ಬೆಂಗಳೂರು : ಉಕ್ರೇನ್ ಶೆಲ್ ದಾಳಿಯಲ್ಲಿ ಮೃತಪಟ್ಟ ನವೀನ್ ಮೃತದೇಹ ಸಿಕ್ಕಿದೆ (Naveen dead body). ನವೀನ್ ಮೃತದೇಹವನ್ನು ಉಕ್ರೇನಿನ ಶವಾಗಾರದಲ್ಲಿಇಡಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ (CM Basavaraj Bommai). ಉಕ್ರೇನ್ ನಲ್ಲಿ ನಡೆಯುತ್ತಿರುವ ಶೆಲ್ ದಾಳಿ ನಿಂತ ನಂತರ ಮೃತ ದೇಹವನ್ನು ಭಾರತಕ್ಕೆ ತರುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಸಿಎಂ ತಿಳಿಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ (Russia Ukraine war) ನಡೆಸಿದ ಶೆಲ್ ದಾಳಿಗೆ ಹಾವೇರಿ ಮೂಲದ ನವೀನ್ ಗ್ಯಾನಗೌಡರ್ ಬಲಿಯಾಗಿದ್ದಾರೆ (Naveen death). ನವೀನ್ ಮೃತದೇಹವನ್ನು ಭಾರತಕ್ಕೆ ಕರೆತರುವಂತೆ ನವೀನ್ ಪೋಷಕರು ಸರ್ಕಾರವನ್ನು ಮನವಿ ಮಾಡುತ್ತಲೇ ಇದ್ದಾರೆ. ಇದೀಗ ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ (CM Basavaraj Bommai).
ಇದನ್ನೂ ಓದಿ : Kolar Crime News: ಮಕ್ಕಳಿಗೆ ಶ್ರೀಮಂತಿಕೆ ತೋರಿಸಲು ಕಳ್ಳನಾದ ತಂದೆ..!
ಉಕ್ರೇನಿನ ಶವಾಗಾರದಲ್ಲಿ ನವೀನ್ ಮೃತ ದೇಹ ಇಡಲಾಗಿದ್ದು, ಉಕ್ರೇನ್ ನಲ್ಲಿ ನಡೆಯುತ್ತಿರುವ ಶೆಲ್ ದಾಳಿ ನಿಂತ ನಂತರ ಮೃತ ದೇಹವನ್ನು ಭಾರತಕ್ಕೆ ತರುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ನವೀನ್ ವಿಚಾರವಾಗಿ ಕೇಂದ್ರ ಸಚಿವ ಜೈಶಂಕರ್ ಅವರ ಜತೆ ಮಾತಾಡಿದ್ದೇನೆ. ,ನವೀನ್ ಮೃತದೇಹ ಸಿಕ್ಕಿದೆ (Naveen dead body). ಮೃತದೇಹ ಉಕ್ರೇನಿನ ಶವಾಗಾರದಲ್ಲಿದೆ. ಅಲ್ಲಿ ಯುದ್ಧ ಇನ್ನೂ ನಡೆಯುತ್ತಿದೆ. ಈ ಬಗ್ಗೆ ರಾಯಭಾರಿ ಕಚೇರಿ ಅಧಿಕಾರಿಗಳ ಜತೆ ಕೂಡಾ ಸಂಪರ್ಕದಲ್ಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪಂಚರಾಜ್ಯಗಳ ಚುನಾವಣೆ ಎಕ್ಸಿಟ್ ಫಲಿತಾಂಶ (exit poll) ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ,ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸುವುದು ಚುನಾವಣೆ ವೇಳೆಯೇ ನಿರೀಕ್ಷೆ ಇತ್ತು. ನಿರೀಕ್ಷೆ ಗೆ ತಕ್ಕಂತೆ ಎಕ್ಸಿಟ್ ಪೋಲ್ ಸಹ ಬಂದಿದೆ . ಇನ್ನೂ ಎರಡು ದಿನ ಕಾದು ನೋಡೋಣ ಎಂದಿದ್ದಾರೆ.
ಇದನ್ನೂ ಓದಿ : ಶ್ರೀಗಂಧದ ಮರ ಮಂಗಮಾಯ!: CCTVಯಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.