ಬಳ್ಳಾರಿ ‘ನವಶಕ್ತಿ ಸಮಾವೇಶ’ದ ಯಶಸ್ಸು ಕಾಂಗ್ರೆಸ್ ಪಕ್ಷಕ್ಕೆ ತಳಮಳ ಮೂಡಿಸಿದೆ: ಬಿಜೆಪಿ
BJP vs Congress: ಪರಿಶಿಷ್ಟರನ್ನು ಸಮಾಜದ ಮುಖ್ಯವಾಹಿನಿಗೆ ತರಲು ನ್ಯಾ.ನಾಗಮೋಹನ ದಾಸ್ ವರದಿ ನೀಡಿದ್ದರು. ಈ ವರದಿಯನ್ನು ಜಾರಿ ಮಾಡಲು ಕಾಂಗ್ರೆಸ್ ತಿಣುಕಾಡಿತು ಎಂದು ಬಿಜೆಪಿ ಟೀಕಿಸಿದೆ.
ಬೆಂಗಳೂರು: ಬಳ್ಳಾರಿಯಲ್ಲಿ ಹಮ್ಮಿಕೊಂಡಿದ್ದ ನವಶಕ್ತಿ ಸಮಾವೇಶದ ಅಭೂತಪೂರ್ವ ಯಶಸ್ಸು ಕಾಂಗ್ರೆಸ್ ಪಕ್ಷದೊಳಗೆ ತಳಮಳ ಮೂಡಿಸಿದೆ ಎಂದು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಸೋಮವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಇದರಿಂದ ಹತಾಶಗೊಂಡಿರುವ ಕಾಂಗ್ರೆಸ್ ತಾನೂ ಕೂಡ ಸಮಾವೇಶ ಮಾಡಲು ಮುಂದಾಗುತ್ತಿದೆ. ಇದು ಎಸ್‌ಸಿ/ಎಸ್‌ಟಿ ಸಮುದಾಯಗಳ ಕಲ್ಯಾಣಕ್ಕಾಗಿ ಬಿಜೆಪಿ ಮಾಡುತ್ತಿರುವ ಸಾರ್ಥಕ ಪ್ರಯತ್ನಗಳಿಗೆ ಸಂದ ಬಹುದೊಡ್ಡ ಜಯವಾಗಿದೆ’ ಎಂದು ಹೇಳಿದೆ.
‘ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿ ಪೂಜೆ ಪ್ರಧಾನವಾಗುತ್ತಿದೆ. ಸಿದ್ದರಾಮಯ್ಯನವರಿಗೆ 75 ವರ್ಷ ಪೂರೈಸುವ ಮುನ್ನವೇ ಶಕ್ತಿ ಪ್ರದರ್ಶನಕ್ಕಾಗಿ ಕಾಂಗ್ರೆಸ್ ಅಮೃತ ಮಹೋತ್ಸವ ಸಮಾವೇಶ ಮಾಡಿತ್ತು. ವ್ಯಕ್ತಿಗಳನ್ನು ಪೂಜಿಸುವ ಪಕ್ಷದಲ್ಲಿ ಸಮುದಾಯಗಳ ಕಲ್ಯಾಣ ಹೇಗೆ ಸಾಧ್ಯ? ಪರಿಶಿಷ್ಟರ ಸಮಸ್ಯೆಗಳು ಇವರಿಗೆ ಅರ್ಥವಾಗಲು ಹೇಗೆ ಸಾಧ್ಯ?’ ಎಂದು ಬಿಜೆಪಿ ಪ್ರಶ್ನಿಸಿದೆ.
ಯಾವ ಧರ್ಮವೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
‘ಪರಿಶಿಷ್ಟರನ್ನು ಸಮಾಜದ ಮುಖ್ಯವಾಹಿನಿಗೆ ತರಲು ನ್ಯಾ.ನಾಗಮೋಹನ ದಾಸ್ ವರದಿ ನೀಡಿದ್ದರು. ಈ ವರದಿಯನ್ನು ಜಾರಿ ಮಾಡಲು ಕಾಂಗ್ರೆಸ್ ತಿಣುಕಾಡಿತು. ಪರಿಶಿಷ್ಟರ ಏಳಿಗೆಗೆ ಏನೂ ಮಾಡದೇ, ಆ ಸಮುದಾಯವನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡ ಸಿದ್ದರಾಮಯ್ಯನವರು ಈಗ 'ಓಲೈಕೆ ಸಮಾವೇಶ'ಕ್ಕೆ ಕೈ ಹಾಕುತ್ತಿರುವುದು ಪರಮ ನಾಚಿಕೆಗೇಡಿನ ಸಂಗತಿ’ ಅಂತಾ ಬಿಜೆಪಿ ಟೀಕಿಸಿದೆ.
ಬಿಜೆಪಿ ಟೀಕಾಪ್ರಹಾರ ನಡೆಸಿದೆ.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಸೇರಿದ ಯು.ಬಿ. ಬಣಕಾರ್, ಶ್ರೀನಿವಾಸ್, ಮಲ್ಲಿಕಾರ್ಜುನ ರೋಣಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.