ಹಿಂದುತ್ವ - ಒಕ್ಕಲಿಗ ಮತ ಸೆಳೆಯಲು ಬಿಜೆಪಿ ಪ್ಲಾನ್ ; ಹಳೆ ಮೈಸೂರು ಭಾಗಕ್ಕೆ ವರವಾಗತ್ತಾ ಕಮಲ ಪಾಳಯದ ತಂತ್ರ
ನಿನ್ನೆ ಉತ್ತರ ಪ್ರದೇಶದ ಲಖನೌ ನಲ್ಲಿ ಭೇಟಿ ಮಾಡಿ ಆಹ್ವಾನ ನೀಡಿ ಬಂದಿರುವ ಸಚಿವ ಅಶ್ವಥ್ ನಾರಾಯಣ್, ದೇವಸ್ಥಾನದ ಜೀರ್ಣೋದ್ಧಾರ ಮಾಡಿ, ಪವಿತ್ರ ಸ್ಥಳ ಹಾಗೂ ಪ್ರವಾಸಿ ಸ್ಥಳವನ್ನಾಗಿ ಮಾಡಿಸಿ, ಹಿಂದೂ ಕೇಂದ್ರಸ್ಥಾನ ಮಾಡಲು ತಯಾರಿ ನಡೆಸಿದ್ದಾರೆ.
ಬೆಂಗಳೂರು : ಹಳೆ ಮೈಸೂರು ಭಾಗದಲ್ಲಿ ಹಿಂದು ಹಾಗೂ ಒಕ್ಕಲಿಗ ಮತಗಳ ಮೇಲೆ ಬಿಜೆಪಿ ಕಣ್ಣು ಇಟ್ಟಿದ್ದು, ರಾಮನ ಹೆಸರಿನಲ್ಲಿ ಮತ ಪಡೆಯಲು ಯೋಜನೆ ರೂಪಿಸಿದೆ. ಇದಕ್ಕೆ ಪೂರಕವಾಗಿ ರಾಮನಗರದ ರಾಮದೇವರ ಬೆಟ್ಟದ ಅಭಿವೃದ್ಧಿಗೆ ಭರ್ಜರಿ ಸಿದ್ದತೆ ನಡೆಸಿದ್ದು,ಅಯೋಧ್ಯೆಯ ರಾಮಮಂದಿರ ದಿಂದ ಪವಿತ್ರ ಮೃತ್ತಿಕೆ ತಂದು ದೇವಸ್ಥಾನ ಜೀರ್ಣೋದ್ಧಾರ ಮಾಡಲಾಗುತ್ತಿದೆ.
ಯೋಗಿ ಎಂಟ್ರಿ :
ಇದರ ಚಾಲನೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ಕರೆಸಲು ತಯಾರಿ ನಡೆಸಲಾಗಿದೆ. ಹೀಗಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ಅವರನ್ನು ಆಹ್ವಾನಿಸಿರುವ ಸಚಿವ ಅಶ್ವಥ್ ನಾರಾಯಣ್,ರಾಮನಗರ ರೇಷ್ಮೆ,ಶಲ್ಯ, ಒಂದು ಬೆಳ್ಳಿಯ ಇಟ್ಟಿಗೆಯನ್ನು ಆಯೋಧ್ಯೆಯ ರಾಮಮಂದಿರಕ್ಕೆ ನೀಡಿದ್ದಾರೆ.
ಇದನ್ನೂ ಓದಿ : “ಯಡಿಯೂರಪ್ಪನವರನ್ನು ಬಿಜೆಪಿ ಲೆಕ್ಕಕ್ಕೆ ಇಟ್ಟುಕೊಂಡಿಲ್ಲ”
ನಿನ್ನೆ ಉತ್ತರ ಪ್ರದೇಶದ ಲಖನೌ ನಲ್ಲಿ ಭೇಟಿ ಮಾಡಿ ಆಹ್ವಾನ ನೀಡಿ ಬಂದಿರುವ ಸಚಿವ ಅಶ್ವಥ್ ನಾರಾಯಣ್, ದೇವಸ್ಥಾನದ ಜೀರ್ಣೋದ್ಧಾರ ಮಾಡಿ, ಪವಿತ್ರ ಸ್ಥಳ ಹಾಗೂ ಪ್ರವಾಸಿ ಸ್ಥಳವನ್ನಾಗಿ ಮಾಡಿಸಿ, ಹಿಂದೂ ಕೇಂದ್ರಸ್ಥಾನ ಮಾಡಲು ತಯಾರಿ ನಡೆಸಿದ್ದಾರೆ.
ಈ ಮೂಲಕ ಹಳೆ ಮೈಸೂರು ಭಾಗದಲ್ಲಿ ಹಿಂದು ಮತಗಳ ಸೆಳೆಯಲು ಮೆಗಾ ಪ್ಲಾನ್ ಹಾಕಿದ್ದು, ಈಗಾಗಲೇ ಬೃಹತ್ ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ಪವಿತ್ರ ಮೃತ್ತಿಕೆ ಅಭಿಯಾನ ಮಾಡಿದ್ದರು. ಇದೀಗ ಅದೇ ಮಾದರಿಯಲ್ಲೇ ಉತ್ತರ ಪ್ರದೇಶದ ಅಯೋಧ್ಯೆಯಿಂದ ಪವಿತ್ರ ಮೃತ್ತಿಕೆ ತಂದು ರಾಮನ ದೇವಸ್ಥಾನ ಜೀರ್ಣೋದ್ಧಾರ ಮಾಡಲು ತಯಾರಿ ನಡೆಸಿದ್ದಾರೆ.
ಇದನ್ನೂ ಓದಿ : Winter Health Tips : ಚಳಿಗಾಲದಲ್ಲಿ ಹೆಚ್ಚಾಗುತ್ತಂತೆ ಹೃದಯಾಘಾತ : ಅಪೋಲೋ ಆಸ್ಪತ್ರೆ ವೈದ್ಯರ ಸಲಹೆ
ರಾಮನಗರ ಜಿಲ್ಲೆಯ ರಾಮನಗರದೇವರ ಬೆಟ್ಟದಲ್ಲಿರುವ ರಾಮನ ದೇವಸ್ಥಾನ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೂಚನೆ ಮೇರೆಗೆ ಯೋಗಿ ಆದಿತ್ಯ ನಾಥ್ ಗೆ ಆಹ್ವಾನ ನೀಡಲಾಗಿದೆ. ಚುನಾವಣೆಗೂ ಮುನ್ನವೇ ಪವಿತ್ರ ಮೃತ್ತಿಕೆಯ ಕಾರ್ಯಕ್ಕೆ ಯೋಗಿ ರಿಂದ ಚಾಲನೆ ಕೊಡಿಸಲು ಸಿದ್ಧತೆ ನಡೆಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.