ಸಿದ್ದರಾಮಯ್ಯ ಮತ್ತು ಡಿಕೆಶಿ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ: ಬಿಜೆಪಿ ಟೀಕೆ
ಕಾಂಗ್ರೆಸ್ ಪಕ್ಷದಲ್ಲಿ ಈಗ ದಲಿತ ಸಿಎಂ ವಾದ ಮತ್ತೆ ಮುನ್ನೆಲೆಗೆ ಬಂದಿದ್ದು, 2013ರ ಇತಿಹಾಸ 2023ರಲ್ಲೂ ಮರುಕಳಿಸುವ ಸೂಚನೆ ಲಭಿಸಿದೆ ಎಂದು ಬಿಜೆಪಿ ಟೀಕಿಸಿದೆ.
ಬೆಂಗಳೂರು: ‘ದಲಿತ ಮುಖ್ಯಮಂತ್ರಿ ಎಂಬ ಪದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕನಸಿಗೆ ಭಂಗ ತರುತ್ತಿದೆಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ. #ದಲಿತವಿರೋಧಿಕಾಂಗ್ರೆಸ್ ಹ್ಯಾಶ್ ಟ್ಯಾಗ್ ಬಳಸಿ ಬಿಜೆಪಿ ಗುರುವಾರ ಸರಣಿ ಟ್ವೀಟ್ ಮಾಡಿದೆ.
‘ಕಾಂಗ್ರೆಸ್ ಪಕ್ಷ ಪದೇ ಪದೇ ದಲಿತ ನಾಯಕರಿಗೆ ಅನ್ಯಾಯ ಮಾಡುತ್ತಿದೆ. ಕೆಪಿಸಿಸಿ ಅಧ್ಯಕ್ಷರಾದವರು ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾಗುವುದು ಅಲಿಖಿತ ನಿಯಮವಾಗಿತ್ತು. 2013ರಲ್ಲಿ ದಲಿತ ಸಮುದಾಯದ ಪ್ರಬಲ ನಾಯಕ ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಕುತಂತ್ರವೇ ನಡೆದು ಹೋಯಿತು!’ ಎಂದು ಟೀಕಿಸಿದೆ.
ಸಿಲಿಕಾನ್ ಸಿಟಿಯಲ್ಲಿ ಶಾಸಕರ ಕಚೇರಿ ಬಳಿ ವೃದ್ಧನ ಭೀಕರ ಹತ್ಯೆ!
‘ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿಯಾಗುತ್ತಾರೆ ಎಂದರಿತ ಸಿದ್ದರಾಮಯ್ಯ, ಕುತಂತ್ರದಿಂದ ದಲಿತ ನಾಯಕನನ್ನು ಸೋಲಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಈಗ ದಲಿತ ಸಿಎಂ ವಾದ ಮತ್ತೆ ಮುನ್ನೆಲೆಗೆ ಬಂದಿದೆ. 2013ರ ಇತಿಹಾಸ 2023ರಲ್ಲೂ ಮರುಕಳಿಸುವ ಸೂಚನೆ ಲಭಿಸಿದೆ, ಪರಮೇಶ್ವರ್ ಅವರನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಪಕ್ಷದಲ್ಲಿ ಬೆಳಗಾವಿಯ ‘ಲಕ್ಷ್ಮಿ’ಗೆ ಮಾತ್ರ ಗೌರವ: ಬಿಜೆಪಿ ಟೀಕೆ
ಸಿದ್ದರಾಮಯ್ಯ ಅವರೇ, ಪರಮೇಶ್ವರ್, ಖರ್ಗೆ ಅವರಂತಹ ದಲಿತ ನಾಯಕರಿಗೆ ನೀವು ಅವಕಾಶ ವಂಚಿಸಿದ್ದನ್ನು ರಾಜ್ಯದ ಜನತೆ ಮರೆತಿಲ್ಲ. ಪದೇ ಪದೇ ದಲಿತ ಸಮುದಾಯದ ನಂಬಿಕೆಗೆ ದ್ರೋಹ ಬಗೆಯುವ ನಿಮ್ಮನ್ನು ರಾಜ್ಯದ ದಲಿತ ಸಮುದಾಯವೆಂದಿಗೂ ಕ್ಷಮಿಸದು. ಚುನಾವಣೆ ಹತ್ತಿರ ಬರುತ್ತಿದ್ದಂತೆ ದಲಿತರ ಪರ ಒಲವು ತೋರಿಸುತ್ತಿರುವ ಸಿದ್ದರಾಮಯ್ಯನವರೇ, 2023ರಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಘೋಷಣೆ ಮಾಡುವ ತಾಕತ್ತು ಇದೆಯೇ? ದಲಿತ ಮುಖ್ಯಮಂತ್ರಿ ಎಂಬ ಪದ ಡಿಕೆಶಿ ಮತ್ತು ಸಿದ್ದರಾಮಯ್ಯರ ಕನಸಿಗೆ ಭಂಗ ತರುತ್ತಿದೆಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.