ಕೆ. ಎಸ್ ಈಶ್ವರಪ್ಪ ಹೇಳಿಕೆಗೆ ತಾರ್ಕಿಕ ಅಂತ್ಯ ಕಾಣಿಸಿಯೇ ತೀರುತ್ತೇವೆ : ಸಿದ್ದರಾಮಯ್ಯ

ವಿಧಾನಸಭೆ ಕಲಾಪ ನಂತರ ಮಾತನಾಡಿದ ಸಿದ್ದರಾಮಯ್ಯ,  ಸಚಿವ ಈಶ್ವರಪ್ಪ ಹೇಳಿಕೆ ಪ್ರಕರಣವನ್ನ ಲಾಜಿಕಲ್ ಎಂಡ್ ಗೆ ಕೊಂಡೊಯ್ಯುತ್ತೇವೆ. ಹಗಲು, ರಾತ್ರಿ  ಧರಣಿ ಮಾಡುತ್ತೇವೆ ಎಂದಿದ್ದಾರೆ. 

Written by - Prashobh Devanahalli | Last Updated : Feb 17, 2022, 02:03 PM IST
  • ಪ್ರತಿಭಟನೆಯನ್ನ ಅಹೋರಾತ್ರಿ ಮುಂದುವರೆಸಲು ನಿರ್ಧಾರ - ಸಿದ್ದರಾಮಯ್ಯ
  • "ಯಾರೇ ರಾಷ್ಟ್ರಧ್ವಜದ ಬಗ್ಗೆ ಅಪಮಾನ ಮಾಡಿದರೂ, ಕೇಸ್ ಹಾಕಬೇಕು"
  • ಈಶ್ವರಪ್ಪ ವಿರುದ್ದ ಕೇಸ್ ದಾಖಲಿಸಿಲ್ಲ ಯಾಕೆ - ಸಿದ್ದರಾಮಯ್ಯ ಪ್ರಶ್ನೆ
ಕೆ. ಎಸ್ ಈಶ್ವರಪ್ಪ ಹೇಳಿಕೆಗೆ ತಾರ್ಕಿಕ ಅಂತ್ಯ ಕಾಣಿಸಿಯೇ ತೀರುತ್ತೇವೆ : ಸಿದ್ದರಾಮಯ್ಯ title=
ಪ್ರತಿಭಟನೆಯನ್ನ ಅಹೋರಾತ್ರಿ ಮುಂದುವರೆಸಲು ನಿರ್ಧಾರ - ಸಿದ್ದರಾಮಯ್ಯ

ಬೆಂಗಳೂರು : ಸಚಿವ ಕೆ ಎಸ್ ಈಶ್ವರಪ್ಪ (KS Eshwarappa) ಹೇಳಿಕೆ ವಿರೋಧಿಸಿ ಉಭಯ ಸದನಗಳಲ್ಲಿ ಧರಣಿ ಮಾಡಿದ ಕಾಂಗ್ರೆಸ್, ತನ್ನ ಪ್ರತಿಭಟನೆಯನ್ನ ಅಹೋರಾತ್ರಿ ಮುಂದುವರೆಸಲು ನಿರ್ಧಾರ ಮಾಡಿರುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. 

ವಿಧಾನಸಭೆ ಕಲಾಪ ನಂತರ ಮಾತನಾಡಿದ ಸಿದ್ದರಾಮಯ್ಯ (Siddaramaiah), ಸಚಿವ ಈಶ್ವರಪ್ಪ ಹೇಳಿಕೆ ಪ್ರಕರಣವನ್ನ ಲಾಜಿಕಲ್ ಎಂಡ್ ಗೆ ಕೊಂಡೊಯ್ಯುತ್ತೇವೆ. ಹಗಲು, ರಾತ್ರಿ  ಧರಣಿ ಮಾಡುತ್ತೇವೆ ಎಂದಿದ್ದಾರೆ. 

ಇದನ್ನೂ ಓದಿ : ಪೀಣ್ಯ ಫ್ಲೈಓವರ್ ಕಳಪೆ ಕಾಮಗಾರಿ : ನಗರದ ಎಲ್ಲಾ ಸೇತುವೆ ಮೌಲ್ಯಮಾಪನಕ್ಕೆ ಕಾಂಗ್ರೆಸ್ ಆಗ್ರಹ

 ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ.  ಈಶ್ವರಪ್ಪ (Eshwarappa) ನಮ್ಮ ಸಂವಿಧಾನಕ್ಕೆ ಅಗೌರವ ತೋರಿದ್ದಾರೆ. ಹಾಗಾಗಿ ಅವರನ್ನು ಈಶ್ವರಪ್ಪ ಡಿಸ್ಮಿಸ್ ಮಾಡುವಂತೆ ಒತ್ತಾಯಿಸಿದ್ದೇವೆ. ರಾಜ್ಯಪಾಲರು ಡಿಸ್ಮಿಸ್ ಮಾಡುವುದಕ್ಕೆ ಸೂಚಿಸಬೇಕಿತ್ತು, ಸಿಎಂ (Karnataka CM) ಕೂಡ ಮಾಡಬೇಕಿತ್ತು ಎಂದು  ಸಿದ್ದರಾಮಯ್ಯ ಹೇಳಿದ್ದಾರೆ. 

ರಾಷ್ಟ್ರಧ್ವಜ (National Flag) ನಮ್ಮ ಸ್ವಾತಂತ್ರ್ಯದ ಸಂಕೇತ. ಧ್ವಜ ಹಿಡಿದಾಗ ಹೋರಾಟದ ಕಿಚ್ಚು ಬರುತ್ತದೆ. ಯಾರೇ ರಾಷ್ಟ್ರಧ್ವಜದ ಬಗ್ಗೆ ಅಪಮಾನ ಮಾಡಿದರೂ, ಕೇಸ್ ಹಾಕಬೇಕು. ಆದರೆ  ಈಶ್ವರಪ್ಪ ವಿರುದ್ದ ಕೇಸ್ ದಾಖಲಿಸಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ : ಸರ್ಕಾರಿ ಗೌರವದೊಂದಿಗೆ ನಾಡೋಜ ಚೆನ್ನವೀರ ಕಣವಿ ಅಂತ್ಯಕ್ರಿಯೆ

ಬಿಜೆಪಿಯವರು ರಾಷ್ಟ್ರಧ್ವಜಕ್ಕೆ ಗೌರವ ಕೊಡುತ್ತಿಲ್ಲ. ಮಧ್ಯಪ್ರದೇಶದ ಬಿಜೆಪಿ  (BJP) ಕಚೇರಿಯಲ್ಲಿ ರಾಷ್ಟ್ರ ಧ್ವಜದ ಮೇಲೆ, ಬಿಜೆಪಿ ಬಾವುಟವನ್ನ ಹಾರಿಸುತ್ತಾರೆ. ಹಾಗಾಗಿ ನಾವು ಪ್ರತಿಭಟನೆ (Congress Protest) ನಡೆಸುತ್ತೇವೆ ಎಂದು ಅವರು ಕಿಡಿಕಾರಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News