ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಪರ್ಸೆಂಟೇಜ್ ವ್ಯವಹಾರ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಪರ್ಸೆಂಟೇಜ್ ವ್ಯವಹಾರ ನಡೆಯುತ್ತಿತ್ತು. ಸಿದ್ದರಾಮಯ್ಯನವರ ಪಕ್ಕದಲ್ಲೇ ಪರ್ಸೆಂಟೇಜ್ ವ್ಯವಹಾರ ಮಾಡ್ತಾ ಇದ್ರು. ಅದಕ್ಕೆ ನಾನು ಕಾಂಗ್ರೆಸ್ ಬಿಟ್ಟು ಬಂದೆ ಎಂದು ಜೆಡಿಎಸ್ ರಾಜ್ಯಾಧ‍್ಯಕ್ಷ ಸಿಎಂ ಇಬ್ರಾಹಿಂ ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಇನ್ನು ಡೈರಿ ಪ್ರಕರಣ ಸಂಬಂಧ ಜೆಡಿಎಸ್‌ ಎಂಎಲ್‌ಸಿ ಗೋವಿಂದರಾಜು ಸ್ಪಷ್ಟನೆ ನೀಡಿದ್ದು, ಕಪ್ಪದ ಸತ್ಯ ಒಪ್ಪಿಕೊಂಡಿದ್ದಾರೆ. ಗೋವಿಂದರಾಜು ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಕಾಂಗ್ರೆಸ್ ನಾಯಕರ ಹೆಸರು ಕೋಡ್ ರೀತಿಯಲ್ಲಿ ಉಲ್ಲೇಖವಾಗಿದ್ದರ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ಕೇಳಿದ್ದರು. ಐಟಿ ಅಧಿಕಾರಿಗಳಿಗೆ ಉತ್ತರಿಸಿರುವ ಗೋವಿಂದರಾಜು, ‘ಕೋಡ್‍ವರ್ಡ್‍ಗಳಲ್ಲಿದ್ದ ಹೆಸರು ಕಾಂಗ್ರೆಸ್ ನಾಯಕರದ್ದಾಗಿದ್ದು, ತನ್ನ ವೈಯಕ್ತಿಕ ಲೆಕ್ಕಾಚಾರಗಳಿಗೆ ಬರೆದುಕೊಂಡಿದ್ದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.


5 ವರ್ಷಗಳಲ್ಲಿ 55 ಲಕ್ಷ ಉದ್ಯೋಗ ಸೃಷ್ಟಿ: ಅಶ್ವತ್ಥನಾರಾಯಣ


ಇದೀಗ ಇದೇ ವಿಚಾರವನ್ನಿಟ್ಟುಕೊಂಡು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು, ಬುರುಡೆರಾಮಯ್ಯ ಕರ್ನಾಟಕ ರಾಜ್ಯದ ‘ಪರ್ಸೆಂಟೇಜ್ ಪಿತಾಮಹʼ ಎಂದು ಟೀಕಿಸಿದೆ. ‘ಸಿದ್ದರಾಮಯ್ಯನವರೇ ಗೋವಿಂದರಾಜ್ ಡೈರಿಯಲ್ಲಿ ನಿಮ್ಮ ಪರ್ಸಂಟೇಜ್ ವ್ಯವಹಾರದ ಲೆಕ್ಕವಿತ್ತೇ? ಅಡಿಯಿಂದ ಮುಡಿಯವರೆಗೂ ಭ್ರಷ್ಟಾಚಾರವನ್ನು ಹೊದ್ದು ಮಲಗಿದ ಸರ್ಕಾರ ನಿಮ್ಮದಾಗಿತ್ತು ಎಂಬುದು ಡೈರಿಯೇ ಹೇಳುತ್ತಿತ್ತು. ತಾನು ಕಳ್ಳ ಪರರ ನಂಬ ಎಂಬ ಮಾತು ಸಿದ್ದರಾಮಯ್ಯರಿಗೆ ಹೇಳಿ ಮಾಡಿಸಿದ ಹಾಗಿದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.


PSI Scam: ‘ತನಿಖಾಧಿಕಾರಿಯಂತೆ ವರ್ತಿಸಿದ ಪ್ರಿಯಾಂಕ್ ಖರ್ಗೆ ಈಗ ಸೊಬಗನಂತೆ ವರ್ತಿಸುತ್ತಿದ್ದಾರೆ’


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.