ಪಕ್ಷದ ಆಂತರಿಕ ವಿಚಾರದ ಪ್ರಶ್ನೆ ಬಂದಾಗ ಸಿದ್ದರಾಮಯ್ಯ ಮೌನಕ್ಕೆ ಶರಣಾಗುವುದೇಕೆ?: ಬಿಜೆಪಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.
ಬೆಂಗಳೂರು: ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರದ ಪ್ರಶ್ನೆ ಬಂದಾಗ ಸಿದ್ದರಾಮಯ್ಯ(Siddaramaiah) ಮೌನಕ್ಕೆ ಶರಣಾಗುವುದೇಕೆ? ಎಂದು ಬಿಜೆಪಿ ಪ್ರಶ್ನಿಸಿದೆ. #ಕಾಂಗ್ರೆಸ್‌ಕಲಹ ಹ್ಯಾಶ್ ಟ್ಯಾಗ್ ಬಳಿಸಿ ಟ್ವೀಟ್ ಮಾಡಿರುವ ಬಿಜೆಪಿ, ವಿಪಕ್ಷ ನಾಯಕನ ವಿರುದ್ಧ ಕಿಡಿಕಾರಿದೆ.
‘ಸಿದ್ದರಾಮಯ್ಯನವರೇ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರದ ಪ್ರಶ್ನೆ ಬಂದಾಗ ನೀವು ಮೌನಕ್ಕೆ ಶರಣಾಗುವುದೇಕೆ? ನಿಮ್ಮ ಬಣವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಅವರು ಚಿಂದಿ ಮಾಡುತ್ತಾರೆ ಎಂಬ ಭಯ ಕಾಡುತ್ತಿದೆಯೇ? ಅಥವಾ ಒಳ ಜಗಳ ಅನಾವರಣವಾದರೆ ಜನರು ತಿರಸ್ಕರಿಸಬಹುದೆಂಬ ಆತಂಕವೋ?’ ಅಂತಾ ಬಿಜೆಪಿ ವ್ಯಂಗ್ಯವಾಡಿದೆ.
ಉಕ್ರೇನ್ ಶವಾಗಾರದಲ್ಲಿ ನವೀನ್ ಮೃತ ದೇಹ, ಶೆಲ್ ದಾಳಿ ನಿಂತ ನಂತರ ಭಾರತಕ್ಕೆ ತರುವ ಕ್ರಮ: ಸಿಎಂ
Basavaraj Bommai) ಅವರ ಮೂಲದ ಬಗ್ಗೆ ಮಾತನಾಡುವ ನೀವು, ನಿಮ್ಮ ಮೂಲದ ಬಗ್ಗೆ ಏಕೆ ಮಾತನಾಡುವುದಿಲ್ಲ? ಕಾಗೆಯ ಗೂಡಿನಲ್ಲಿ ಕೋಗಿಲೆ ಮೊಟ್ಟೆ ಇಟ್ಟ ಕತೆ ಎಲ್ಲರಿಗೂ ತಿಳಿದಿದೆ. ಮೂಲ ಕಾಂಗ್ರೆಸ್ಸಿಗರ ಶ್ರಮದಲ್ಲಿ ಗಟ್ಟಿಯಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಎಲ್ಲೆಲ್ಲೋ ಸುತ್ತಾಡಿ ಬಂದು ಸಿಎಂ ಆಗಿದ್ದು ನಿಮಗೆ ಮರೆತು ಹೋಯಿತೇ?’ ಅಂತಾ ಮತ್ತೊಂದು ಟ್ವೀಟ್ ನಲ್ಲಿ ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ: Exit Poll Result:ಗಾಬರಿಯಿಂದ ಗೋವಾಗೆ ಡಿಕೆಶಿ ದೌಡು! ಟ್ರಬಲ್ "ಶೂಟ್" ಮಾಡುತ್ತಾರಾ ಕೈ ನಾಯಕ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.