ಕಾಂಗ್ರೆಸ್ ಎಂಬ ಕಳೆಯನ್ನು ರಾಜ್ಯದ ಜನತೆ ನಾಶ ಮಾಡಲಿದ್ದಾರೆ: ಬಿಜೆಪಿ

Congress VS BJP: ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ದೇಶದ ಹಿತ ಕಾಯದೇ, ನಕಲಿ ಗಾಂಧಿ ಕುಟುಂಬದ ಹಿತ ಕಾಯುವುದರಲ್ಲಿ ಸಮಯ ಕಳೆಯುತ್ತಿತ್ತು ಎಂದು ಬಿಜೆಪಿ ಟೀಕಾಪ್ರಹಾರ ನಡೆಸಿದೆ.

Written by - Puttaraj K Alur | Last Updated : Nov 22, 2022, 01:16 PM IST
  • ತೋಟ, ಹೊಲ ಗದ್ದೆಗಳಲ್ಲಿ ಒಮ್ಮೊಮ್ಮೆ ಬೆಳೆಗಿಂತ ಕಳೆ ಹೆಚ್ಚಾಗುತ್ತದೆ, ಹಾಗಂತ ಕಳೆ ಬೆಳೆಸಲು ಸಾಧ್ಯವೇ?
  • ಟಿಕೆಟ್‌ಗೆ ಅರ್ಜಿ ಸಲ್ಲಿಸಿದಾಕ್ಷಣ ಅಧಿಕಾರಕ್ಕೆ ಬಂದೇ ಬಿಟ್ಟೆವು ಅನ್ನೋ ಹಗಲುಗನಸಿನಿಂದ ಕಾಂಗ್ರೆಸ್ ಹೊರಬರಬೇಕು
  • ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಎಂಬ ಕಳೆಯನ್ನು ರಾಜ್ಯದ ಜನತೆ ನಾಶ ಮಾಡಲಿದ್ದಾರೆ
ಕಾಂಗ್ರೆಸ್ ಎಂಬ ಕಳೆಯನ್ನು ರಾಜ್ಯದ ಜನತೆ ನಾಶ ಮಾಡಲಿದ್ದಾರೆ: ಬಿಜೆಪಿ title=
ಕಾಂಗ್ರೆಸ್ ವಿರುದ್ಧ ಬಿಜೆಪಿ ಟೀಕಾಪ್ರಹಾರ

ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಎಂಬ ಕಳೆಯನ್ನು ರಾಜ್ಯದ ಜನತೆ ನಾಶ ಮಾಡಲಿದ್ದಾರೆ ಎಂದು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ಬಿಜೆಪಿ, ‘ತೋಟ, ಹೊಲ ಗದ್ದೆಗಳಲ್ಲಿ ಒಮ್ಮೊಮ್ಮೆ ಬೆಳೆಗಿಂತ ಕಳೆ ಹೆಚ್ಚಾಗುತ್ತದೆ, ಹಾಗಂತ ಕಳೆ ಬೆಳೆಸಲು ಸಾಧ್ಯವೇ? ಟಿಕೆಟ್‌ಗೆ ಅರ್ಜಿ ಸಲ್ಲಿಸಿದಾಕ್ಷಣ ಅಧಿಕಾರಕ್ಕೆ ಬಂದೇ ಬಿಟ್ಟೆವು ಎನ್ನುವ ಹಗಲುಗನಸಿನಿಂದ ಕಾಂಗ್ರೆಸ್ ಹೊರಬರಬೇಕು’ ಅಂತಾ ಕುಟುಕಿದೆ.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ದೇಶದ ಹಿತ ಕಾಯದೇ, ನಕಲಿ ಗಾಂಧಿ ಕುಟುಂಬದ ಹಿತ ಕಾಯುವುದರಲ್ಲಿ ಸಮಯ ಕಳೆಯುತ್ತಿತ್ತು. ಕಾಂಗ್ರೆಸ್ಸಿನ ಧಮ್ ತಾಕತ್ತನ್ನು ನೋಡಿದ ಮೇಲೆಯೆ ದೇಶದ ಜನರು ಮೂಲೆಗೆ ತಳ್ಳಿದ್ದಾರೆ. ಕಾಂಗ್ರೆಸ್ ಧಮ್ ಎಂದರೆ ಭ್ರಷ್ಟಾಚಾರ. ಕಾಂಗ್ರೆಸ್ ತಾಕತ್ತು ಎಂದರೆ ನಕಲಿ ಗಾಂಧಿ ಕುಟುಂಬ’ ಎಂದು ಬಿಜೆಪಿ ಟೀಕಾಪ್ರಹಾರ ನಡೆಸಿದೆ.

ಇದನ್ನೂ ಓದಿ: ಪಂಪ್ ವೆಲ್ ಫ್ಲೈ ಓವರ್ ಬಳಿ ಬ್ಲಾಸ್ಟ್ ಗೆ ಸಂಚು ರೂಪಿಸಿದ್ದ ಶಾರಿಕ್ .!

ಸಿದ್ದರಾಮಯ್ಯಗೆ ಈಗ ಕರ್ಮ ವಾಪಸಾಗಿದೆ!

ಯಾವ ಸಮುದಾಯದ ಮತಗಳು ಎಷ್ಟಿವೆ ಎಂದು ಸರ್ವೇ ಮಾಡಿಸಿಯೇ  ಮಾಜಿ ಸಿಎಂ ಸಿದ್ದರಾಮಯ್ಯನವರು ಕೋಲಾರದಲ್ಲಿ ನಿಲ್ಲೋ ಪ್ಲಾನ್ ಮಾಡಿದ್ರು. ಆದರೆ ಈಗ ಅದೇ ಸಮುದಾಯದ ಪ್ರಮುಖರು ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡ್ತಾ ಇದ್ದಾರೆ. ಈ ಹಿಂದೆ ಇಂಥ ಅಸ್ತ್ರಗಳನ್ನು ಸ್ವಪಕ್ಷೀಯರ ಮೇಲೆ ಪ್ರಯೋಗಿಸಿಯೇ ಅಧಿಕಾರಕ್ಕೆ ಬಂದಿದ್ದ ಸಿದ್ದರಾಮಯ್ಯಗೆ ಈಗ ಕರ್ಮ ವಾಪಸಾಗಿದೆ’ ಅಂತಾ ಬಿಜೆಪಿ ತನ್ನ ಮತ್ತೊಂದು ಟ್ವೀಟ್‍ನಲ್ಲಿ ಟೀಕಿಸಿದೆ.

‘ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಏನ್ ಮಾಡಿದ್ರು? ಈಗ ಬಸವರಾಜ ಬೊಮ್ಮಾಯಿ ಸರ್ಕಾರ ಎಸ್‌ಸಿ/ಎಸ್‌ಟಿ ಮೀಸಲಾತಿ ಕೊಟ್ಟ ಮೇಲೆ ಕೈ, ಬಾಯಿ ಮುಚ್ಕೊಂಡಿದೆ. ಬಿಜೆಪಿ ಸರ್ಕಾರ ಏನು ಹೇಳಿತೋ ಹಾಗೆ ನಡೆದುಕೊಂಡಿದೆ. ಡಬಲ್ ಎಂಜಿನ್ ಸರ್ಕಾರ ಇರೋ ತನಕ ಕಾಂಗ್ರೆಸ್‌ನ ಬೂಟಾಟಿಕೆ ನಡೆಯಲ್ಲ’ ಅಂತಾ ಬಿಜೆಪಿ ಟೀಕಿಸಿದೆ.

ಇದನ್ನೂ ಓದಿViral Video: ಲಾರಿ ಡಿಕ್ಕಿ- ಬೈಕ್ ಸವಾರ ಸ್ಥಳದಲ್ಲೇ ಸಾವು, ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News