ಬೆಂಗಳೂರು: ಸಿದ್ದರಾಮಯ್ಯ ಸಿಎಂ ಆದ ಒಂದೇ ವರ್ಷಕ್ಕೆ ಅವರ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿತ್ತು ಎಂದು ಬಿಜೆಪಿ ಆರೋಪಿಸಿದೆ. #CorruptCONgress ಹ್ಯಾಶ್ ಟ್ಯಾಗ್ ಬಳಸಿ ಶನಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಅರ್ಕಾವತಿ, ಕೆಪಿಎಸ್‌ಸಿ, ವಕ್ಫ್ ಆಸ್ತಿ ಕಬಳಿಕೆ, ಭೂ ಒತ್ತುವರಿ, ಸಿವಿಲ್ ಪೊಲೀಸ್ ನೇಮಕಾತಿ ಹಗರಣಗಳು ರಾರಾಜಿಸಿದ್ದವು. 'ಕೈ' ವಿರುದ್ಧ ಅಂದೇ ಬಿಜೆಪಿ ಧ್ವನಿ ಎತ್ತಿತ್ತು. ಸಿದ್ದು ಸ್ಮೃತಿಗೆ ಗರ ಬಡಿದಿದೆಯೇ?’ ಎಂದು ಪ್ರಶ್ನಿಸಿದೆ.
‘2014ರ ಮಾರ್ಚ್ 22ರಂದು ಕೆಪಿಎಸ್ಸಿ ನೇಮಕಾತಿ ಪಟ್ಟಿ ಬಿಡುಗಡೆಯಾಯಿತಷ್ಟೆ. ಅಂದು ಸಂಜೆಯೇ ಈ ನೇಮಕಾತಿ ಹಿಂದಿನ ಕರ್ಮಕಾಂಡದ ಬಂಡವಾಳ ಹೊರಬಿತ್ತು. ಆ ಅಕ್ರಮದಲ್ಲಿ 7 ಮಂದಿಯಷ್ಟೇ ಭಾಗಿ ಎಂದು ತೇಪೆ ಹಚ್ಚಿದ ಸಿದ್ದರಾಮಯ್ಯ, ಅದರ ಬೆನ್ನಲ್ಲೇ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕವನ್ನು ರದ್ದುಗೊಳಿಸಲಿಲ್ಲವೇ? ಸಿದ್ದರಾಜಯ್ಯ ಅಧಿಕಾರಕ್ಕೆ ಬರುತ್ತಿದ್ದಂತೆ ಜಗದೀಶ್ ಶೆಟ್ಟರ್ ತಿರಸ್ಕರಿಸಿದ್ದ ಕಡತಕ್ಕೆ ತರಾತುರಿಯಲ್ಲಿ ಸಹಿ ಹಾಕುವ ಮೂಲಕ 541.25 ಎಕರೆ ಅರ್ಕಾವತಿ ಜಮೀನು ಡಿನೋಟಿಫಿಕೇಶನ್ ಮಾಡಿರಲಿಲ್ಲವೇ? ಆಗ ಇದನ್ನು ಬಯಲಿಗೆ ಎಳೆದು, ದನಿ ಎತ್ತಿದ್ದು ಇದೇ ಬಿಜೆಪಿ. ಸಿದ್ದರಾಮಯ್ಯ ಇದನ್ನು ನೆನಪಿಸಿಕೊಂಡರೆ ಕ್ಷೇಮ’ವೆಂದು ಕುಟುಕಿದೆ.
ಸಿದ್ದರಾಮಯ್ಯ ಸಿಎಂ ಆದ ಒಂದೇ ವರ್ಷಕ್ಕೆ ಅವರ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿತ್ತು. ಅರ್ಕಾವತಿ, ಕೆಪಿಎಸ್‌ಸಿ, ವಕ್ಫ್ ಆಸ್ತಿ ಕಬಳಿಕೆ, ಭೂ ಒತ್ತುವರಿ, ಸಿವಿಲ್ ಪೊಲೀಸ್ ನೇಮಕಾತಿ ಹಗರಣಗಳು ರಾರಾಜಿಸಿದ್ದವು. 'ಕೈ' ವಿರುದ್ಧ ಅಂದೇ @BJP4Karnataka ಧ್ವನಿ ಎತ್ತಿತ್ತು. ಸಿದ್ದು ಸ್ಮೃತಿಗೆ ಗರ ಬಡಿದಿದೆಯೇ?#CorruptCONgress
1/7 pic.twitter.com/qqqVitgtZc— BJP Karnataka (@BJP4Karnataka) July 9, 2022
ಇದನ್ನೂ ಓದಿ: Earthquake: ಬೆಳ್ಳಂಬೆಳಗ್ಗೆ ವಿಜಯಪುರದಲ್ಲಿ ಭೂಕಂಪನ, ಬೆಚ್ಚಿದ ಜನರು!
‘ಸಿದ್ದರಾಮಯ್ಯ ಆಪ್ತ ದಿನೇಶ್ ಗುಂಡೂರಾವ್ ಸಚಿವರಾಗಿದ್ದಾಗ ಅವರ ಕುಟುಂಬಸ್ಥರು ಬೆಂಗಳೂರಿನ ಹೊರವಲಯದಲ್ಲಿ 10.9 ಎಕರೆ ಸರ್ಕಾರಿ ಜಮೀನು ಕಬಳಿಸಿರಲಿಲ್ಲವೇ? ಅಂದಿನ ಲೋಕಾಯುಕ್ತರು ಈ ಬಗ್ಗೆ ವರದಿ ನೀಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರಲಿಲ್ಲವೇ? ಮಾಜಿ ಸಿಎಂಗೆ ಕವಿದಿರುವ ಮರೆವಾದರೂ ಎಂಥದ್ದು? ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಖಮರುಲ್ ಇಸ್ಲಾಂ ಕೊರಳಿಗೆ ವಕ್ಫ್ ಆಸ್ತಿ ಕಬಳಿಕೆ ಹಗರಣ ಸುತ್ತಿಕೊಂಡಿರಲಿಲ್ಲವೇ? ಕಲಬುರಗಿಯ ಖಾಜಾ ಬಂದೇನವಾಜ್ ದರ್ಗಾಕ್ಕೆ ಸೇರಿದ 8.34 ಎಕರೆ ಜಮೀನು ಅಕ್ರಮವಾಗಿ ಕಬಳಿಸಿದ ಆರೋಪ ಬಂದಿತ್ತು. ಆಗ ಲೋಕಾಯುಕ್ತ ವಿಶೇಷ ನ್ಯಾಯಲಯ ತನಿಖೆ ನಡೆಸಲು ಆದೇಶ ನೀಡಿತ್ತು’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
'@siddaramaiah ಅಧಿಕಾರಕ್ಕೆ ಬರುತ್ತಿದ್ದಂತೆ ಜಗದೀಶ್ ಶೆಟ್ಟರ್ ತಿರಸ್ಕರಿಸಿದ್ದ ಕಡತಕ್ಕೆ ತರಾತುರಿಯಲ್ಲಿ ಸಹಿ ಹಾಕುವ ಮೂಲಕ 541.25 ಎಕರೆ ಅರ್ಕಾವತಿ ಜಮೀನು ಡಿನೋಟಿಫಿಕೇಶನ್ ಮಾಡಿರಲಿಲ್ಲವೇ? ಆಗ ಇದನ್ನು ಬಯಲಿಗೆ ಎಳೆದು, ದನಿ ಎತ್ತಿದ್ದು ಇದೇ @BJP4Karnataka. ಸಿದ್ದರಾಮಯ್ಯ ಇದನ್ನು ನೆನಪಿಸಿಕೊಂಡರೆ ಕ್ಷೇಮ.#CorruptCONgress
3/7— BJP Karnataka (@BJP4Karnataka) July 9, 2022
‘ಸಿದ್ದರಾಮಯ್ಯನವರ ಆಪ್ತ ಮಹದೇವ ಪ್ರಸಾದ್ ಸಹಕಾರ ಸಚಿವರಾಗಿದ್ದಾಗ, ಕರ್ನಾಟಕ ಗೃಹ ಮಂಡಳಿ ಬಡವರಿಗೆಂದು ಮೀಸಲಿಟ್ಟಿದ್ದ ನಿವೇಶನಗಳ ಪೈಕಿ ಮೂರ್ಮೂರು ನಿವೇಶನಗಳನ್ನು ಅಕ್ರಮವಾಗಿ ಖರೀದಿ ಮಾಡಿರಲಿಲ್ಲವೆ? ಈ ಸಂಬಂಧ ಚಾಮರಾಜನಗರ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಾಗಿರಲಿಲ್ಲವೇ? ಸಿದ್ದು ಸ್ಮೃತಿ ಮಂಕಾಗಿದೆಯೇ? ಸಿದ್ದರಾಮಯ್ಯನವರು ಕರ್ನಾಟಕ ಲೋಕಾಯುಕ್ತವನ್ನು ಸಮಾಧಿ ಮಾಡಿದ್ದಕ್ಕೆ ಬೆಟ್ಟದಷ್ಟು ಪುರಾವೆಗಳಿವೆ. ರಾಜ್ಯ ಬಿಜೆಪಿ ನೇತೃತ್ವದ ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರ ಎಲ್ಲವನ್ನೂ ಬಯಲಿಗೆ ಎಳೆಯಲಿದೆ. ಏರುಧ್ವನಿಯಲ್ಲಿ ಮಾತನಾಡಿದ ಮಾತ್ರಕ್ಕೆ ಎಲ್ಲವೂ ಸತ್ಯವಾಗುವುದಿಲ್ಲ’ವೆಂದು ಬಿಜೆಪಿ ಟೀಕಿಸಿದೆ.
ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಖಮರುಲ್ ಇಸ್ಲಾಂ ಕೊರಳಿಗೆ ವಕ್ಫ್ ಆಸ್ತಿ ಕಬಳಿಕೆ ಹಗರಣ ಸುತ್ತಿಕೊಂಡಿರಲಿಲ್ಲವೇ? ಕಲಬುರಗಿಯ ಖಾಜಾ ಬಂದೇನವಾಜ್ ದರ್ಗಾಕ್ಕೆ ಸೇರಿದ 8.34 ಎಕರೆ ಜಮೀನು ಅಕ್ರಮವಾಗಿ ಕಬಳಿಸಿದ ಆರೋಪ ಬಂದಿತ್ತು. ಆಗ ಲೋಕಾಯುಕ್ತ ವಿಶೇಷ ನ್ಯಾಯಲಯ ತನಿಖೆ ನಡೆಸಲು ಆದೇಶ ನೀಡಿತ್ತು. #CorruptCONgress
5/7— BJP Karnataka (@BJP4Karnataka) July 9, 2022
ಮಾನ್ಯ @siddaramaiahನವರು ಕರ್ನಾಟಕ ಲೋಕಾಯುಕ್ತವನ್ನು ಸಮಾಧಿ ಮಾಡಿದ್ದಕ್ಕೆ ಬೆಟ್ಟದಷ್ಟು ಪುರಾವೆಗಳಿವೆ. ರಾಜ್ಯ @BJP4Karnataka ನೇತೃತ್ವದ ಮುಖ್ಯಮಂತ್ರಿ @BSbommai ಸರಕಾರ ಎಲ್ಲವನ್ನೂ ಬಯಲಿಗೆ ಎಳೆಯಲಿದೆ.
ಏರುಧ್ವನಿಯಲ್ಲಿ ಮಾತನಾಡಿದ ಮಾತ್ರಕ್ಕೆ ಎಲ್ಲವೂ ಸತ್ಯವಾಗುವುದಿಲ್ಲ.#CorruptCONgress
7/7— BJP Karnataka (@BJP4Karnataka) July 9, 2022
ಇದನ್ನೂ ಓದಿ: Viral Video: ಸರ್ಕಾರಿ ಆಸ್ಪತ್ರೆಯಲ್ಲಿ ಕತ್ತೆ ಪ್ರತ್ಯಕ್ಷ, ಬಿದ್ದು ಬಿದ್ದು ನಕ್ಕ ರೋಗಿಗಳು..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ