ಬೆಂಗಳೂರು: ಹಿಂದುತ್ವದ ವಿರುದ್ಧ ನಿಂತವರಿಗೆ ಮಾತ್ರ ಕಾಂಗ್ರೆಸ್ ಪಕ್ಷ(Congress Party)ದ ಪ್ರಮುಖ ಜವಾಬ್ದಾರಿಗಳು ಎಂದು ಬಿಜೆಪಿ ಆರೋಪಿಸಿದೆ. #ಹಿಂದೂವಿರೋಧಿಕಾಂಗ್ರೆಸ್ ಹ್ಯಾಶ್ ಟ್ಯಾಗ್ ಬಳಸಿ ಸೋಮವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ವೀರಶೈವ - ಲಿಂಗಾಯತ ಪ್ರತ್ಯೇಕ ಧರ್ಮ(Lingayat vs Veerashaiva) ವಿಚಾರವಾಗಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.


COMMERCIAL BREAK
SCROLL TO CONTINUE READING

‘ಕಾಂಗ್ರೆಸ್ ಪಕ್ಷದ ಪ್ರಮುಖ ಜವಾಬ್ದಾರಿಗಳು ಹಿಂದುತ್ವದ ವಿರುದ್ಧ ನಿಂತವರಿಗೆ ಮಾತ್ರ! 2018ರ ಚುನಾವಣಾ ಸಮಯದಲ್ಲಿ ವೀರಶೈವ-ಲಿಂಗಾಯಿತ ಪ್ರತ್ಯೇಕ ಧರ್ಮ(Veerashaiva-Lingayat Issue)ದ ರೂವಾರಿಯಾಗಿ ಸಮಾಜ ವಿಭಜನೆಯ ಮುಂದಾಳತ್ವ ವಹಿಸಿದ್ದ ಎಂ.ಬಿ.ಪಾಟೀಲ್ ಅವರಿಗೆ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಹಿಂದೂಗಳ ದೌರ್ಭಾಗ್ಯವಿದು!’ ಎಂದು ಬಿಜೆಪಿ ಟ್ವೀಟ್ ಮಾಡಿದೆ.


CET Exam: ಜೂನ್ ತಿಂಗಳಲ್ಲಿ ಸಿಇಟಿ ಪರೀಕ್ಷೆ


‘ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್(MB Patil)ಅವರೇ, ಒಂದು ವಿಚಾರ ಸ್ಪಷ್ಟಪಡಿಸುವಿರಾ? ಹಿಂದೂ ಸಮಾಜದ ವಿಭಜನೆಗಾಗಿ ನೀವು ನಡೆಸಿದ ವಿಫಲ ಯತ್ನದ ಬಗ್ಗೆ ನಾಡಿನ‌ ಜನತೆಯ ಕ್ಷಮೆ ಕೇಳುತ್ತೀರೋ ಅಥವಾ ನಿಮ್ಮ ಹಿಡನ್ ಅಜೆಂಡಾ ಜಾರಿಗಾಗಿ ಈ ಬಾರಿಯೂ ಯತ್ನಿಸುತ್ತೀರೋ? ಈ ಬಾರಿ ನಿಮ್ಮ ಪ್ರಚಾರದ ಸರಕೇನು?’ ಎಂದು ಬಿಜೆಪಿ ಪ್ರಶ್ನಿಸಿದೆ.


Siddaramaiah)ಈಗ ಮಠಾಧೀಶರ ವಿರುದ್ಧ ಹೇಳಿಕೆ ನೀಡುತ್ತಲೇ ಎಂಬಿ ಪಾಟೀಲ್ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.


SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಹೃದಯಾಘಾತ, ವಿದ್ಯಾರ್ಥಿನಿ ಸಾವು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.