DK Sivakumar : 'ಒಂದು ಬಿಜೆಪಿಯವರಿಗೆ ಶರಣಾಗಬೇಕು, ಇಲ್ಲ ಅವರ ಜೊತೆ ಸೇರಿಕೊಳ್ಳಬೇಕು'

ಕಾಪಿ ಬರಲಿ ದೇಶದಲ್ಲಿ ಕಾನೂನಿದೆ. ದೇಶದಲ್ಲಿ ಸತ್ಯ ಧರ್ಮ ಇದೆ. ತಪ್ಪು ಮಾಡಿಲ್ಲ ಅನ್ನೋದು ರಾಜ್ಯಕ್ಕೆ ಗೊತ್ತಿದೆ. ಅವರ ಪಾರ್ಟಿನೇ ಬಿಡಲ್ಲ, ನಮ್ಮನ್ನ ಬಿಡ್ತಾರಾ? ಅಹಮದ್ ಪಟೇಲ್ ಗೆ ಸಹಾಯ ಮಾಡಿದ್ದಕ್ಕೆ ಇದೆಲ್ಲ. ಪೋಲಿಟಿಕಲಿ ಎಲ್ಲಾ ಅಸ್ತ್ರ ಉಪಯೋಗಿಸ್ತಿದ್ದಾರೆ ಎಂದು ಹೇಳಿದರು. 

Written by - Zee Kannada News Desk | Last Updated : May 26, 2022, 05:42 PM IST
  • ಇಡಿಯವರು ಚಾರ್ಜ್ ಶೀಟ್ ಫೈಲ್ ಮಾಡಿದ್ದಾರೆ
  • ತಪ್ಪು ಮಾಡಿಲ್ಲ ಅನ್ನೋದು ರಾಜ್ಯಕ್ಕೆ ಗೊತ್ತಿದೆ
  • ಚಾರ್ಜ್ ಶೀಟ್ ನಲ್ಲಿ ಹೊಸದಾಗಿ ಸೃಷ್ಟಿಸಲು ಸಾಧ್ಯವಿಲ್ಲ
DK Sivakumar : 'ಒಂದು ಬಿಜೆಪಿಯವರಿಗೆ ಶರಣಾಗಬೇಕು, ಇಲ್ಲ ಅವರ ಜೊತೆ ಸೇರಿಕೊಳ್ಳಬೇಕು' title=

ಬೆಂಗಳೂರು : ಇಡಿಯವರು ಚಾರ್ಜ್ ಶೀಟ್ ಫೈಲ್ ಮಾಡಿದ್ದಾರೆ. ಇದು ಮಾಧ್ಯಮಗಳಿಂದ ಗೊತ್ತಾಗಿದೆ. ನಮಗೆ ಇನ್ನೂ ಕಾಪಿ ಸಿಕ್ಕಿಲ್ಲ. 6 ತಿಂಗಳಲ್ಲಿ ಚಾರ್ಜ್ ಶೀಲ್ ಫೈಲ್ ಮಾಡ್ತಾರೆ. ಬಹಳ ದೊಡ್ಡ ತನಿಖೆ ಮಾಡಿದ್ದಾರೆ. ಅವರು ಹೊಸದಾಗಿ ಸೃಷ್ಠಿ ಮಾಡಲು ಸಾಧ್ಯ ವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆ ಶಿವಕುಮಾರ್, ಕಾಪಿ ಬರಲಿ ದೇಶದಲ್ಲಿ ಕಾನೂನಿದೆ. ದೇಶದಲ್ಲಿ ಸತ್ಯ ಧರ್ಮ ಇದೆ. ತಪ್ಪು ಮಾಡಿಲ್ಲ ಅನ್ನೋದು ರಾಜ್ಯಕ್ಕೆ ಗೊತ್ತಿದೆ. ಅವರ ಪಾರ್ಟಿನೇ ಬಿಡಲ್ಲ, ನಮ್ಮನ್ನ ಬಿಡ್ತಾರಾ? ಅಹಮದ್ ಪಟೇಲ್ ಗೆ ಸಹಾಯ ಮಾಡಿದ್ದಕ್ಕೆ ಇದೆಲ್ಲ. ಪೋಲಿಟಿಕಲಿ ಎಲ್ಲಾ ಅಸ್ತ್ರ ಉಪಯೋಗಿಸ್ತಿದ್ದಾರೆ ಎಂದು ಹೇಳಿದರು. 

ಇದನ್ನೂ ಓದಿ : RSS ಮೆಚ್ಚಿಸಲು ಬಿಜೆಪಿ ಸರ್ಕಾರ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ: ಕಾಂಗ್ರೆಸ್

ಇಡಿಯವರು ನಮಗೆ ಫರ್ದರ್ ನೋಟಿಸ್ ಕೊಡ್ತಾರೆ. ಆಗ ಖಂಡಿತ ಪರಿಶಿಲಿಸುತ್ತೇವೆ. ನಾವು ಕಾನೂನು ಪರಿಪಾಲನೆ ಮಾಡುವವರು. ಅವರು ರಾಜಕೀಯವಾಗಿ ಎದುರಿಸಲು ಆಗ್ತಿಲ್ಲ. ಅದಕ್ಕೆ ಹೀಗೆಲ್ಲಾ ಮಾಡ್ತಿದ್ದಾರೆ. ಒಂದು ಅವರಿಗೆ ಶರಣಾಗ ಬೇಕು. ಇಲ್ಲ ಅವರ ಜೊತೆ ಸೇರಿಕೊಳ್ಳ ಬೇಕು.  
ಐ ವಿಶ್ ದೆಮ್ ಆಲ್ ದಿ ಬೆಸ್ಟ್ ಎಂದು ಹೇಳಿದರು.

ಚಾರ್ಜ್ ಶೀಟ್ ನಲ್ಲಿ ಹೊಸದಾಗಿ ಸೃಷ್ಟಿಸಲು ಸಾಧ್ಯವಿಲ್ಲ. ನ್ಯಾಯ ನೀತಿ ಸತ್ಯ ಧರ್ಮದಲ್ಲಿ ನಂಬಿಕೆ ಇದೆ. ನಾನು ತಪ್ಪು ಮಾಡಿಲ್ಲ ಎಂಬುದು ನನಗೆ ಗೊತ್ತಿದೆ. ಬಿಜೆಪಿಗೆಯಾರಿಂದ ರಾಜಕೀಯ ತೊಂದರೆಯಿದೆ. ಅಂತವರನ್ನ ನಿರ್ನಾಮ ಮಾಡುವ ಕೆಲಸ ಆಗ್ತಿದೆ. ಅವರ ಜೊತೆ ಹೋಗ್ಬೇಕು,ಇಲ್ಲ ಶರಣಾಗಬೇಕು. ನಾನು ಎಲ್ಲವನ್ನೂ ಫೇಸ್ ಮಾಡ್ತೇನೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯ ಮತ್ತು ಡಿಕೆಶಿ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ: ಬಿಜೆಪಿ ಟೀಕೆ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News