ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯವರು ಅಹಂಕಾರದಲ್ಲಿ ಸರ್ಕಾರ ನಡೆಸುತ್ತಿದ್ದಾರೆ ಎಂದು ಹೇಳುವ ಮೂಲಕ ವಿಧಾನಸಭೆ ಅಧಿವೇಶನವನ್ನು ಮೂರು ದಿನಕ್ಕೆ ಸೀಮಿತಗೊಳಿಸಿರುವ ಸಿಎಂ ಯಡಿಯೂರಪ್ಪ ನಡೆಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರೋಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗುಂಡೂರಾವ್, ವಿಪಕ್ಷಗಳ ಅಧಿಕಾರ ಮೊಟಕು ಮಾಡುವುದು, ನಾವು ಹೇಳಿದ್ದೇ ಆಗಬೇಕು ಎಂಬ ದಾಷ್ಟ್ಯ ಬಿಜೆಪಿಯವರದ್ದು. ಕೇಂದ್ರದಲ್ಲೂ ಇದೇ ರೀತಿಯಲ್ಲಿ ಆಡಳಿತ ನಡೆಯುತ್ತಿದೆ. ಅಧಿವೇಶನವನ್ನು ಮೂರೇ ದಿನ ಯಾಕೆ ಕರೆದಿದ್ದು? ಪ್ರವಾಹ ಹಾಗೂ ಬರದ ಬಗ್ಗೆ ಚರ್ಚೆಯಾಗಬೇಕು. ಆದರೆ  ಸರ್ಕಾರದ ನಡೆ ಬೇಸರ ತರಿಸುತ್ತಿದೆ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.


ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಮೇಲೆ ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ಏಜೆನ್ಸಿಯನ್ನ ಬಳಸಿಕೊಂಡು ದಾಳಿ ಮಾಡಿಸಿದೆ.  ಪ್ರತಿಪಕ್ಷಗಳನ್ನು ಮುಗಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದನ್ನು ಜನರು ಎಂದಿಗೂ ಒಪ್ಪುವುದಿಲ್ಲ.  ನಡೆಯುತ್ತಿದೆ. ಜನ ಇದನ್ನ ಯಾವತ್ತೂ ಒಪ್ಪುವುದಿಲ್ಲ ಎಂದು ಹೇಳಿದರು.