ತನ್ವೀರ್ ಸೇಠ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಡಿಕೆಶಿಯವರಿಗೆ ಭಯವೇ?: ಬಿಜೆಪಿ
ಶಿಕ್ಷಣ ಸಚಿವನಾಗಿರುವಾಗಲೇ ಅನೈತಿಕ ‘ಚಿತ್ರ’ ನೋಡಿದ ತನ್ವೀರ್ ಸೇಠ್ ಅವರಿಂದ ರಾಜ್ಯದ ಜನತೆ ನೈತಿಕ ಶಿಕ್ಷಣದ ಬಗ್ಗೆ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಅಂತಾ ಬಿಜೆಪಿ ಕಿಡಿಕಾರಿದೆ.
ಬೆಂಗಳೂರು: ಭಗವದ್ಗೀತೆ(Bhagavad Gita)ಗೆ ವಿರೋಧ ವ್ಯಕ್ತಪಡಿಸಿರುವ ಶಾಸಕ ತನ್ವೀರ್ ಸೇಠ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಅವರಿಗೆ ಭಯವೇ? ಎಂದು ಬಿಜೆಪಿ ಪ್ರಶ್ನಿಸಿದೆ. #ಹಿಂದೂವಿರೋಧಿಕಾಂಗ್ರೆಸ್ ಹ್ಯಾಶ್ ಟ್ಯಾಗ್ ಬಳಸಿ ಬಿಜೆಪಿ ಸೋಮವಾರ ಟ್ವೀಟ್ ಮಾಡಿದೆ.
‘ಬಹುಸಂಖ್ಯಾತ ಹಿಂದೂಗಳ ಅಸ್ಮಿತೆಯನ್ನು ಕೆಣಕುವುದಕ್ಕಾಗಿ ಕಾಂಗ್ರೆಸ್ ಪಕ್ಷ ಅಸ್ತಿತ್ವದಲ್ಲಿರುವುದೇ? ಶಿಕ್ಷಣ ಸಚಿವನಾಗಿರುವಾಗಲೇ ಅನೈತಿಕ ‘ಚಿತ್ರ’ ನೋಡಿದ ತನ್ವೀರ್ ಸೇಠ್(Tanveer Sait) ಅವರಿಂದ ರಾಜ್ಯದ ಜನತೆ ನೈತಿಕ ಶಿಕ್ಷಣದ ಬಗ್ಗೆ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ’ ಅಂತಾ ಬಿಜೆಪಿ ಕಿಡಿಕಾರಿದೆ.
ಸಿದ್ದರಾಮಯ್ಯನವರೇ ಕಾಂಗ್ರೆಸ್ ಪಕ್ಷದಲ್ಲಿ ಎಷ್ಟು ಬಣವಿದೆ?: ಬಿಜೆಪಿ
‘ಭಗವದ್ಗೀತೆಗೆ ವಿರೋಧ(Bhagavad Gita in Schools) ವ್ಯಕ್ತಪಡಿಸಿರುವ ತನ್ವೀರ್ ಸೇಠ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಡಿಕೆಶಿಯವರಿಗೆ ಭಯವೇ? ಭಗವದ್ಗೀತೆಗೆ ವಿರೋಧವಿಲ್ಲವೆನ್ನುವ ಸಿದ್ದರಾಮಯ್ಯನವರಿಗೆ ತನ್ವೀರ್ ಸೇಠ್ ವಿರುದ್ಧ ಮಾತನಾಡುವ ಧೈರ್ಯವಿಲ್ಲವೇ? ತೋರಿಕೆಯ ಹಿಂದುತ್ವವನ್ನು ಕಾಂಗ್ರೆಸ್ ಪಕ್ಷ ನಿಲ್ಲಿಸುವುದೆಂದು?’ ಅಂತಾ ಬಿಜೆಪಿ ಪ್ರಶ್ನಿಸಿದೆ.
Siddaramaiah) ಕೂಡ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಯನ್ನು ವಿರೋಧಿಸಿದ್ದರು. ಕಾಂಗ್ರೆಸ್ ನಾಯಕರ ಈ ನಡೆಗೆ ಬಿಜೆಪಿ ಟೀಕಾಪ್ರಹಾರ ನಡೆಸಿದೆ.
ಇದನ್ನೂ ಓದಿ: ದುಬಾರಿ ವೈದ್ಯಕೀಯ ಶಿಕ್ಷಣ.. ಪರ್ಯಾಯ ಕ್ರಮಗಳ ಬಗ್ಗೆ ಕೇಂದ್ರ ಗಂಭೀರ ಚಿಂತನೆ: ಸಿಎಂ ಬಸವರಾಜ ಬೊಮ್ಮಾಯಿ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.