ಬೆಂಗಳೂರು: #LuckyDipCMHDK ಪಕ್ಷದಲ್ಲಿ ಕುಟುಂಬ ರಾಜಕಾರಣ(Dynastic Politics)ಕ್ಕೆ ಮಾತ್ರ ಅವಕಾಶವೆಂದು ಬಿಜೆಪಿ ಟೀಕಿಸಿದೆ. ಸೋಮವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy)ಯವರ ಕುಟುಂಬ ರಾಜಕಾರಣದ ಬಗ್ಗೆ ವ್ಯಂಗ್ಯವಾಡಿದೆ.
‘ಮಾಜಿ #LuckyDipCMHDK ಅವರೇ, ಮುಂದಿನ ಚುನಾವಣೆ(Vidhan Sabha Election 2022)ಯಲ್ಲಿ ಮಿಶನ್-123 ಎನ್ನುತ್ತಿದ್ದೀರಿ. ನಿಮ್ಮ ಕುಟುಂಬದ ಎಲ್ಲಾ ಕವಲುಗಳಿಗೂ ಈಗಾಗಲೇ ಅವಕಾಶ ಕಲ್ಪಿಸಿದ್ದೀರಿ. ಮುಂದಿನ ಚುನಾವಣೆಗೆ ಇನ್ನು ಯಾರ್ಯಾರು ನಿಮ್ಮ ಮನೆತನದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ?’ ಎಂದು ಪ್ರಶ್ನಿಸಿದೆ.
ಮಾನ್ಯ #ಬ್ರದರ್, ನಿಮ್ಮ ಪಕ್ಷದ ಮಿಶನ್-123 ಗೆ ತೆನೆ ಹೊರಬೇಕೆಂದರೆ ಒಬ್ಬರೇ ಪಕ್ಷಕ್ಕೆ ಸೇರಬೇಕೋ, ಕುಟುಂಬ ಸಮೇತರಾಗಿ ಸೇರಬೇಕೋ?
ಏಕೆಂದರೆ ಮಾಜಿ #LuckyDipCMHDK ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಮಾತ್ರ ಅವಕಾಶ. ಇನ್ನು ಕೆಲವು ಕಡೆ ಪ್ರಚಾರ ಮಾಡುವುದಕ್ಕೂ ಕುಟುಂಬದವರು ಮಾತ್ರ ಉಳಿಯುವುದಲ್ಲವೇ?
— BJP Karnataka (@BJP4Karnataka) April 4, 2022
ಇದನ್ನೂ ಓದಿ: Electricity Bill: ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ, ಜನರ ಜೇಬಿಗೆ ಮತ್ತಷ್ಟು ಹೊರೆ
‘ಜೆಡಿಎಸ್ ಮಿಶನ್-123 ಎನ್ನುವ ಸಂಕಲ್ಪ ಮಾಡಿದೆ. ಮಾಜಿ #LuckyDipCMHDK ಅವರೇ, ಇದರರ್ಥ ಜೆಡಿಎಸ್(JDS Party) 123 ಸ್ಥಾನ ಗಳಿಸಲಿದೆ ಎಂದೋ ಅಥವಾ ಯಾವ ಪಕ್ಷವನ್ನೂ 123 ಸ್ಥಾನ ದಾಟಲು ಬಿಡುವುದಿಲ್ಲವೆಂದೋ? ಅತಂತ್ರದ ತಂತ್ರ ಹೂಡಿ ಮತ್ತೆ ಸಾಂದರ್ಭಿಕ ಶಿಶು ಎನಿಸಿಕೊಳ್ಳುವ ತವಕವೇ?’ ಎಂದು ಕುಟುಕಿದೆ.
ನಮ್ಮ ಕುಟುಂಬದವರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದರೆ ಗೆಲ್ಲುವುದಿಲ್ಲ ಎಂದು ಮಾಜಿ #LuckyDipCMHDK ಹೇಳಿದ್ದರು.
ಅಲ್ಲಿಗೆ, ಮಿಶನ್-123 ನಲ್ಲಿ ಕುಟುಂಬ ವರ್ಗದವರೇ ಸಿಂಹಪಾಲು ಪಡೆಯುವುದು ಸ್ಪಷ್ಟ.
ಅಂದಹಾಗೆ, ನಿಮ್ಮ ಕುಟುಂಬ ವರ್ಗದಿಂದ ಯಾರಾದರೂ ಬಿಟ್ಟು ಹೋಗಿದ್ದರೆ ಅವರಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್ ನೀಡುತ್ತೀರಿ?
— BJP Karnataka (@BJP4Karnataka) April 4, 2022
‘ನಮ್ಮ ಕುಟುಂಬದವರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದರೆ ಗೆಲ್ಲುವುದಿಲ್ಲವೆಂದು ಮಾಜಿ #LuckyDipCMHDK ಹೇಳಿದ್ದರು. ಅಲ್ಲಿಗೆ, ಮಿಶನ್-123 ನಲ್ಲಿ ಕುಟುಂಬ ವರ್ಗದವರೇ ಸಿಂಹಪಾಲು ಪಡೆಯುವುದು ಸ್ಪಷ್ಟ. ಅಂದಹಾಗೆ ನಿಮ್ಮ ಕುಟುಂಬ ವರ್ಗದಿಂದ ಯಾರಾದರೂ ಬಿಟ್ಟು ಹೋಗಿದ್ದರೆ ಅವರಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್ ನೀಡುತ್ತೀರಿ?’ ಎಂದು ವ್ಯಂಗ್ಯವಾಗಿ ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ: ರಾಜ್ಯದ ಜನತೆಗೆ ಕರೆಂಟ್ ಶಾಕ್!; ಸರ್ಕಾರಕ್ಕೆ ಹಣ ಮಾಡುವುದೇ ದಂಧೆ ಆಗಿದೆ ಎಂದ ಎಚ್‌ಡಿಕೆ
ಬಹುಮತ ಪಡೆಯುತ್ತೇವೆ ಎಂದೆನ್ನುವ ಮೂಲಕ ಮಾಜಿ #LuckyDipCMHDK ಈಗ ಮತ್ತೊಂದು ಗಾಳಿಪಟ ಸಿದ್ದಪಡಿಸುತ್ತಿದ್ದಾರೆ, ಇದು ಟಿಕೆಟ್ ಆಕಾಂಕ್ಷಿಗಳನ್ನು ಸೆಳೆಯುವ ತಂತ್ರವೇ?
ಸೂತ್ರವಿಲ್ಲದ ಗಾಳಿಪಟದ ಹಾರಾಟ ಹೇಗಿರುತ್ತದೆ ಎಂದು ಮಾಜಿ ಶಾಸಕ ಕೋನರೆಡ್ಡಿಯವರನ್ನು ಕೇಳಿದರೆ ಉತ್ತರ ಸಿಗಬಹುದೇ? ಅಥವಾ ರಾಜ್ಯಸಭೆಯ ಕನಸು ಕಂಡ ಫಾರೂಕ್ ವಿವರಿಸಬಹುದೇ?
— BJP Karnataka (@BJP4Karnataka) April 4, 2022
‘ಬಹುಮತ ಪಡೆಯುತ್ತೇವೆ ಎಂದೆನ್ನುವ ಮೂಲಕ ಮಾಜಿ #LuckyDipCMHDK ಈಗ ಮತ್ತೊಂದು ಗಾಳಿಪಟ ಸಿದ್ದಪಡಿಸುತ್ತಿದ್ದಾರೆ, ಇದು ಟಿಕೆಟ್ ಆಕಾಂಕ್ಷಿಗಳನ್ನು ಸೆಳೆಯುವ ತಂತ್ರವೇ? ಸೂತ್ರವಿಲ್ಲದ ಗಾಳಿಪಟದ ಹಾರಾಟ ಹೇಗಿರುತ್ತದೆ ಎಂದು ಮಾಜಿ ಶಾಸಕ ಎನ್.ಎಚ್ ಕೋನರೆಡ್ಡಿ(NH Konaraddi)ಯವರನ್ನು ಕೇಳಿದರೆ ಉತ್ತರ ಸಿಗಬಹುದೇ? ಅಥವಾ ರಾಜ್ಯಸಭೆಯ ಕನಸು ಕಂಡ ಫಾರೂಕ್ ವಿವರಿಸಬಹುದೇ?’ ಎಂದು ಟ್ವೀಟ್ ಮಾಡಿದೆ.
‘#ಬ್ರದರ್ ನಿಮ್ಮ ಪಕ್ಷದ ಮಿಶನ್-123ಗೆ ತೆನೆ ಹೊರಬೇಕೆಂದರೆ ಒಬ್ಬರೇ ಪಕ್ಷಕ್ಕೆ ಸೇರಬೇಕೋ, ಕುಟುಂಬ ಸಮೇತರಾಗಿ ಸೇರಬೇಕೋ? ಏಕೆಂದರೆ ಮಾಜಿ #LuckyDipCMHDK ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಮಾತ್ರ ಅವಕಾಶ. ಇನ್ನು ಕೆಲವು ಕಡೆ ಪ್ರಚಾರ ಮಾಡುವುದಕ್ಕೂ ಕುಟುಂಬದವರು ಮಾತ್ರ ಉಳಿಯುವುದಲ್ಲವೇ?’ ಎಂದು ಪ್ರಶ್ನಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.