ಬೆಂಗಳೂರು: ಪಠ್ಯಪುಸ್ತಕಗಳ ಮೂಲಕ ಮಕ್ಕಳಲ್ಲಿ ಬಿತ್ತಿದ್ದ ಸುಳ್ಳನ್ನು ತೆಗೆದರೆ ವಿರೋಧವೇಕೆ? ಎಂದು ಕಾಂಗ್ರೆಸ್‍ಗೆ ಬಿಜೆಪಿ ಪ್ರಶ್ನಿಸಿದೆ. #ಶಿಕ್ಷಣವಿರೋಧಿಕಾಂಗ್ರೆಸ್‌ ಹ್ಯಾಶ್ ಟ್ಯಾಗ್ ಬಳಸಿ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಪಠ್ಯಪುಸ್ತಕ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡಿದೆ.


COMMERCIAL BREAK
SCROLL TO CONTINUE READING

‘ಕಂದಾಯ ದಾಖಲೆಯಲ್ಲಿ ಕನ್ನಡವನ್ನು ತೆಗೆದು ಪರ್ಶಿಯನ್ ಭಾಷೆ ಹೇರಿದ್ದ ಟಿಪ್ಪು ಸುಲ್ತಾನನನ್ನು ಕನ್ನಡ ಪ್ರೇಮಿ ಎಂದು ಬಿಂಬಿಸಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ‌ ಸಲ್ಲುತ್ತದೆ. ಈ ರೀತಿ ಪಠ್ಯಪುಸ್ತಕಗಳ ಮೂಲಕ ಮಕ್ಕಳಲ್ಲಿ ಬಿತ್ತಿದ್ದ ಸುಳ್ಳನ್ನು ತೆಗೆದರೆ ವಿರೋಧವೇಕೆ?’ ಎಂದು ಪ್ರಶ್ನಿಸಿದೆ.


ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ MES ಪುಂಡರ ಕಿರಿಕ್!


‘ತನ್ನ ಖಡ್ಗದ ಮೇಲೆ ಕಾಫೀರರನ್ನು ಕೊಲ್ಲಿ ಎಂದು  ಬರೆಸಿಕೊಂಡಿದ್ದ ಮತಾಂಧ ಟಿಪ್ಪು, ಮುಸಲ್ಮಾನೇತರ ಧರ್ಮದ ಜನರ ಬಗ್ಗೆ ಜಿಹಾದಿ ಮನಸ್ಥಿತಿ ಹೊಂದಿದ್ದ. ಕೊಡಗು, ಮೇಲುಕೋಟೆ, ನೆತ್ತರಕೆರೆಯಲ್ಲಿ ನರಮೇಧ ನಡೆಸಿದ್ದ. ಅಂದು ಚಿಮ್ಮಿದ ರಕ್ತದ ಕಲೆ ಇನ್ನೂ ಹಾಗೇ ಇದೆ. ಹೀಗಿರುವಾಗಲೂ ಟಿಪ್ಪುವನ್ನು ವೀರನೆಂದು ಬೋಧಿಸಬೇಕೇ? ಸರ್ವಕಾಲಕ್ಕೂ ವೀರವನಿತೆ, ಕರ್ನಾಟಕದ ಹೆಮ್ಮೆ ಒನಕೆ  ಓಬವ್ವ. ಕರ್ನಾಟಕದ ವೀರ ನಾರಿಯನ್ನು ಹೇಡಿಯಂತೆ ಟಿಪ್ಪುವಿನ ತಂದೆ ಹೈದರಾಲಿಯ ಸೇನೆ ಕೊಂದಿತು. ಕಾಂಗ್ರೆಸ್ ನಾಯಕರು ಟಿಪ್ಪು ಮತ್ತು ಮನೆತನವನ್ನು ಶ್ರೇಷ್ಠವೆಂದು ಪಠ್ಯಪುಸ್ತಕದಲ್ಲಿ ಬಿಂಬಿಸಿ, ಒನಕೆ ಓಬವ್ವನ ಸಾಮರ್ಥ್ಯವನ್ನು ಕಡೆಗಣಿಸಿತು’ ಎಂದು ಬಿಜೆಪಿ ಕಿಡಿಕಾರಿದೆ.


ಕುರುಬರ ಸಮಾವೇಶಕ್ಕೆ ಸಂಬಂಧಿಸಿದಂತೆ ನಡು ರಸ್ತೆಯಲ್ಲಿಯೇ ಎರಡು‌ ಬಣಗಳ ನಡುವೆ ಕಾದಾಟ


ಸ್ವಾಮಿ ವಿವೇಕಾನಂದ ಅವರು, ಭಾರತ ಕಂಡ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿ ಎನಿಸಿಕೊಂಡವರು. ಶಿಕಾಗೋದಲ್ಲಿ ನಡೆದ ಸರ್ವಧರ್ಮಸಮ್ಮೇಳನದ ಮೂಲಕ ಇಡೀ ಜಗತ್ತನ್ನೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದರು. ಇಂತಹ ಮಹಾ ಪುರುಷನ ಬಗ್ಗೆ ಮಕ್ಕಳು ಓದಬಾರದು ಎಂಬ ನಿಲುವು ತೆಗೆದುಕೊಂಡಿದ್ದು ಯಾರು?’ ಎಂದು ಕಾಂಗ್ರೆಸ್‍ಗೆ ಬಿಜೆಪಿ ಪ್ರಶ್ನಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.