ಹಾಸಿಗೆ ದಿಂಬಿನಲ್ಲಿ ಲಂಚ, ಬಚ್ಚಲಮನೆಯ ಚೊಂಬಿನಲ್ಲೂ ಲಂಚ: ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ
ಗಂಗಾ ಕಲ್ಯಾಣ ಯೋಜನೆಯಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ನಡೆದ ಅವ್ಯವಹಾರದ ಒಡಲಾಳ ಅಳೆಯಲು ಸಾಧ್ಯವಿತ್ತೇ? ಎಂದು ಬಿಜೆಪಿ ಪ್ರಶ್ನಿಸಿದೆ.
ಬೆಂಗಳೂರು: ‘ಕಾಂಗ್ರೆಸ್ ಅಧಿಕಾರವಧಿಯಲ್ಲಿ ನಡೆದ ಭ್ರಷ್ಟಾಚಾರಗಳು ಒಂದೆರಡಲ್ಲ. ಹಾಸಿಗೆ ದಿಂಬಿನಲ್ಲಿ ಲಂಚ, ಬಚ್ಚಲಮನೆಯ ಚೊಂಬಿನಲ್ಲೂ ಲಂಚ’ವೆಂದು ಬಿಜೆಪಿ ಟೀಕಿಸಿದೆ. #ಅಲಿಬಾಬಾಮತ್ತುಕಾಂಗ್ರೆಸ್‌ಕಳ್ಳರು ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, 40% ಕಮಿಷನ್ ಸರ್ಕಾರವೆಂದು ಆರೋಪಿಸುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದೆ.
ಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿರುವಾಗ ಮುಖ್ಯಮಂತ್ರಿಯಾಗಿದ್ದಿದ್ದು ಭ್ರಷ್ಟ ಸಿದ್ದರಾಮಯ್ಯ. ಭ್ರಷ್ಟ ಸಿದ್ದರಾಮಯ್ಯ ಅವರಿಗೆ ಕಲೆಕ್ಷನ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದದ್ದು ಆಂಜನೇಯ’ ಎಂದು ಆರೋಪಿಸಿದೆ.
PSI Exam Scam : ಪಿಎಸ್ಐ ನೇಮಕಾತಿ ಅಕ್ರಮ : ಅಮೃತ್ ಪೌಲ್ ಡೈರಿಯಿಂದ ಸಿಕ್ತು ಮೇಜರ್ ಟ್ವಿಸ್ಟ್
‘ಗಂಗಾ ಕಲ್ಯಾಣ ಯೋಜನೆಯಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ನಡೆದ ಅವ್ಯವಹಾರದ ಒಡಲಾಳ ಅಳೆಯಲು ಸಾಧ್ಯವಿತ್ತೇ? ಪರಿಶಿಷ್ಟ ಜಾತಿ ಹಾಗೂ ಪಂಗಡ ವಿಶೇಷ ಉಪಯೋಜನೆಯಲ್ಲೂ ಸಿದ್ದರಾಮಯ್ಯ ಸರ್ಕಾರ 40% ಕಮಿಷನ್ ಕಬಳಿಸಿದ್ದು ಸುಳ್ಳೇ?’ ಎಂದು ಪ್ರಶ್ನಿಸಿದೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರ ಪತ್ನಿಯರೂ ಪರ್ಸಂಟೇಜ್ ವ್ಯವಹಾರ ನಡೆಸುತ್ತಿದ್ದರು. ಅಂದಿನ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರ ಸರ್ಕಾರಿ ನಿವಾಸದಲ್ಲೇ ಸಚಿವರ ಪತ್ನಿ ಗುತ್ತಿಗೆ ನೀಡಲು 7 ಲಕ್ಷ ರೂ. ಲಂಚದ ವ್ಯವಹಾರ ಕುದುರಿಸಿದ್ದರು. ಇದರಲ್ಲಿ ಎಷ್ಟು ಪಾಲು ಕೆಪಿಸಿಸಿ ಕಚೇರಿ ತಲುಪಿದೆ?’ ಎಂದು ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ: Honeytrap: ಹನಿಟ್ರ್ಯಾಪ್ ಮಾಡಿ ನಂತರ ಸಿಬಿಐ ಹೆಸರಲ್ಲಿ ಲಕ್ಷ ಲಕ್ಷ ವಂಚನೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ