ಬೆಂಗಳೂರು: 545 ಪಿಎಸ್‍ಐ ಹುದ್ದೆಗಳ ನೇಮಕಾತಿ ಅಕ್ರಮದ ಕುರಿತು ಆರಂಭದಿಂದಲೂ ತನಿಖಾಧಿಕಾರಿಯಂತೆ ವರ್ತಿಸಿದ ಪ್ರಿಯಾಂಕ್ ಖರ್ಗೆ ವಿಚಾರಣೆಗೆ ಕರೆದಾಗ ಸೊಬಗನಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ್ ಫ್ಯಾಮಿಲಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
‘ಸರ್ಕಾರಿ ಅಧಿಕಾರಿ ಸಮನ್ಸ್ ಕಳುಹಿಸಿದರೆ ಜವಾಬ್ದಾರಿಯುತ ನಾಗರಿಕನಾಗಿ, ಜನಪ್ರತಿನಿಧಿಯಾಗಿ ಅಲ್ಲಿಗೆ ಬಂದು ಪ್ರಿಯಾಂಕ್ ಖರ್ಗೆ ಉತ್ತರಿಸಬೇಕಿತ್ತು. ಪ್ರಕರಣದ ಬಗ್ಗೆ ತಿಳಿದಿರುವ ಮಾಹಿತಿಯನ್ನು ಹಂಚಿಕೊಳ್ಳಿ ಎಂದಷ್ಟೇ ಹೇಳಿದ್ದು, ನೀವೇಕೆ ‘ನನ್ನನ್ನೇ ಆರೋಪಿಯಂತೆ ಬಿಂಬಿಸುತ್ತಿದ್ದಾರೆʼ ಎಂದು ಗೋಳಾಡುತ್ತಿದ್ದೀರಿ?’ ಅಂತಾ ಬಿಜೆಪಿ ಪ್ರಶ್ನಿಸಿದೆ.
ನೇಮಕಾತಿ ಅಕ್ರಮದ ಕುರಿತಂತೆ ಆರಂಭದಿಂದಲೂ ತನಿಖಾಧಿಕಾರಿಯಂತೆ ವರ್ತಿಸಿದ @PriyankKharge ಅವರು ಈಗ ವಿಚಾರಣೆಗೆ ಕರೆದಾಗ ಸೊಬಗನಂತೆ ವರ್ತಿಸುತ್ತಿದ್ದಾರೆ.
ಇದೆಲ್ಲಾ ಅಕ್ರಮದಲ್ಲಿ ಭಾಗಿಯಾಗಿರುವ ಖರ್ಗೆ ಮನೆತನದ ಅತ್ಯಾಪ್ತರನ್ನು ರಕ್ಷಿಸಲು ಮಾಡುತ್ತಿರುವ ನವರಂಗಿ ಆಟವಲ್ಲದೆ ಮತ್ತೇನು?#CONgressPSIToolkit
— BJP Karnataka (@BJP4Karnataka) April 26, 2022
ಇದನ್ನೂ ಓದಿ: PSI ಅಭ್ಯರ್ಥಿಗಳ ವಿಚಾರಣೆ ಆದ್ಮೇಲೆ ಸಿಐಡಿ ಯಾರಿಗೆ ಖೆಡ್ಡಾ ತೋಡಿದೆ ಗೊತ್ತಾ..?
‘ಮಾಧ್ಯಮದ ಮುಂದೆ ಹೇಳಿಕೆ ನೀಡಿ ಹಿಟ್ & ರನ್ ಮಾಡಬಹುದು ಎಂದು ಪ್ರಿಯಾಂಕ್ ಖರ್ಗೆ ಅಂದುಕೊಂಡಿದ್ದರು. ಆದರೆ ಪ್ರಕರಣ ತನ್ನ ಬುಡಕ್ಕೆ ಬರುತ್ತಿದ್ದಂತೆ ಪಲಾಯನ ಮಾಡುತ್ತಿದ್ದಾರೆ. ಸರ್ಕಾರ ಆಳವಾದ ತನಿಖೆ ಮಾಡದು ಎಂದುಕೊಂಡಿದ್ದವರು ಈಗ ಬೆದರಿದ್ದಾರೆ. ಏಕೆಂದರೆ ಖರ್ಗೆ ಕುಟುಂಬದ ಆತ್ಯಾಪ್ತರೇ ಇಲ್ಲಿ ಆರೋಪಿಗಳಾಗಿದ್ದಾರೆ’ ಎಂದು ಕುಟುಕಿದೆ.
ಸರ್ಕಾರಿ ಅಧಿಕಾರಿ ಸಮನ್ಸ್ ಕಳುಹಿಸಿದರೆ, ಜವಾಬ್ದಾರಿಯುತ ನಾಗರಿಕನಾಗಿ, ಜನಪ್ರತಿನಿಧಿಯಾಗಿ ಅಲ್ಲಿಗೆ ಬಂದು @PriyankKharge ಉತ್ತರಿಸಬೇಕಿತ್ತು.
ಪ್ರಕರಣದ ಬಗ್ಗೆ ತಿಳಿದಿರುವ ಮಾಹಿತಿಯನ್ನು ಹಂಚಿಕೊಳ್ಳಿ ಎಂದಷ್ಟೇ ಹೇಳಿದ್ದು,
ನೀವೇಕೆ ʼನನ್ನನ್ನೇ ಆರೋಪಿಯಂತೆ ಬಿಂಬಿಸುತ್ತಿದ್ದಾರೆʼ ಎಂದು ಗೋಳಾಡುತ್ತಿದ್ದೀರಿ?#CONgressPSIToolkit
— BJP Karnataka (@BJP4Karnataka) April 26, 2022
‘ನೇಮಕಾತಿ ಅಕ್ರಮದ ಕುರಿತಂತೆ ಆರಂಭದಿಂದಲೂ ತನಿಖಾಧಿಕಾರಿಯಂತೆ ವರ್ತಿಸಿದ ಪ್ರಿಯಾಂಕ್ ಖರ್ಗೆಯವರು ಈಗ ವಿಚಾರಣೆಗೆ ಕರೆದಾಗ ಸೊಬಗನಂತೆ ವರ್ತಿಸುತ್ತಿದ್ದಾರೆ. ಇದೆಲ್ಲಾ ಅಕ್ರಮದಲ್ಲಿ ಭಾಗಿಯಾಗಿರುವ ಖರ್ಗೆ ಮನೆತನದ ಅತ್ಯಾಪ್ತರನ್ನು ರಕ್ಷಿಸಲು ಮಾಡುತ್ತಿರುವ ನವರಂಗಿ ಆಟವಲ್ಲದೆ ಮತ್ತೇನು? ತಾಕತ್ತಿದ್ದರೆ ನಮಗೆ ನೋಟಿಸ್ ನೀಡಿ ಎಂದು ಸವಾಲೆಸೆದಿರುವ ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ವಿರುದ್ದವಿರುವ ಪ್ರಕರಣಗಳು ಎಷ್ಟು ಗೊತ್ತೇ? ಎಷ್ಟು ಪ್ರಕರಣದಲ್ಲಿ ಬೇಲ್ ಪಡೆದಿದ್ದೀರಿ, ಯಾವ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದೀರಿ ಎಂದು ವಿವರಿಸುವಿರಾ? ನೀವು ತಿಹಾರ್ ಜೈಲು ವಾಸ ಮಾಡಿದ್ದು ಸ್ವಾತಂತ್ರ್ಯ ಹೋರಾಟಕ್ಕಾಗಿಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ: 5 ವರ್ಷಗಳಲ್ಲಿ 55 ಲಕ್ಷ ಉದ್ಯೋಗ ಸೃಷ್ಟಿ: ಅಶ್ವತ್ಥನಾರಾಯಣ
‘ಸಿಆರ್‌ಪಿಸಿ ಪ್ರಕಾರ ತನಿಖಾಧಿಕಾರಿಗಳಿಗೆ ಯಾವುದೇ ಪ್ರಕರಣದ ತನಿಖೆ ನಡೆಸುವಾಗ ದಾಖಲೆ ಹಾಗೂ ಸಾಕ್ಷಿಯ ಮೂಲ ಕೇಳುವ ಅಧಿಕಾರವಿದೆ. ಸಿಐಡಿ ಅಧಿಕಾರಿಗಳು ನಿಯಮದ ಪ್ರಕಾರ ನೋಟಿಸ್ ನೀಡಿದ್ದಾರೆ. ಅಧಿಕಾರಿಗಳ ಈ ನಡೆಯನ್ನು ತಪ್ಪು ಎಂದು ಹೇಳಲು ಕಾಂಗ್ರೆಸ್ಸಿಗರೇನು ಸಂವಿಧಾನ ಹಾಗೂ ಕಾನೂನಿಗೆ ಅತೀತರೇ?’ ಎಂದು ಬಿಜೆಪಿ ಟೀಕಿಸಿದೆ.
ತಾಕತ್ತಿದ್ದರೆ ನಮಗೆ ನೋಟಿಸ್ ನೀಡಿ ಎಂದು ಸವಾಲೆಸೆದಿರುವ @DKShivakumar ಅವರೇ, ನಿಮ್ಮ ವಿರುದ್ದವಿರುವ ಪ್ರಕರಣಗಳು ಎಷ್ಟು ಗೊತ್ತೇ?
ಎಷ್ಟು ಪ್ರಕರಣದಲ್ಲಿ ಬೇಲ್ ಪಡೆದಿದ್ದೀರಿ, ಯಾವ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದೀರಿ ಎಂದು ವಿವರಿಸುವಿರಾ?
ನೀವು ತಿಹಾರ್ ಜೈಲು ವಾಸ ಮಾಡಿದ್ದು ಸ್ವಾತಂತ್ರ್ಯ ಹೋರಾಟಕ್ಕಾಗಿಯೇ?#CONgressPSIToolkit
— BJP Karnataka (@BJP4Karnataka) April 26, 2022
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.