ಬೆಂಗಳೂರು: ಕಾಂಗ್ರೆಸ್‌ ಇಷ್ಟು ವರ್ಷ ದೇಶದಲ್ಲಿ ಗೆದ್ದಿದ್ದೇ ಕೋಮುವಾದ & ಬಡತನದ ಕಾರಣದಿಂದ ಅಂತಾ ಬಿಜೆಪಿ ಟೀಕಿಸಿದೆ. ಈ ಬಗ್ಗೆ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿನ ದರ್ಗಾ ಸ್ಥಳಾಂತರದ ಬಗ್ಗೆ ಸಿದ್ದರಾಮಯ್ಯನವರು ಅಬ್ಬರಿಸಿ ಬೊಬ್ಬಿರಿದಿದ್ದೆಲ್ಲವೂ ಜನರನ್ನು ನಂಬಿಸಲು ಆಡುವ “ಪ್ರಜಾಪ್ರಭುತ್ವದ ನಾಟಕ’’. ಏಕೆಂದರೆ ಅದೇ 13 ದೇವಸ್ಥಾನಗಳು ಮತ್ತು 1 ಚರ್ಚ್ ಹಾಗೂ 1 ದರ್ಗಾವನ್ನು ತೆರವುಗೊಳಿಸಲು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಗುರುತಿಸಿದ್ದರು’ ಎಂದು ಹೇಳಿದೆ.


COMMERCIAL BREAK
SCROLL TO CONTINUE READING

‘ಈ ದರ್ಗಾ ಹುಬ್ಬಳ್ಳಿ–ಧಾರವಾಡಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಪಕ್ಕದಲ್ಲಿತ್ತು. ರಸ್ತೆ ಅಗಲೀಕರಣಕ್ಕೆ ಭೈರಿದೇವರಕೊಪ್ಪದ ದರ್ಗಾ ತೆರವಿಗೆ ಹೈಕೋರ್ಟ್ ಆದೇಶ ನೀಡಿತ್ತು. ಇದಕ್ಕನುಸಾರವಾಗಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವು ಕಾರ್ಯಾಚರಣೆಯಾಗಿದ್ದೇ ವಿನಾ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದ ಆದೇಶದಿಂದಲ್ಲ’ವೆಂದು ಬಿಜೆಪಿ ಟ್ವೀಟ್ ಮಾಡಿದೆ.


ಇದನ್ನೂ ಓದಿ: BMTC ಪ್ರಯಾಣಿಕರ ಗಮನಕ್ಕೆ : ಬಸ್​ನಲ್ಲಿ ಪ್ರಯಾಣಿಸಲು ಮಾಸ್ಕ್ ಕಡ್ಡಾಯ!


ʼನಿತ್ಯ ದುಡಿ ಸತ್ಯ ನುಡಿ ಸ್ವಲ್ಪ ಕುಡಿ ಮನೆಗೆ ನಡೆʼ : ಮದ್ಯ ಪ್ರಿಯರ ಸಂಘ ಉದ್ಘಾಟನೆಗೆ ಸಜ್ಜು..!


‘ಕಾಂಗ್ರೆಸ್‌ ಇಷ್ಟು ವರ್ಷ ದೇಶದಲ್ಲಿ ಗೆದ್ದಿದ್ದೇ ಕೋಮುವಾದ ಮತ್ತು ಬಡತನದ ಕಾರಣದಿಂದ. ಈಗ ಬಿಜೆಪಿ ಸರ್ಕಾರದಲ್ಲಿ ಕೋಮುವಾದಕ್ಕೂ ಆಸ್ಪದವಿಲ್ಲ. ಬಡತನ ನಿವಾರಣೆ ಕ್ರಮದ ಜೊತೆಗೆ ಅಭಿವೃದ್ಧಿಯನ್ನೂ ನಮ್ಮ ರಾಜ್ಯ ಕಾಣುತ್ತಿದೆ. ರಾಜ್ಯವೇ ರಾಮರಾಜ್ಯವಾದರೆ, ಕಾಂಗ್ರೆಸ್ ಎಂಬ ರಾವಣರಿಗೆ ಜನಮನ್ನಣೆ ಸಿಗುವುದೇ? ಸಮಸ್ಯೆಯನ್ನು ಜೀವಂತವಾಗಿಡಬೇಕು ಹಾಗೂ ಅದನ್ನು ನಿವಾರಿಸುವುದು ಕಾಂಗ್ರಸ್ಸೇ ಎಂಬ ಭ್ರಮೆ ಹುಟ್ಟಿಸಬೇಕು ಎಂಬುದು ಕಾಂಗ್ರೆಸ್‍ನ ಮೂಲಮಂತ್ರ. ಇದಕ್ಕೆ ಸಂವಿಧಾನ, ನ್ಯಾಯಾಲಯವೇ ಅಡ್ಡಬಂದರೂ ಅದನ್ನು ದಾಟಿ ಹೋಗುತ್ತೇವೆಂಬುದು ಮಾಜಿ ಲಾಯರ್‌ ಸಿದ್ದರಾಮಯ್ಯನವರ ಮಾತಿನಲ್ಲಿ ಗೋಚರಿಸುತ್ತಿದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.