Shamanur Shivashankarappa : 'ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಾನೇ ಮುಖ್ಯಮಂತ್ರಿ'

ಮುಂದೆ ಪಕ್ಷ ಅಧಿಕಾರಕ್ಕೆ ನಾನು  ಮುಖ್ಯಮಂತ್ರಿ ಆಕಾಂಕ್ಷಿ ಎಂದು ಮಾಜಿ ಸಚಿವ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. 

Written by - Channabasava A Kashinakunti | Last Updated : Mar 20, 2022, 06:56 PM IST
  • ಮುಂದೆ ಪಕ್ಷ ಅಧಿಕಾರಕ್ಕೆ ನಾನು ಮುಖ್ಯಮಂತ್ರಿ ಆಕಾಂಕ್ಷಿ
  • ದಾವಣಗೆರೆ ದಕ್ಷಿಣದಿಂದ ಮುಂದೆ ಸ್ಪರ್ಧಿಸೋಕೆ ನನ್ನ ಬಳಿ ಹಣ ಇಲ್ವಾ?
  • ಶಿವಕುಮಾರ್- ಸಿದ್ದರಾಮಯ್ಯ ಜೊತೆ ನಂದೂ ಸ್ಪರ್ಧೆ
Shamanur Shivashankarappa : 'ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಾನೇ ಮುಖ್ಯಮಂತ್ರಿ' title=

ದಾವಣಗೆರೆ : ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಾನೇ ಮುಖ್ಯಮಂತ್ರಿ. ದಾವಣಗೆರೆ ದಕ್ಷಿಣದಿಂದ ಮುಂದೆ ಸ್ಪರ್ಧಿಸೋಕೆ ನನ್ನ ಬಳಿ ಹಣ ಇಲ್ವಾ?, ನನ್ನ ಬಳಿ ಶಕ್ತಿ ಇಲ್ವಾ..? ಮುಂದೆ ಪಕ್ಷ ಅಧಿಕಾರಕ್ಕೆ ಬಂದ್ರೆ ನಾನು ಮುಖ್ಯಮಂತ್ರಿ ಆಕಾಂಕ್ಷಿ ಎಂದು ಮಾಜಿ ಸಚಿವ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. 

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಶಾಮನೂರು ಶಿವಶಂಕರಪ್ಪ(Shamanur Shivashankarappa), ಡಿಕೆ ಶಿವಕುಮಾರ್- ಸಿದ್ದರಾಮಯ್ಯ ಜೊತೆ ನಂದೂ ಸ್ಪರ್ಧೆ ಇದೆ. ದಾವಣಗೆರೆ ಉತ್ತರದಿಂದ ಸ್ಪರ್ಧೆ ಮಾಡೋ ಬಗ್ಗೆ ಸಿಎಂ ಬೊಮ್ಮಾಯಿ ನನ್ನ ಜೊತೆ ಮಾತನಾಡಿಲ್ಲ. ಅವರು ವಿರೋಧ ಪಕ್ಷದವರು ನನ್ನ ಜೊತೆ ಯಾಕೆ ಮಾತಾಡ್ತಾರೆ. ಮುಂದಿನ ತಿಂಗಳು ಏಪ್ರೀಲ್ 16ಕ್ಕೆ ಮೊಮ್ಮಗಳ ಮದುವೆಗೆ ಸಿಎಂ ಬರುತ್ತಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಪಠ್ಯದಲ್ಲಿ ಭಗವದ್ಗೀತೆ: ತನ್ವೀರ್ ಸೇಠ್ ಹೇಳಿಕೆಗೆ ಬಿಜೆಪಿ ತಿರುಗೇಟು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News