೆಗೆದುಕೊಂಡಿದ್ದಾರೆ.


ಇದನ್ನೂ ಓದಿ: ಅಬ್ಬಬ್ಬಾ...ಡ್ರಗ್‌ ದಂಧೆಕೋರರಿಂದ ವಶಕ್ಕೆ ಪಡೆದ ಹೆರಾಯಿನ್‌ ಮೌಲ್ಯ ಎಷ್ಟು ಗೊತ್ತಾ!


ಮದುವೆ ಮನೆಯಲ್ಲಿ ತಾಳಿ ಪೋಣಿಸುವ ಮೂಲಕ ರೇಣುಕಾಚಾರ್ಯ ಗಮನ ಸೆಳೆದಿದ್ದಾರೆ. ರೇಣುಕಾಚಾರ್ಯ ಅವರು ತಾಳಿ ಪೋಣಿಸುವುದನ್ನು ನೋಡಿ ಮಹಿಳೆಯರು ಮುಸಿ ಮುಸಿ ನಕ್ಕಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.


ತರಗನಹಳ್ಳಿ ಗ್ರಾಮದ ಬಸವೇಶ್ವರ ಸಮುದಾಯ ಭವನದಲ್ಲಿ ನಡೆದ ಮಾಸಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲೋಹಿತ್ ಸಹೋದರ ಬಸವರಾಜ್ ಮದುವೆ ಸಮಾರಂಭಕ್ಕೆ ಆಗಮಿದ್ದ ರೇಣುಕಾಚಾರ್ಯ ಕರಿಮಣಿ ಪೋಣಿಸುವ ಮೂಲಕ ಮತ್ತೊಮ್ಮೆ ಸಖತ್ ಸುದ್ದಿಯಾಗಿದ್ದಾರೆ.   


ಇದನ್ನೂ ಓದಿ: Viral Video: ವಿದ್ಯುತ್ ವ್ಯತ್ಯಯ ಹಿನ್ನೆಲೆ ಮೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ!


ತಾಳಿ ಪೋಣಿಸುವ ಮೂಲಕ ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ ನವಜೋಡಿ ನೂರುಕಾಲ ಸುಖವಾಗಿರಲೆಂದು ಆಶೀರ್ವಾದ ಮಾಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.