ಬೆಂಗಳೂರು: ‘ದಿ ಕಾಶ್ಮೀರ್ ಫೈಲ್ಸ್‌’ ಸಿನಿಮಾ(​The Kashmir Files Film)ವನ್ನು ಭಾರತದಲ್ಲಿ ಪ್ರದರ್ಶಿಸದೆ ಪಾಕಿಸ್ತಾನದಲ್ಲಿ ತೋರಿಸಬೇಕೇ? ಎಂದು ಕಾಂಗ್ರೆಸ್ ಗೆ ಬಿಜೆಪಿ ಪ್ರಶ್ನಿಸಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಪ್ರತಿಯೊಬ್ಬ ಭಾರತೀಯನು ನೋಡಲೇಬೇಕಾದ ಸಿನಿಮಾ ಇದು. ಕಾಂಗ್ರೆಸ್‌ ಈ ಸಿನಿಮಾಕ್ಕೆ ತೀವ್ರವಾದ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ? ಕಾಂಗ್ರೆಸ್‌ ಪ್ರತ್ಯೇಕತಾವಾದಿಗಳ ಪರವೋ, ದೇಶದ ಪರವೋ?’ ಅಂತಾ ಪ್ರಶ್ನಿಸಿದೆ.


COMMERCIAL BREAK
SCROLL TO CONTINUE READING

‘ಹಿಜಾಬ್ ಮುಸ್ಲಿಮರ ಮೂಲಭೂತ ಹಕ್ಕು ಎಂದು ಪ್ರತಿಪಾದಿಸುವ ಸಿದ್ದರಾಮಯ್ಯ(Siddaramaiah)ನವರೇ ಕಾಶ್ಮೀರ, ಕಾಶ್ಮೀರಿ ಪಂಡಿತರ ಹಕ್ಕು ಎಂಬುದು ಯಾವಾಗ ಪ್ರತಿಪಾದಿಸುತ್ತೀರಿ? #TheKashmirFiles ಚಿತ್ರ ವೀಕ್ಷಣೆ ನಿರಾಕರಿಸಿರುವ ನೀವು, ಯಾರ ಪರವಾಗಿ ಫೈಲ್ ಬಿಲ್ಡ್ ಮಾಡುತ್ತಿದ್ದೀರಿ?’ ಅಂತಾ ಪ್ರಶ್ನಿಸಿದೆ.


Hijab verdict: ‘ಹಿಜಾಬ್ ಒಳಗಿರುವ ಮತ ಗಟ್ಟಿಗೊಳಿಸಲು ಯತ್ನಿಸಿದ ಸಿದ್ದರಾಮಯ್ಯಗೆ ಹಿನ್ನಡೆ’


‘ಸಿದ್ದರಾಮಯ್ಯನವರೇ ನೀವು #TheKashmirFiles ಸಿನಿಮಾ(The Kashmir Files Cinema) ವೀಕ್ಷಣೆ ಮಾಡುವುದಿಲ್ಲವೆಂದು ಹೇಳಿದ್ದೇಕೆ? ನೀವು ಪೋಷಿಸಿಕೊಂಡು ಬಂದ ಜಿಹಾದಿ ಪ್ರತಿಪಾದಕರು ಈ ದೇಶದಲ್ಲಿ ನಡೆಸಿದ ನರಮೇಧವನ್ನು ನೋಡಲು ಅಂಜಿಕೆಯೇ? ಅಥವಾ ಸತ್ಯದರ್ಶನ ಮಾಡಲಾಗದ ಪಲಾಯನವಾದವೋ? ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡುವುದು ಮಾತ್ರ ಸಿದ್ದರಾಮಯ್ಯನವರು ಪ್ರತಿಪಾದಿಸುವ ಜಾತ್ಯತೀತತೆ. ಸ್ವತಂತ್ರ ಭಾರತದಲ್ಲಿ ನಡೆದ ಹಿಂದೂಗಳ ಮಾರಣಹೋಮದ ಬಗ್ಗೆ ಈ ಸಮಾಜ‌ ಭಂಜಕ ಸಿದ್ಧರಾಮಯ್ಯ ಅವರು ಸದಾ ಮೌನಿ!’ ಅಂತಾ ಬಿಜೆಪಿ ಕುಟುಕಿದೆ.