Illegal Teachers Recruitment: ಸಹ ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣ, ಪಠ್ಯಪುಸ್ತಕ ನಿರ್ದೇಶಕ ಸೇರಿ ಐವರ ಬಂಧನ

Illegal Teachers Recruitment : 2012-13ನೇ ಮತ್ತು 2014-15ನೇ ಸಾಲಿನ ಈ ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಠಾಣೆಯಲ್ಲಿ ಎರಡು ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿದ್ದವು.

Written by - Nitin Tabib | Last Updated : Sep 26, 2022, 11:23 PM IST
  • 2012-13 ಮತ್ತು 2014-15ನೇ ಸಾಲಿನ ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ (ಗ್ರೇಡ್‌-2) ಹಾಗೂ ದೈಹಿಕ ಶಿಕ್ಷಕರ (ಗ್ರೇಡ್‌-1) ನೇಮಕದಲ್ಲಿ ಅನರ್ಹ ಅಭ್ಯರ್ಥಿಗಳನ್ನು ಹಣ ಪಡೆದು ಕಾನೂನು ಬಾಹಿರವಾಗಿ ನೇಮಕಾತಿ ಮಾಡಿಕೊಳ್ಳಲಾಗಿತ್ತು.
  • ಈ ನೇಮಕಾತಿಯ ಬಳಿಕ, ನೇಮಕಗೊಂಡ ಅಭ್ಯರ್ಥಿಗಳಲ್ಲಿ ಕೆಲವು ಅಭ್ಯರ್ಥಿಗಳು ಕೆಲವೇ ವರ್ಷಗಳಲ್ಲಿ ಬಡ್ತಿ ಪಡೆದುಕೊಂಡಿದ್ದರು
Illegal Teachers Recruitment: ಸಹ ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣ, ಪಠ್ಯಪುಸ್ತಕ ನಿರ್ದೇಶಕ ಸೇರಿ ಐವರ ಬಂಧನ title=
Illegal Teachers Appointment

ಬೆಂಗಳೂರು: 2012-13ನೇ ಮತ್ತು 2014-15ನೇ ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿದಂತೆ ಮಹತ್ವದ ಮಾಹಿತಿಯೊಂದು ಪ್ರಕಟವಾಗಿದೆ. ಇದೀಗ ಬಂದ ಸುದ್ದಿಯ ಪ್ರಕಾರ, ಪ್ರಕರಣದಲ್ಲಿ ಪಠ್ಯಪುಸ್ತಕ ನಿರ್ದೇಶಕ ಸೇರಿದಂತೆ ಮತ್ತೆ ಐವರನ್ನು ಬಂಧಿಸಲಾಗಿದೆ. ಹೌದು, ಪ್ರಕರಣದಲ್ಲಿ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಗಳು ಸೇರಿದಂತೆ ಸಿಐಡಿ ಐವರನ್ನು ಬಂಧಿಸಿದೆ. ಇದಕ್ಕೂ ಮುನ್ನ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಓರ್ವ ಎಫ್ ಡಿ ಎ ಹಾಗೂ 15 ಶಿಕ್ಷಕರನ್ನು ಒಳಗೊಂಡಂತೆ ಒಟ್ಟು 16 ಜನರನ್ನು ಬಂಧಿಸಿದೆ. ಇವರೆಲ್ಲರ ವಿಚಾರಣೆಯ ವೇಳೆ ಇಡೀ ಪ್ರಕರಣ ರಾಜ್ಯಾದ್ಯಂತ ನಡೆದಿರುವುದು ಮುನ್ನೆಲೆಗೆ ಬಂದಿದೆ. 

ಈ ಐವರ ಬಂಧನದ ಬಳಿಕ ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖೆಯೇ 21ಕ್ಕೆ ಏರಿಕೆಯಾದಂತಾಗಿದೆ. ಬಂಧಿತರನ್ನು ಬೆಂಗಳೂರು ವಲಯದ ಸಮಗ್ರ ಶಿಕ್ಷಣ ಅಭಿಯಾನ ನಿರ್ದೇಶಕಿ ಗೀತಾ, ಪಠ್ಯಪುಸ್ತಕ ನಿರ್ದೇಶಕ ಮಾದೇಗೌಡ, ನಿವೃತ್ತ ಜಂಟಿ ನಿರ್ದೇಶಕ ಜಿ.ಆರ್.ಬಸವರಾಜು, ಕೆ.ರತ್ನಯ್ಯ, ಡಿ.ಕೆ. ಶಿವಕುಮಾರ್ ಎಂದು ಗುರುತಿಸಲಾಗಿದೆ. ಬಂಧನದ ಬಳಿಕ ಎಲ್ಲಾ ಆರೋಪಿಗಳನ್ನು ಸಿಐಡಿ ನಾಯಾಲಯಕ್ಕೆ ಹಾಜರುಪಡಿಸಿದ್ದು, ಅಕ್ಟೋಬರ್ 1 ರವರೆಗೆ ಅವರನ್ನು ಕಸ್ಟಡಿಗೆ ಒಪ್ಪಿಸಲಾಗಿದೆ.

ಇದನ್ನೂ ಓದಿ-ನವೆಂಬರ್ 1ರಂದು ʼಜೆಡಿಎಸ್ ಪಂಚರತ್ನ ಯಾತ್ರೆʼ ಆರಂಭ

2012-13ನೇ ಮತ್ತು 2014-15ನೇ ಸಾಲಿನ ಈ ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಠಾಣೆಯಲ್ಲಿ ಎರಡು ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿದ್ದವು.

ಇದನ್ನೂ ಓದಿ-ಪಕ್ಷದ ಕೆಲಸ ಮಾಡದೇ ನಿರ್ಲಕ್ಷ್ಯ ಮಾಡುವವರಿಗೆ ಜಾಗವಿಲ್ಲ : ಹೆಚ್.ಡಿ.ಕುಮಾರಸ್ವಾಮಿ

2012-13 ಮತ್ತು 2014-15ನೇ ಸಾಲಿನ ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ (ಗ್ರೇಡ್‌-2) ಹಾಗೂ ದೈಹಿಕ ಶಿಕ್ಷಕರ (ಗ್ರೇಡ್‌-1) ನೇಮಕದಲ್ಲಿ ಅನರ್ಹ ಅಭ್ಯರ್ಥಿಗಳನ್ನು ಹಣ ಪಡೆದು ಕಾನೂನು ಬಾಹಿರವಾಗಿ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಈ ನೇಮಕಾತಿಯ ಬಳಿಕ, ನೇಮಕಗೊಂಡ ಅಭ್ಯರ್ಥಿಗಳಲ್ಲಿ ಕೆಲವು ಅಭ್ಯರ್ಥಿಗಳು ಕೆಲವೇ ವರ್ಷಗಳಲ್ಲಿ ಬಡ್ತಿ ಪಡೆದುಕೊಂಡಿದ್ದರು ಮತ್ತು  ಐವರು ಅಧಿಕಾರಿಗಳೇ ನಕಲಿ ದಾಖಲೆ ಸೃಷ್ಟಿಸಿ ಅದಕ್ಕೆ ಸಹಿ ಹಾಕಿರುವುದು ಗಮನಕ್ಕೆ ಬಂದಿದೆ ಎಂದು ಸಿಐಡಿ ಮಾಹಿತಿ ನೀಡಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News