ಕಾಂಗ್ರೆಸ್ & ಪಾಕಿಸ್ತಾನ ಎರಡರದ್ದೂ ಚಿಂತನೆಗಳು ಬಹುತೇಕ ಒಂದೇ ಆಗಿದೆ: ಬಿಜೆಪಿ ಆರೋಪ
BJP vs Congress: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಡಿ ಉಗ್ರರು ಮತ್ತು ಉಗ್ರರ ತವರಾದ ಪಾಕಿಸ್ತಾನವು ಹೆದರಿದೆ. ಸರ್ಜಿಕಲ್ ದಾಳಿ, ಯೋಧರಿಗೆ ಬಲ ತುಂಬಿದ್ದಕ್ಕೆ ಪಾಕ್ಗೆ ನಿದ್ದೆಯೂ ಬರುತ್ತಿಲ್ಲವೆಂದು ಬಿಜೆಪಿ ಟೀಕಿಸಿದೆ.
ಬೆಂಗಳೂರು: ಕಾಂಗ್ರೆಸ್ ಮತ್ತು ಪಾಕಿಸ್ತಾನ ಎರಡರದ್ದೂ ಚಿಂತನೆಗಳು ಬಹುತೇಕ ಒಂದೇ ಆಗಿದೆ ಎಂದು ಕರ್ನಾಟಕ ಬಿಜೆಪಿ ಆರೋಪಿಸಿದೆ. #AntiNationalCongress ಹ್ಯಾಶ್‍ಟ್ಯಾಗ್ ಬಳಸಿ ಭಾನುವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
‘ಈ ಹಿಂದೆ ಪಾಕ್ ಪ್ರಧಾನಿ ನವಾಜ್ ಷರೀಫ್ ಭಾರತದ ಅಂದಿನ ಪ್ರಧಾನಿ ಮನ್‌ಮೋಹನ್ ಸಿಂಗರನ್ನು ‘ದೇಹಾತಿ ಔರತ್’ ಎಂದು ನಿಂದಿಸಿದಾಗ ಮೊದಲು ಪಾಕಿಸ್ಥಾನಕ್ಕೆ ಎಚ್ಚರಿಕೆ ರವಾನಿಸಿದ್ದು ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿಯವರು. ಈ ರೀತಿಯ ದೇಶಹಿತದ ಬದ್ಧತೆ ಇಲ್ಲದ್ದಕ್ಕೆ ಕಾಂಗ್ರೆಸ್ ಇಂದು ನೆಲಕಚ್ಚಿರುವುದು!’ ಎಂದು ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ: ಗ್ರಾಮ ವಾಸ್ತವ್ಯ ಮಾಡುವ ಹಳ್ಳಿಗಳ ಅಭಿವೃದ್ಧಿಗೆ 1 ಕೋಟಿ ರೂ.ಗಳನ್ನು ಮಂಜೂರು: ಸಿಎಂ ಬೊಮ್ಮಾಯಿ
Janardhana Reddy: ಡಿ.25ಕ್ಕೆ ಜನಾರ್ದನ ರೆಡ್ಡಿಯಿಂದ ಹೊಸ ಪಕ್ಷ ಘೋಷಣೆ..?
‘ಉಗ್ರನ ಪರ ಮಾತಾಡಿದ ಡಿಕೆಶಿಗೆ ಬೆಂಬಲ ಕೊಡುವುದಕ್ಕೆ ಓಡೋಡಿ ಬರುವ ಸಿದ್ದರಾಮಯ್ಯ, ಪಾಕಿಸ್ತಾನ ಭಾರತದ ಪ್ರಧಾನಿ ಮೋದಿಯವರನ್ನು ನಿಂದಿಸುವಾಗ ತುಟಿಬಿಚ್ಚುವುದಿಲ್ಲವೇಕೆ? ಕಾಂಗ್ರೆಸ್ ಪಾಕಿಸ್ತಾನವನ್ನು ವಿರೋಧಿಸುತ್ತಿಲ್ಲ. ಏಕೆಂದರೆ, ಪಾಕ್ ಮತ್ತು ಕಾಂಗ್ರೆಸ್‌ನ ಮನಸ್ಥಿತಿ ಎರಡೂ ಒಂದೇ! ಭಾರತದಲ್ಲಿರುವ ಕೆಲ ಪಾಕ್ ಪ್ರೇಮಿಗಳ ಮತಗಳಿಗಾಗಿ ಅವರು ಈ ಹಂತಕ್ಕೆ ಕುಸಿದಿರುವುದು ದುರಂತ! ಇದು ಗಾಂಧೀಜಿ, ಅಂಬೇಡ್ಕರ್‌ರ ಚಿಂತನೆಗಳಿಗೆ ಮಾಡಿದ ಅಪಮಾನ’ವೆಂದು ಬಿಜೆಪಿ ಕಿಡಿಕಾರಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.