ಬೆಂಗಳೂರು: ವಕ್ಫ್‍ಗೆ ನೀಡಿರುವುದು ಕಾಂಗ್ರೆಸ್ ಆಸ್ತಿಯಲ್ಲ, ದೇಶದ ಆಸ್ತಿಯನ್ನು ಮರಳಿ ಪಡೆಯುತ್ತೇವೆ ಅಂತಾ ಬಿಜೆಪಿ ಕಿಡಿಕಾರಿದೆ. ಈ ಬಗ್ಗೆ ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.


COMMERCIAL BREAK
SCROLL TO CONTINUE READING

‘ವಕ್ಫ್‌ ಭೂಕಬಳಿಕೆಯಲ್ಲಿ ಕಾಂಗ್ರೆಸ್‌ ಕೈವಾಡವಿರುವುದು ಬೆಳಕಿನಷ್ಟೇ ಸತ್ಯ. ವಕ್ಫ್‌ ಮಂಡಳಿ ಇರುವುದು ಸಮುದಾಯದ ಅಭಿವೃದ್ಧಿಗೆ, ಆದರೆ ಕಾಂಗ್ರೆಸ್ ಅದನ್ನು ನಾಯಕರ ಅಭಿವೃದ್ಧಿಗೆ ಬಳಸಿಕೊಂಡಿರುವುದು ಈ ದೇಶದ ದುರಂತ. ಕಾಂಗ್ರೆಸ್ ಕೈಚಳಕದಿಂದ ವಕ್ಫ್ ಆಸ್ತಿ ‘ಕೈ’ ಪಾಲಾಗಿದೆ. ಬಾಂಧವರಿಗೆ ಬಂಧುಗಳಿಂದಲೇ ಮೋಸ’ವೆಂದು ಬಿಜೆಪಿ ಟೀಕಿಸಿದೆ.


ಸಹ ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣ, ಪಠ್ಯಪುಸ್ತಕ ನಿರ್ದೇಶಕ ಸೇರಿ ಐವರ ಬಂಧನ


‘ವೋಟಿಗಾಗಿ ಒಂದು ಸಮುದಾಯದ ಓಲೈಕೆ ರಾಜಕಾರಣ ಮಾಡಿಕೊಂಡೇ ಬಂದ ಕಾಂಗ್ರೆಸ್, ವಕ್ಫ್ ಹೆಸರಲ್ಲಿ ಅದೇ ಸಮುದಾಯದ ಜನರಿಗೆ ಮಕ್ಮಲ್ ಟೋಪಿ ಹಾಕಿ ಮೋಸ ಮಾಡಿದೆ’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.


ಕಾಂಗ್ರೆಸ್ ಪಾಲು ಎಷ್ಟು ಎಂಬ ಪ್ರಶ್ನೆಯನ್ನು ದೇಶದ ಜನ ಕೇಳುತ್ತಿದ್ದಾರೆ. ಕಾಂಗ್ರಸ್ಸಿಗರೇ ಇದಕ್ಕೆ ಉತ್ತರಿಸಿ’ ಅಂತಾ ಬಿಜೆಪಿ ಕುಟುಕಿದೆ.


ಕರ್ನಾಟಕ ಸೇರಿದಂತೆ 8 ರಾಜ್ಯಗಳಲ್ಲಿ ಪಿಎಫ್‌ಐ ನೆಲೆಗಳ ಮೇಲೆ ದಾಳಿ, ಹಲವರು ಅರೆಸ್ಟ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.