ರಾಷ್ಟ್ರಧ್ವಜ ಬದಲಿಸುವುದು ಕಾಂಗ್ರೆಸ್ ಅಜೆಂಡಾ, ಸಾಕ್ಷಿ ಇಲ್ಲಿದೆ ನೋಡಿ: ಬಿಜೆಪಿ
ರಾಷ್ಟ್ರ ಧ್ವಜವೇ ಇರದಿದ್ದ ಸ್ಥಂಭದಲ್ಲಿ, ರಾಷ್ಟ್ರ ಧ್ವಜವನ್ನು ಇಳಿಸಿ ಕೇಸರಿ ಧ್ವಜ ಹಾರಿಸಲಾಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಿದ್ದು ತಿರಂಗಕ್ಕೆ ಮಾಡಿದ ಅವಮಾನವಲ್ಲವೇ? ಅಂತಾ ಬಿಜೆಪಿ ಪ್ರಶ್ನಿಸಿದೆ.
ಬೆಂಗಳೂರು: ರಾಷ್ಟ್ರಧ್ವಜಕ್ಕೆ ಅಗೌರವ(Insult to National Flag)ವಿಚಾರವಾಗಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. #ದೇಶದ್ರೋಹಿಕಾಂಗ್ರೆಸ್ ಹ್ಯಾಶ್ ಟ್ಯಾಗ್ ಬಳಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ರಾಷ್ಟ್ರಧ್ವಜ ಬದಲಾಯಿಸುವುದು ಕಾಂಗ್ರೆಸ್ ಪಕ್ಷದ ಹಿಡನ್ ಅಜೆಂಡಾ’ ಎಂಬ ಗಂಭೀರ ಆರೋಪ ಮಾಡಿದೆ.
‘ರಾಷ್ಟ್ರ ಧ್ವಜ(National Flag) ಬದಲಾಯಿಸುವುದು ಕಾಂಗ್ರೆಸ್ ಪಕ್ಷದ ಹಿಡನ್ ಅಜೆಂಡಾ ಎಂಬುದಕ್ಕೆ ಇಲ್ಲಿ ಸಾಕ್ಷಿ ಇದೆ ನೋಡಿ. ತಿರಂಗ ಧ್ವಜದಲ್ಲಿ ಕಾಂಗ್ರೆಸ್ ಚಿಹ್ನೆ ಹಾಕಿದ್ದಾರೆ. ಹಾಗಾದರೆ ದೇಶದ್ರೋಹಿಗಳು ಯಾರು? ರಾಷ್ಟ್ರ ಧ್ವಜವನ್ನು ಕೆಳಗಿಳಿಸಿ ಕೇಸರಿ ಧ್ವಜ ಹಾರಿಸಿದ್ದಾರೆ ಎಂದು ಡಿಕೆಶಿ ಸುಳ್ಳು ಪ್ರಚಾರ ನಡೆಸಿದರು. ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಅವರು ಒಂದು ಹೆಜ್ಜೆ ಮುಂದೆ ಹೋಗಿ ರಾಷ್ಟ್ರಧ್ವಜದಲ್ಲಿನ ಅಶೋಕ ಚಕ್ರವನ್ನೇ ಪಲ್ಲಟಗೊಳಿಸಿ ಕಾಂಗ್ರೆಸ್ ಚಿಹ್ನೆ ಹಾಕಿದ್ದಾರೆ. ಇದಕ್ಕಿಂತ ದೊಡ್ಡ ಬೇರೆ ದೇಶದ್ರೋಹ ಬೇರೇನಿದೆ?’ ಅಂತಾ ಬಿಜೆಪಿ(BJP) ಪ್ರಶ್ನಿಸಿದೆ.
ಅಹಿಂದ ನಾಯಕರ ಏಳಿಗೆ ಸಹಿಸದ ಸಿದ್ದರಾಮಯ್ಯರಿಂದ ಕುಟುಂಬ ರಾಜಕಾರಣ: ಬಿಜೆಪಿ
‘ರಾಷ್ಟ್ರ ಧ್ವಜವನ್ನು ಕಾಂಗ್ರೆಸ್ ಧ್ವಜವಾಗಿ ಪರಿವರ್ತಿಸಲು ಹೊರಟಿರುವ ಕಾಂಗ್ರೆಸ್ಸಿಗರಿಗೆ ಏನನ್ನಬೇಕು!? ಡಿಕೆಶಿ(DK Shivakumar)ಅವರ ಸಂಬಂಧಿ ಡಾ.ರಂಗನಾಥ್ ಅವರು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡುತ್ತಿದ್ದಾರೆ. ಸಚಿವರ ಹೇಳಿಕೆ ಹಿಡಿದುಕೊಂಡು ಕಲಾಪಕ್ಕೆ ಅಡ್ಡಿ ಮಾಡಿದ ಕಾಂಗ್ರೆಸ್ಸಿಗರು ಇದಕ್ಕೇನು ಹೇಳುತ್ತಾರೆ?’ ಅಂತಾ ಟ್ವೀಟ್ ಮಾಡಿದೆ.
ಹಿಜಾಬ್ ತೆಗೆದು ಪಾಠ ಮಾಡಲು ಉಪನ್ಯಾಸಕಿ ನಕಾರ, ಕೆಲಸಕ್ಕೆ ರಾಜೀನಾಮೆ
‘ಹಿಜಾಬ್ ವಿವಾದ ನ್ಯಾಯಾಲಯದ ಮೆಟ್ಟಿಲೇರುವ ಹಿಂದೆ ಕಾಂಗ್ರೆಸ್ ಪಕ್ಷ(Congress Party)ದ ಶ್ರಮವಿದೆ. ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳೇ ಹಿಜಾಬ್ ಪರವಾಗಿ ನ್ಯಾಯಾಲಯಕ್ಕೆ ಅರ್ಜಿಯ ಮೇಲೆ ಅರ್ಜಿ ಸಲ್ಲಿಸುತ್ತಿದ್ದಾರೆ. ಕಾಂಗ್ರೆಸ್ ಹಿಜಾಬ್ ಪರವಾಗಿ ಇರುವುದಕ್ಕಿಂತ ಹೆಚ್ಚಾಗಿ ಕುಂಕುಮ, ಬಳೆ, ಹೂವು ಮುಡಿಯುವುದರ ವಿರುದ್ದವಿದೆ. ಹಿಜಾಬ್ ಪರವಾಗಿ ಕೆಪಿಸಿಸಿ ಕಚೇರಿಯಿಂದಲೇ ಸೂಚಿತವಾಗಿರುವ ವ್ಯಕ್ತಿಗಳು ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದ್ದಾರೆ. ಹಿಜಾಬ್ ಧರಿಸಲು ಅವಕಾಶ ಇಲ್ಲವಾದರೆ, ಹಿಂದೂ ಧರ್ಮೀಯರು ಕೂಡ ಬಳೆ, ಹೂವು, ಕುಂಕುಮ ಇಡಬಾರದಂತೆ! ಹಿಂದೂ ಧರ್ಮ ಈ ನೆಲದ ಸಂಸ್ಕೃತಿ, ಅದನ್ನೇ ಇಂದು ಕಾಂಗ್ರೆಸ್ ವಿರೋಧಿಸುತ್ತಿದೆ’ ಅಂತಾ ಬಿಜೆಪಿ ಕಿಡಿಕಾರಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.