ಅಹಿಂದ ನಾಯಕರ ಏಳಿಗೆ ಸಹಿಸದ ಸಿದ್ದರಾಮಯ್ಯರಿಂದ ಕುಟುಂಬ ರಾಜಕಾರಣ: ಬಿಜೆಪಿ
ತಮ್ಮ ಪುತ್ರ ಡಾ.ಯತೀಂದ್ರ ಅವರನ್ನು ಮುನ್ನೆಲೆಗೆ ತರಲು ಈಗ ತನ್ನದೇ ಸಮಾಜದ ಪ್ರಭಾವಿ ನಾಯಕರನ್ನು ಈಗಿಂದೀಗಲೇ ಮಟ್ಟಹಾಕಲು ಷಡ್ಯಂತ್ರ್ಯ ರೂಪಿಸುತ್ತಿದ್ದಾರೆ’ ಅಂತಾ ಬಿಜೆಪಿ ಟೀಕಿಸಿದೆ.
ಬೆಂಗಳೂರು: ಹಿಂದುಳಿದ ಸಮಾಜಕ್ಕೆ ನಾನೇ ಪ್ರಶ್ನಾತೀತ ನಾಯಕ ಎಂದು ಭ್ರಮಿಸಿರುವ ಸಿದ್ದರಾಮಯ್ಯ(Siddaramaiah) ಅವರು ಈಗ ಕುಟುಂಬ ರಾಜಕಾರಣಕ್ಕೆ ಇಳಿದಿದ್ದಾರೆ ಅಂತಾ ಬಿಜೆಪಿ ಆರೋಪಿಸಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಗುರುವಾರ ಸರಣಿ ಟ್ವೀಟ್ ಮಾಡಿದೆ. ‘ಹಿಂದುಳಿದ ಸಮಾಜಕ್ಕೆ ನಾನೇ ಪ್ರಶ್ನಾತೀತ ನಾಯಕ ಎಂದು ಭ್ರಮಿಸಿರುವ ಸಿದ್ದರಾಮಯ್ಯ ಅವರು ಈಗ ಕುಟುಂಬ ರಾಜಕಾರಣಕ್ಕೆ ಇಳಿದಿದ್ದಾರೆ. ತಮ್ಮ ಪುತ್ರ ಡಾ.ಯತೀಂದ್ರ(Yathindra Siddaramaiah) ಅವರನ್ನು ಮುನ್ನೆಲೆಗೆ ತರಲು ಈಗ ತನ್ನದೇ ಸಮಾಜದ ಪ್ರಭಾವಿ ನಾಯಕರನ್ನು ಈಗಿಂದೀಗಲೇ ಮಟ್ಟಹಾಕಲು ಷಡ್ಯಂತ್ರ್ಯ ರೂಪಿಸುತ್ತಿದ್ದಾರೆ’ ಅಂತಾ ಬಿಜೆಪಿ(BJP) ಟೀಕಿಸಿದೆ.
ಕೆ. ಎಸ್ ಈಶ್ವರಪ್ಪ ಹೇಳಿಕೆಗೆ ತಾರ್ಕಿಕ ಅಂತ್ಯ ಕಾಣಿಸಿಯೇ ತೀರುತ್ತೇವೆ : ಸಿದ್ದರಾಮಯ್ಯ
Siddaramaiah) ಈಗ ಅಹಿಂದ ವರ್ಗದ ನಾಯಕರನ್ನು ಪಕ್ಷಾತೀತವಾಗಿ ಮುಗಿಸಲು ಮುಂದಾಗಿದ್ದಾರೆ. ಕುರುಬ ಸಮಾಜಕ್ಕೆ ಸೇರಿದ ಸಚಿವ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಧರಣಿಯ ಹಿಂದೆ ಸಿದ್ದರಾಮಯ್ಯ ಅವರ ದಮನಕಾರಿ ಷಡ್ಯಂತ್ರವಿದೆ’ ಅಂತಾ ಬಿಜೆಪಿ ಆರೋಪಿಸಿದೆ.
ಇದನ್ನೂ ಓದಿ: ದೇಶದ್ರೋಹಿ ಕಾಂಗ್ರೆಸ್ ತಿರಂಗ ಬಳಸಿ ದೇಶದ ಗೌರವಕ್ಕೆ ಚ್ಯುತಿ ತಂದಿದೆ: ಬಿಜೆಪಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.