ಬೆಂಗಳೂರು : ಹಿಜಾಬ್ ವಿವಾದ ( Hijab Controversy)ಸದ್ಯಕ್ಕೆ ಅಂತ್ಯ ಕಾಣುವಂತೆ ಕಾಣುತ್ತಿಲ್ಲ. ಇದೀಗ ಉಪನ್ಯಾಸಕರೊಬ್ಬರು (English Lecturer) ಹಿಜಾಬ್ ಇಲ್ಲದೆ ಪಾಠ ಮಾಡುವುದು ಸರಿಯಲ್ಲ ಎಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹಿಜಾಬ್ ಕಳಚಿ ಪಾಠ ಮಾಡುವುದರಿಂದ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಹೇಳಿ, ಜೈನ್ ಪಿಯು ಕಾಲೇಜಿನ ಉಪನ್ಯಾಸಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಧಾರ್ಮಿಕ ಉಡುಗೆಯನ್ನು ತೊಡುವಂತಿಲ್ಲ :
ಹಿಜಾಬ್ ವಿವಾದದ ಪ್ರಕರಣದ ವಿಚಾರಣೆ ಹೈಕೋರ್ಟ್‌ನಲ್ಲಿ (Karnataka High Court) ನಡೆಯುತ್ತಿದೆ. ಈ ಮಧ್ಯೆ, ಹಿಜಾಬ್ ಸೇರಿದಂತೆ ಯಾವುದೇ ರೀತಿಯ ಧಾರ್ಮಿಕ ಉಡುಗೆ ಅಥವಾ ಬಟ್ಟೆಗಳನ್ನು ಧರಿಸದಂತೆ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ. ವಿವಾದದ ಹಿನ್ನೆಲೆಯಲ್ಲಿ ಫೆಬ್ರವರಿ 28 ರವರೆಗೆ ಬೆಂಗಳೂರಿನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಉಡುಪಿಯ ಕಾಲೇಜಿನಲ್ಲಿ ಮೊದಲು ಹಿಜಾಬ್ ವಿವಾದ (Hijab Contraversy) ಆರಂಭವಾಯಿತು. ಅಂದಿನಿಂದ, ಹಿಜಾಬ್ ಅನ್ನು ಬೆಂಬಲಿಸಿ ಮತ್ತು ವಿರೋಧಿಸಿ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ (Five state election)ನಡೆಯುತ್ತಿರುವುದರಿಂದ ಈ ವಿಚಾರ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : ಅಹಿಂದ ನಾಯಕರ ಏಳಿಗೆ ಸಹಿಸದ ಸಿದ್ದರಾಮಯ್ಯರಿಂದ ಕುಟುಂಬ ರಾಜಕಾರಣ: ಬಿಜೆಪಿ
ಹೆಚ್ಚುವರಿ ಪೊಲೀಸ್ ಪಡೆ ನಿಯೋಜನೆ :
ಇಡೀ ವಿವಾದ ಶುರುವಾದ ಮಹಾತ್ಮ ಗಾಂಧಿ ಸ್ಮಾರಕ ಕಾಲೇಜನ್ನು ಕಳೆದ 10 ದಿನಗಳಿಂದ ಮುಚ್ಚಲಾಗಿತ್ತು. ಈಗ ಪರೀಕ್ಷೆಯ ಕಾರಣದಿಂದ ಕಾಲೇಜನ್ನು ತೆರೆಯಲಾಗಿದೆ. ಸದ್ಯ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಥಳದಲ್ಲಿ ಪರಿಸ್ಥಿತಿ ಸಹಜವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಉಡುಪಿ ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ ತಿಳಿಸಿದ್ದಾರೆ.
ಸಿಎಂ ಬೊಮ್ಮಾಯಿ ಹೇಳಿದ್ದೇನು ?
ಇದೇ ವೇಳೆ ಹಿಜಾಬ್ ವಿವಾದದ ನಡುವೆಯೇ ವಿಧಾನಸಭೆಯಲ್ಲೂ ಕೋಲಾಹಲ ಎದ್ದಿದೆ. ಆದರೆ, ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನ (Karnataka High Court) ಮಧ್ಯಂತರ ಆದೇಶಕ್ಕೆ ತಮ್ಮ ಸರ್ಕಾರ ಬದ್ಧವಾಗಿರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸ್ಪಷ್ಟಪಡಿಸಿದ್ದಾರೆ. ಗುರುವಾರ, ಕಾಂಗ್ರೆಸ್ ಶಾಸಕರು ವಿಧಾನಸಭೆಯಲ್ಲಿ ಅಹೋ ರಾತ್ರಿ ಧರಣಿ ನಡೆಸಿದ್ದಾರೆ. ಕೇಸರಿ ಧ್ವಜಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗೆ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : BS Yediyurappa : ಕಾಂಗ್ರೆಸ್ ನಾಯಕರ ಮನ ಒಲಿಕೆ ಯತ್ನ ವಿಫಲ ; ನಾಳೆ ಮತ್ತೆ ಸಂದಾನ ಸಭೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.