‘ಚಂದ್ರು ಕೊಲೆ ಮಾಡಿದವರು ಅನ್ಯಧರ್ಮಿಯರು, ಹತ್ಯೆಯಾಗಿದ್ದು ಹಿಂದೂ’
ಕನ್ನಡ ಮಾತಾಡಿದ್ದಕ್ಕೆ ಚಂದ್ರು ಹತ್ಯೆ ಆಯ್ತು ಅಂತಾ ಕೆಲವರು ಹೇಳ್ತಿದ್ದಾರೆ. ಪೊಲೀಸರು ಎರಡೂ ರೀತಿಯ ವರದಿ ಕೊಡ್ತಿದ್ದಾರೆ. ಹತ್ಯೆ ಆಗಿರೋದು ನಿಜ, ಹತ್ಯೆ ಮಾಡಿರೋದು ಮುಸಲ್ಮಾನರು ಅದೂ ನಿಜ. ಸತ್ತಿರೋನು ಹಿಂದೂ ಅದೂ ನಿಜ ಎಂದು ಸಿಟಿ ರವಿ ಹೇಳಿದ್ದಾರೆ.
ಬೆಂಗಳೂರು: ಗೋರಿಪಾಳ್ಯದಲ್ಲಿ ಮಂಗಳವಾರ ರಾತ್ರಿ ನಡೆದ ಕೊಲೆ ಪ್ರಕರಣ(Goripalya Chandru Murder Case)ಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ನೀಡಿರುವ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರ ಉಂಟಾಗಿದೆ. ಈ ವಿಚಾರದ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಬುಧವಾರ ಪ್ರತಿಕ್ರಿಯೆ ನೀಡಿದ್ದಾರೆ.
‘ಕನ್ನಡ ಮಾತಾಡಿದ್ದಕ್ಕೆ ಚಂದ್ರು ಹತ್ಯೆ ಆಯ್ತು ಅಂತಾ ಕೆಲವರು ಹೇಳ್ತಿದ್ದಾರೆ. ಪೊಲೀಸರು ಎರಡೂ ರೀತಿಯ ವರದಿ ಕೊಡ್ತಿದ್ದಾರೆ. ಹತ್ಯೆ ಆಗಿರೋದು ನಿಜ, ಹತ್ಯೆ ಮಾಡಿರೋದು ಮುಸಲ್ಮಾನರು ಅದೂ ನಿಜ. ಸತ್ತಿರೋನು ಹಿಂದೂ ಅದೂ ನಿಜ’ ಎಂದು ಸಿಟಿ ರವಿ(CT Ravi) ಹೇಳಿದ್ದಾರೆ.
ಇದನ್ನೂ ಓದಿ: #LuckyDipCMHDK ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಮಾತ್ರ ಅವಕಾಶ: ಬಿಜೆಪಿ
ಗೃಹ ಸಚಿವರ ಎಡವಟ್ ಹೇಳಿಕೆ!
ಮಂಗಳವಾರ ರಾತ್ರಿ ನಡೆದ ಬೈಕ್ ಅಪಘಾತ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆಗೀಡಾದ ಚಂದ್ರು(Chandru Murder Case) ಹಾಗೂ ಶಾಹಿದ್ ನಡುವೆ ಮಾತಿನ ಚಕಮಕಿ ನಡೆದಿತ್ತಂತೆ. ಶಾಹಿದ್ ಹಾಗೂ ಇತರರು ಸೇರಿ ಚಂದ್ರುಗೆ ಚೂರಿಯಲ್ಲಿ ಇರಿದಿದ್ದರು. ಪರಿಣಾಮ ಚಂದ್ರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ತಪ್ಪಾದ ಹೇಳಿಕೆ ನೀಡಿದ್ದರು.
‘ಉರ್ದು ಭಾಷೆ ಮಾತನಾಡಲು ಒಪ್ಪದಿದ್ದ ಕಾರಣ ಈ ಕೊಲೆ ನಡೆದಿದೆ’ ಎಂದು ಗೃಹ ಸಚಿವರು( Araga Jnanendra) ಮೊದಲು ಹೇಳಿಕೆ ಕೊಟ್ಟಿದ್ದರು. ಇದೇ ವಿಚಾರವಾಗಿ ಮಾತನಾಡಿದ್ದ ಸಿಟಿ ರವಿ ‘ಕನ್ನಡ ಮಾತನಾಡಿದನೆಂಬ ಕಾರಣಕ್ಕೆ ಚಂದ್ರು ಹತ್ಯೆ ಆಗಿದೆ. ಇದನ್ನು ಖಂಡಿಸುತ್ತೇವೆ. ನಾವು ಯಾವ ದೇಶದಲ್ಲಿದ್ದೇವೆ? ಎಂದು ಪ್ರಶ್ನಿಸಿದ್ದರು. ಇದನ್ನು ವ್ಯಕ್ತಿಗತ ಹಿನ್ನೆಲೆಯಲ್ಲಿ ನೋಡಬಾರದು. ಇದರ ಹಿಂದೆ ಪ್ರಚೋದನಕಾರಿ ಅಂಶವಿದೆ. ಇವತ್ತು ಗೋರಿಪಾಳ್ಯದಲ್ಲಿ ಆಗಿರುವುದು ನಾಳೆ ಬೇರೆ ಕಡೆ ನಡೆಯಬಹುದು ಎಂದು ಹೇಳಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿ, ‘ಇದು ಅಪಘಾತದ ಕಾರಣಕ್ಕೆ ನಡೆದ ಜಗಳದ ಹಿನ್ನೆಲೆಯಲ್ಲಿ ಆದ ಕೊಲೆ’ ಎಂದಿದ್ದರು. ಆರಗ ಜ್ಞಾನೇಂದ್ರ Araga Jnanendra) ಸಹ ತಮ್ಮ ಹಿಂದಿನ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿ, ‘ದ್ವಿಚಕ್ರ ವಾಹನ ಅಪಘಾತಕ್ಕೆ ಸಂಬಂಧಿಸಿದಂತೆ ಯುವಕರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ದುಷ್ಕರ್ಮಿಗಳು ಚೂರಿಯಿಂದ ಇರಿದು ಕೊಲೆ ಮಡಿದ್ದಾರೆ’ ಎಂದು ಹೇಳಿದ್ದರು.
ಇದನ್ನೂ ಓದಿ: ‘ನಾನು ಕೇಸರಿ ಟವಲ್ ಹಾಕಿ ಬರುತ್ತೇನೆ, ಬನ್ನಿ ಬಡವರನ್ನು ರಕ್ಷಿಸೋಣ’
ಮಸ್ಕಾನ್ ಖಾನ್‍ಗೆ ಅಲ್ ಖೈದಾ ಬೆಂಬಲ!
ಅಂದು ಮುಸ್ಕಾನ್ ಖಾನ್(Muskan Khan) ಸುರಕ್ಷಿತವಾಗಿ ಮನೆಗೆ ಬರಲು ಕಾರಣ ಅಲ್ಲಿದ್ದ ಹಿಂದೂ ಹುಡುಗರು. ಹಿಂದೂ ಹುಡುಗರ ಜಾಗದಲ್ಲಿ ಮುಸ್ಲಿಂ ಹುಡುಗರು, ಹಿಂದೂ ಹುಡುಗಿ ಇದ್ದಿದ್ದರೆ ಆಕೆ ಸುರಕ್ಷಿತವಾಗಿ ಮನೆ ತಲುಪುತ್ತಿರಲಿಲ್ಲವೇನೋ? ಏಕೆಂದರೆ ಹಿಂದೂ ಹುಡುಗರು ಆವೇಶದಿಂದ ಘೋಷಣೆ ಕೂಗಿರಬಹುದು. ಆದ್ರೆ ಹಿಂದೂ ಹುಡುಗರು ಅತ್ಯಾಚಾರ ಮಾಡುವ ಮನಸ್ಥಿತಿಯವರಲ್ಲ. ಹೀಗಾಗಿ ಆಕೆ ಬಚಾವಾಗಿದ್ದಾಳೆ ಎಂದು ಮಂಡ್ಯದಲ್ಲಿ ನಡೆದ ಘಟನೆ ವಿಚಾರವಾಗಿ ಸಿಟಿ ರವಿ ವಿವಾದಾತ್ಮಕ ಹೇಳಿಕೆ(Controversial Statement) ನೀಡಿದ್ದಾರೆ.
ಭಾರತ ನೂರಾರು ಸಂಸ್ಕೃತಿ, ವೈವಿಧ್ಯತೆಯ ರಾಷ್ಟ್ರ. ಇದನ್ನು ದುರ್ಬಲಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಹಿಜಾಬ್ ಸಮವಸ್ತ್ರಕ್ಕೆ ಮಾತ್ರ ವಿರೋಧವಿಲ್ಲ ಅನ್ನೋದು ಗೊತ್ತಾಗುತ್ತೆ. ಸಮಾಜ ಒಡೆಯುವ ಸಂಚು ಇದೆ ಅನ್ನಿಸುತ್ತದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಹಿಜಾಬ್ ಹಿಂದೆ ಬೇರೆಯದೇ ಸಂಚು ಇದೆ ಅಂತಾ ಸಿಟಿ ರವಿ(CT Ravi) ಹೇಳಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.