ಪಿಎಸ್ಐ ಹಗರಣದ ಮೂಲ ಕೆಪಿಸಿಸಿ ಭ್ರಷ್ಟಾಧ್ಯಕ್ಷ & ಖರ್ಗೆ ಕುಟುಂಬದ ಸುತ್ತ ತಿರುಗುತ್ತಿದೆ: ಬಿಜೆಪಿ
ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಹಾಗೂ ವರ್ತನೆ ನೋಡಿದರೆ ಈ ಹಗರಣದ ಬಗ್ಗೆ ಅಪಾರ ಜ್ಞಾನ ಹಾಗೂ ಸಂಬಂಧ ಹೊಂದಿರುವಂತೆ ಕಾಣುತ್ತಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಬೆಂಗಳೂರು: 545 ಪಿಎಸ್‍ಐ ಹುದ್ದೆಗಳ ನೇಮಕಾತಿ ಹಗರಣದ ನಂಟು ಕಾಂಗ್ರೆಸ್ ಜೊತೆ ಅಕ್ಷಯವಾಗುತ್ತಿದೆ. ಹಗರಣದ ಮೂಲ ಕೆಪಿಸಿಸಿಯ #ಭ್ರಷ್ಟಾಧ್ಯಕ್ಷ & ಖರ್ಗೆ ಕುಟುಂಬದ ಸುತ್ತ ತಿರುಗುತ್ತಿದೆ ಎಂದು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ರಾಜಕೀಯ ಅಸ್ಥಿರತೆ ಮೂಡಿಸಲು ಟೂಲ್ ಕಿಟ್ ಮಾದರಿಯಲ್ಲಿ ತಂತ್ರ ಹೆಣೆದ ಕಾಂಗ್ರೆಸ್ಸಿಗರು ಈಗ ಅದರೊಳಗೆ ತಾವೇ ಬಿದ್ದು ಬೇಸಗೆಯಲ್ಲೂ ಗಡ ಗಡ ನಡುಗುತ್ತಿದ್ದಾರೆ’ ಎಂದು ಕುಟುಕಿದೆ.
‘ಆರೋಪಿ ದಿವ್ಯಾ ಹಾಗರಗಿ ತನಿಖಾಧಿಕಾರಿಗಳಿಗೆ ನೀಡಿರುವ ಹೇಳಿಕೆ ಪ್ರಕಾರ ರುದ್ರೇಗೌಡ ಪಾಟೀಲ್ ಸಹೋದರರಿಂದ ಹಣ ಪಡೆಯಲಾಗಿದೆ. ಹಾಗಾದರೆ ಹಗರಣದ ಹಿಂದಿರುವ ಶಕ್ತಿಗಳು ಕಾಂಗ್ರೆಸ್ ನಾಯಕರಲ್ಲವೇ? ಕ್ವೀನ್ಸ್ ರಸ್ತೆಯಲ್ಲಿರುವ #ಭ್ರಷ್ಟಾಧ್ಯಕ್ಷ ರ ಅಕ್ರಮ ಹಣದ ಬ್ಯಾಂಕ್‌ಗೆ ಈ ಹಗರಣದ ಹಣ ತಲುಪಿರಬಹುದೇ?’ ಎಂದು ಬಿಜೆಪಿ ಪ್ರಶ್ನಿಸಿದೆ.
"ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಸರ್ಕಾರದ ಪಾತ್ರವಿದೆ"
‘ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಹಾಗೂ ವರ್ತನೆ ನೋಡಿದರೆ ಈ ಹಗರಣದ ಬಗ್ಗೆ ಅಪಾರ ಜ್ಞಾನ ಹಾಗೂ ಸಂಬಂಧ ಹೊಂದಿರುವಂತೆ ಕಾಣುತ್ತಿದೆ. ಪ್ರಿಯಾಂಕ್ ಅವರೇ ಸಿಐಡಿ ನೋಟಿಸ್‌ಗೆ ನೇರವಾಗಿ ಉತ್ತರಿಸಲು ಅಳುಕೇಕೆ? ಹಗರಣದಲ್ಲಿ ನಿಮ್ಮ ‘ಪಾಲು’ ಹಾಗೂ ಭಾಗ ಏನೆಂಬುದು ಬಯಲಾಗಬಹುದೆಂಬ ಭಯ ನಿಮ್ಮನ್ನು ಕಾಡುತ್ತಿದೆಯೇ?’ ಎಂದು ಟ್ವೀಟ್ ಮಾಡಿದೆ.
ಗಡಿ ವಿವಾದ: 'ಅಜಿತ್ ಪವಾರ್ ಮಿದುಳು ಹಿಮ್ಮುಖವಾಗಿ ಚಲಿಸುತ್ತಿರಬಹುದು'-ಹೆಚ್.ಡಿ.ಕುಮಾರಸ್ವಾಮಿ
ಕಾಂಗ್ರೆಸ್ ನಾಯಕರ ವರ್ತನೆಯೇ ಅನುಮಾನ ಸೃಷ್ಟಿಸುತ್ತಿದೆ. ಸಿದ್ದರಾಮಯ್ಯ ಪರೀಕ್ಷೆ ರದ್ದುಪಡಿಸಿದ್ದು ಸರಿ ಎನ್ನುತ್ತಿದ್ದರೆ, ಭ್ರಷ್ಟಾಧ್ಯಕ್ಷ ಡಿಕೆಶಿ, ಪ್ರಿಯಾಂಕ್ ಖರ್ಗೆ ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರೇ ನೀವೆಲ್ಲ ಒಂದೆಡೆ ಕೂತು ಮೊದಲು ಒಮ್ಮತದ ನಿರ್ಧಾರ ಕೈಗೊಳ್ಳಿ!’ ಎಂದು ಹೇಳಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.