Pramod Muthalik : 'ಜ್ಞಾನವಾಪಿ ಮಸೀದಿ ಅಲ್ಲ, ಅದು ದೇವಸ್ಥಾನ'

ಮುಸ್ಲಿಮರು ಅಯೋಧ್ಯಾ ಮಾದರಿ ಹೋರಾಟಕ್ಕೆ ಅವಕಾಶ ಕೊಡಬಾರದು. ದೇಶದಲ್ಲಿರುವ 30 ಸಾವಿರ  ಮಸೀದಿಗಳನ್ನು ಹೊಡೆದು ಮಂದಿರಗಳನ್ನ ಕಟ್ಟುವ ಕೆಲಸ ಮಾಡಬೇಕಾಗುತ್ತದೆ ಎಂದು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

Written by - Zee Kannada News Desk | Last Updated : May 20, 2022, 10:40 PM IST
  • ಜ್ಞಾನವಾಪಿ ಮಸೀದಿ ಅಲ್ಲ, ಅದು ದೇವಸ್ಥಾನ
  • 1669ರಲ್ಲಿ ಔರಂಗಜೇಬ್ ದಾಳಿ ಮಾಡಿ ಮಸೀದಿ ಮಾಡಿರುವ ಉಲ್ಲೇಖವಿದೆ
  • ಮುಸ್ಲಿಮರು ಅಯೋಧ್ಯಾ ಮಾದರಿ ಹೋರಾಟಕ್ಕೆ ಅವಕಾಶ ಕೊಡಬಾರದು
Pramod Muthalik : 'ಜ್ಞಾನವಾಪಿ ಮಸೀದಿ ಅಲ್ಲ, ಅದು ದೇವಸ್ಥಾನ' title=

ಚಿಕ್ಕಮಗಳೂರು : ಜ್ಞಾನವಾಪಿ ಮಸೀದಿ ಅಲ್ಲ, ಅದು ದೇವಸ್ಥಾನ. 12 ಜ್ಯೋತಿರ್ಲಿಂಗಗಳು ಇರುವ ಪ್ರಮುಖವಾದಂತಹ ಸ್ಥಳವಾಗಿದೆ. ಕಾಶಿಯ ದೇವಸ್ಥಾನಗಳಲ್ಲಿ ಅತ್ಯಂತ ಶ್ರೇಷ್ಠವಾದ ದೇವಸ್ಥಾನವಿದು. 1669ರಲ್ಲಿ ಔರಂಗಜೇಬ್ ದಾಳಿ ಮಾಡಿ ಮಸೀದಿ ಮಾಡಿರುವ ಉಲ್ಲೇಖವಿದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಪ್ರಮೋದ್ ಮುತಾಲಿಕ್, ಮುಸ್ಲಿಮರು ಕೋರ್ಟ್ ಆದೇಶವನ್ನು ಏಕೆ ವಿರೋಧ ಮಾಡಬೇಕು. ಅಲ್ಲಿ ಬಾಂಬ್, ತಲ್ವಾರ್, ಪಿಸ್ತೂಲ್ ಇಟ್ಟಿದ್ದಾರೆ. ಸಂವಿಧಾನಬದ್ಧವಾದ ಕೋರ್ಟ್ ಆದೇಶವನ್ನ ಉಲ್ಲಂಘಿಸುತ್ತಾರೆ ಅಂದ್ರೆ ಅರ್ಥವೇನು?. ಈ ದೇಶದಲ್ಲಿ ಷರಿಯತ್, ಕುರಾನ್ ನಡೆಯುವುದಿಲ್ಲ. ಮುಸ್ಲಿಮರು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ಹಿಂದೂಗಳಿಗೆ ಬಿಟ್ಟುಕೊಡಬೇಕು ಎಂದರು. 

ಇದನ್ನೂ ಓದಿ : 'ಗಂಗಾವತಿ-ದರೋಜಿ ರೈಲ್ವೇ ಮಾರ್ಗದ ಸರ್ವೇ ಕಾರ್ಯ ಶೀಘ್ರ ಪ್ರಾರಂಭ'

ಮುಸ್ಲಿಮರು ಅಯೋಧ್ಯಾ ಮಾದರಿ ಹೋರಾಟಕ್ಕೆ ಅವಕಾಶ ಕೊಡಬಾರದು. ದೇಶದಲ್ಲಿರುವ 30 ಸಾವಿರ  ಮಸೀದಿಗಳನ್ನು ಹೊಡೆದು ಮಂದಿರಗಳನ್ನ ಕಟ್ಟುವ ಕೆಲಸ ಮಾಡಬೇಕಾಗುತ್ತದೆ ಎಂದು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News