ಬೆಂಗಳೂರು: ಬಿಜೆಪಿ ಸರ್ಕಾರದ್ದು ಎಮ್ಮೆ ಚರ್ಮ ಅಲ್ಲ, ಘೇಂಡಾಮೃಗದ ಚರ್ಮ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯರ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಸೋಮವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯನವರೇ ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಗೆ ಪಲಾಯನ ಮಾಡಿದ್ದೀರಿ. ಅಲ್ಲೂ ಕೂಡಾ ಅತಂತ್ರರಾಗಿದ್ದೀರಿ. ಈಗ ಸುರಕ್ಷಿತ ಕ್ಷೇತ್ರ ಹುಡುಕುತ್ತಿದ್ದೀರಿ, ಕಾಂಗ್ರೆಸ್ ನಾಯಕರು ನಿಮ್ಮ ಕ್ಷೇತ್ರ ಹುಡುಕಾಟಕ್ಕೆ ತಿರುಗಿ ಬೀಳುತ್ತಿದ್ದಾರೆ. ವಿರುದ್ಧವಾದ ಅಭಿಪ್ರಾಯ ಮೂಡುತ್ತಿದ್ದರೂ #ಬುರುಡೆರಾಮಯ್ಯ ಅವರ ಚರ್ಮವೇಕೆ ಇಷ್ಟು ದಪ್ಪ?’ವೆಂದು ಪ್ರಶ್ನಿಸಿದೆ.


ಪರಿಹಾರ ತಪ್ಪಿಸಲು ಬಿಜೆಪಿ ಸರ್ಕಾರದಿಂದ ಸಾವಿನ ಸುಳ್ಳು ಹೇಳಿ ಮೋಸ: ಸಿದ್ದರಾಮಯ್ಯ


‘ಬಿಜೆಪಿ ತೊಲಗಿಸಲು ಅಧಿಕಾರಕ್ಕೆ ಬರಬೇಕು ಎಂದು ಹಗಲು ಕನಸು ಕಾಣುತ್ತಿರುವ ಸಿದ್ದರಾಮಯ್ಯ ಅವರೇ, ಕಾಂಗ್ರೆಸ್ ಪಕ್ಷ ಬುಡಸಮೇತ ನಿರ್ಮೂಲನೆ ಆಗುತ್ತಿರುವ ಹತಾಶೆಯೇ ನಿಮ್ಮನ್ನು ಕಾಡುತ್ತಿದೆಯೇ? ನೀವು ನಿಂತ ನೆಲವೇ ಭದ್ರವಾಗಿಲ್ಲ, ವಿಪಕ್ಷ ಸ್ಥಾನ ಕಟ್ಟಿಟ್ಟಬುತ್ತಿ ನಿಮಗೆ!!!’ ಎಂದು ಕುಟುಕಿದೆ.


‘ಕೈಮುಗಿದು ಕೇಳಿಕೊಳ್ಳುತ್ತೇನೆ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಸಿದ್ದರಾಮಯ್ಯ ಅವರು ಕೇಳಿಕೊಳ್ಳುತ್ತಿದ್ದಾರೆ. ಮತದಾರರು 2018ರಲ್ಲೇ ಕೈ ಮುಗಿದಿದ್ದರೂ, ನೀವು ಹಿಂದಿನ ಬಾಗಿಲಲ್ಲಿ ನುಗ್ಗುವ ಪ್ರಯತ್ನ ಮಾಡಿದ್ದೀರಿ. 2023ರಲ್ಲಿ ಮತ್ತದೇ ತಪ್ಪು ಮರುಕಳಿಸುವುದಿಲ್ಲ! #ಬುರುಡೆರಾಮಯ್ಯ’ ಎಂದು ಬಿಜೆಪಿ ಟೀಕಿಸಿದೆ.


ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ : ನಳಿನ್‍ಕುಮಾರ್ ಕಟೀಲ್


ಬಿಜೆಪಿಯದ್ದು ಘೇಂಡಾಮೃಗ ಸರ್ಕಾರ: ಸಿದ್ದರಾಮಯ್ಯ


ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಬೇಕಾ? ಯಾವುದೇ ಕಾರಣಕ್ಕೂ ಇರಬಾರದು. ಈ ಸರ್ಕಾರವನ್ನು ಬೇರುಸಮೇತ ಕಿತ್ತು ಎಸೆದಾಗ ದೇಶ ಉಳಿಯುತ್ತದೆ. ಬಿಜೆಪಿ ಸರ್ಕಾರದ್ದು ಎಮ್ಮೆ ಚರ್ಮ ಅಲ್ಲ, ಘೇಂಡಾಮೃಗದ ಚರ್ಮ ಎಂದು ಸಿದ್ದರಾಮಯ್ಯ ಟೀಕಿಸಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.