ಅಂದು Quit India ಇಂದು Quit CONgress: ಬಿಜೆಪಿ ವ್ಯಂಗ್ಯ

ನಮ್ಮ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ, ಮತ್ತಷ್ಟು ಜನರು ಬಂದು ಸೇರಲಿದ್ದಾರೆ ಎಂದೆನ್ನುವ ನಾಯಕರೇ ಮೊದಲು ನಿಮ್ಮ ಬಾಗಿಲು ಮುಚ್ಚಿಕೊಳ್ಳಿ ಎಂದು ಬಿಜೆಪಿ ಕುಟುಕಿದೆ.

Written by - Zee Kannada News Desk | Last Updated : May 25, 2022, 03:22 PM IST
  • ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಎಸ್‍ಪಿ ಬೆಂಬಲದೊಂದಿಗೆ ರಾಜ್ಯಸಭೆಗೆ ಕಪಿಲ್ ಸಿಬಲ್ ಸ್ಪರ್ಧೆ
  • ಭಾರತ್‌ ಜೋಡೋ ಯಾತ್ರೆಯನ್ನು ಕಾಂಗ್ರೆಸ್‌ ಛೋಡೋ ಯಾತ್ರೆ ಎಂದು ಬಿಜೆಪಿ ಟೀಕೆ
  • ಕಾಂಗ್ರೆಸ್ ನಾಯಕರೇ ಮೊದಲು ನಿಮ್ಮ ಬಾಗಿಲು ಮುಚ್ಚಿಕೊಳ್ಳಿ ಎಂದು ಬಿಜೆಪ ವ್ಯಂಗ್ಯ
ಅಂದು Quit India ಇಂದು Quit CONgress: ಬಿಜೆಪಿ ವ್ಯಂಗ್ಯ  title=
ಕಾಂಗ್ರೆಸ್‌ ಛೋಡೋ ಯಾತ್ರೆಗೆ ಬಿಜೆಪಿ ಟೀಕೆ

ಬೆಂಗಳೂರು: ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ರಾಜ್ಯಸಭೆಗೆ ಕಪಿಲ್ ಸಿಬಲ್ ಸ್ಪರ್ಧಿಸುತ್ತಿರುವ ವಿಚಾರವಾಗಿ ‘ಕೈ’ಪಕ್ಷದ ವಿರುದ್ಧ ಬಿಜೆಪಿ ವ್ಯಂಗ್ಯವಾಡಿದೆ.

#ಕಾಂಗ್ರೆಸ್‌ಛೋಡೋಅಭಿಯಾನ ಹ್ಯಾಶ್ ಟ್ಯಾಗ್ ಬಳಸಿ ಬಿಜೆಪಿ ಗುರುವಾರ ಸರಣಿ ಟ್ವೀಟ್ ಮಾಡಿದೆ.  ಕಾಂಗ್ರೆಸ್‌ ಚಿಂತನಾ ಶಿಬಿರದಲ್ಲಿ ಭಾರತ್‌ ಜೋಡೋ ಅಭಿಯಾನದ ಸಂಕಲ್ಪ ಮಾಡಿದರು. ಇದು ಭಾರತ್‌ ಜೋಡೋ ಅಲ್ಲ, ಕಾಂಗ್ರೆಸ್‌ ಛೋಡೋ ಯಾತ್ರೆ ಎಂದು ನಾವು ವಿಶ್ಲೇಷಿಸಿದ್ದೆವು. ಅದರ ಫಲಿತಾಂಶ ಇಲ್ಲಿದೆ! ನೋಡಿ’ ಎಂದು ಕಾಂಗ್ರೆಸ್‍ಗೆ ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ಅಚ್ಚರಿ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿದ ಕಾಂಗ್ರೆಸ್

‘ಅಂದು Quit India ಇಂದು Quit CONgress. ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲಿಯವರೆಗೂ ನಕಲಿ ಗಾಂಧಿ ಕುಟುಂಬದ ಪಾದ ಪೂಜೆ ನಡೆಯುತ್ತದೆಯೋ ಅಲ್ಲಿಯವರೆಗೆ ಇದೆಲ್ಲಾ ಸಾಮಾನ್ಯ. #G23 ಶೀಘ್ರದಲ್ಲೇ #G0 ಆಗಲಿದೆ!’ ಎಂದು ಬಿಜೆಪಿ ಕುಟುಕಿದೆ.

‘ನಮ್ಮ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ, ಮತ್ತಷ್ಟು ಜನರು ಬಂದು ಸೇರಲಿದ್ದಾರೆ ಎಂದೆನ್ನುವ ನಾಯಕರೇ ಮೊದಲು ನಿಮ್ಮ ಬಾಗಿಲು ಮುಚ್ಚಿಕೊಳ್ಳಿ. ಬರುವುದಿರಲಿ, ಹೋಗುವವರ ಸಂಖ್ಯೆಯನ್ನೇ ನಿಮ್ಮಿಂದ ತಡೆಯಲು ಸಾಧ್ಯವಾಗುತ್ತಿಲ್ಲ. The COUNTDOWN has BEGUN!!!’ ಅಂತಾ ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಟಿಪ್ಪುವಿನ ಬಗ್ಗೆ ಬ್ರಿಟೀಷರು ಬರೆದ ಪುಸ್ತಕಗಳನ್ನು ಬಿಜೆಪಿಗರು ಕೊಂಡು ಓದಲಿ: ಕಾಂಗ್ರೆಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News