‘ನಿಮ್ಮ ಕೈಗೆ ಹ್ಯೂಬ್ಲೊಟ್ ವಾಚ್ ಬಂದಿದ್ದು ಚಹಾ ಕುಡಿಸಿಯೋ ಅಥವಾ ಚಹಾ ಕುಡಿದೋ?’

ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ 2ನೇ ಮದುವೆಯಾದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್‍ಗೆ ಬೆಂಗಳೂರಿನಲ್ಲಿ ಐಶಾರಾಮಿ ಪ್ಲಾಟ್ ಕೊಡಿಸಿರಲಿಲ್ಲವೇ? ಎಂದು ಬಿಜೆಪಿ ಪ್ರಶ್ನಿಸಿದೆ.

Written by - Zee Kannada News Desk | Last Updated : May 7, 2022, 06:18 PM IST
  • ನಾನು ಯಾರಿಗೂ ಚಹಾ ಕುಡಿಸದೆ ಸಿಎಂ ಆಗಿದ್ದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ತಿರುಗೇಟು
  • ನಿಮ್ಮ ಕೈಗೆ ಹ್ಯೂಬ್ಲೊಟ್‌ ವಾಚ್‌ ಬಂದಿದ್ದು ಚಹಾ ಕುಡಿಸಿಯೋ ಅಥವಾ ಚಹಾ ಕುಡಿದೋ?
  • ಸಿದ್ದರಾಮಯ್ಯ ನೀವು ಕುಡಿದ, ಕುಡಿಸಿದ ಚಹಾದಲ್ಲಿ ಬಣ್ಣ, ರುಚಿ, ಶಕ್ತಿ ಇತ್ತೇ? ಎಂದು ಪ್ರಶ್ನಿಸಿದ ಬಿಜೆಪಿ
‘ನಿಮ್ಮ ಕೈಗೆ ಹ್ಯೂಬ್ಲೊಟ್ ವಾಚ್ ಬಂದಿದ್ದು ಚಹಾ ಕುಡಿಸಿಯೋ ಅಥವಾ ಚಹಾ ಕುಡಿದೋ?’ title=
ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ತಿರುಗೇಟು

ಬೆಂಗಳೂರು: ನಾನು ಯಾರಿಗೂ ಚಹಾ ಕೂಡ ಕುಡಿಸದೆ ಸಿಎಂ ಆಗಿದ್ದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಬಿಜೆಪಿ ಕಿಡಿಕಾರಿದೆ. #ಸಿದ್ದುಭ್ರಷ್ಟಚಹಾಕೂಟ ಹ್ಯಾಶ್ ಟ್ಯಾಗ್ ಬಳಸಿ ಶನಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ನಿಮ್ಮ ಕೈಗೆ ಹ್ಯೂಬ್ಲೊಟ್‌ ವಾಚ್‌ ಬಂದಿದ್ದು ಚಹಾ ಕುಡಿಸಿಯೋ ಅಥವಾ ಚಹಾ ಕುಡಿದೋ?’ ಎಂದು ಪ್ರಶ್ನಿಸಿದೆ.

‘ಸಿದ್ದರಾಮಯ್ಯನವರೇ ನೀವು ಮುಖ್ಯಮಂತ್ರಿಯಾಗಿದ್ದಾಗ ಅರ್ಕಾವತಿ ರೀ ಡು ಪ್ರಕರಣ ನಡೆಯಿತು. ಈ ಹಗರಣದ ಮೂಲಕ ಸುಮಾರು 500 ಕೋಟಿ ರೂ. ಕಪ್ಪ ಕಾಂಗ್ರೆಸ್ ಹೈಕಮಾಂಡ್‌ಗೆ ಸಲ್ಲಿಕೆಯಾಗಿತ್ತು. ಆಗ ನೀವು ಚಹಾ ಕುಡಿದಿರಲಿಲ್ಲವೇ?.  ನೀವು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಿಸುವ ಯೋಜನೆ ಪ್ರಸ್ತಾಪಿಸಿದ್ದಿರಿ. ಖಾಸಗಿ ನಿರ್ಮಾಣ ಸಂಸ್ಥೆಯಿಂದ ಇದಕ್ಕಾಗಿ 15% ಲಂಚ ಸ್ವೀಕರಿಸಿದ ಎಂಬ ಆರೋಪವೂ ಕೇಳಿಬಂದಿತ್ತು. ಆಗ ನೀವು ಕುಡಿದ ಚಹಾದ ಬ್ರ್ಯಾಂಡ್ ಯಾವುದು?’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: M Lakshman : 'ರಮೇಶ್ ಜಾರಕಿಹೊಳಿ 15 ಜಿಲ್ಲಾ ಬ್ಯಾಂಕ್ ಗಳಿಂದ ₹366 ಕೋಟಿ ಸಾಲ'

‘ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ದಿಗ್ವಿಜಯ್ ಸಿಂಗ್ 2ನೇ ಮದುವೆಯಾದರು. ಉಸ್ತುವಾರಿಗೆ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಐಶಾರಾಮಿ ಪ್ಲಾಟ್ ಕೊಡಿಸಿರಲಿಲ್ಲವೇ? ಆಗ ದಿಗ್ವಿಜಯ್ ದಂಪತಿ ಜೊತೆಗೆ ಚಹಾ ಕುಡಿದಿರಲಿಲ್ಲವೇ? ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ನಗರ ಯೋಜನೆಯನ್ನು ಬದಲಿಸುವ ಬಹುದೊಡ್ಡ ಗೋಲ್ಮಾಲ್ ನಡೆಯಿತು. ಆಗ ನಡೆದ ಕೆಂಪು, ಹಳದಿ, ಹಸಿರು ಜೋನ್ ಬದಲಾವಣೆಯಿಂದ ಸಂಗ್ರಹವಾದ ಕಪ್ಪು ಹಣಕ್ಕೆ ಚಹಾದ ಬಣ್ಣವಿರಲಿಲ್ಲವೇ? ಈ ಗೋಲ್ಮಾಲ್ ಹಣದಲ್ಲಿ ಚಹಾ ಆಸ್ವಾದಿಸಲಿಲ್ಲವೇ?’ ಎಂದು ಬಿಜೆಪಿ ಕುಟುಕಿದೆ.

‘ಸಿದ್ದರಾಮಯ್ಯನವರೇ ನೀವು ಸಿಎಂ ಆಗಿದ್ದಾಗ ರಾಜ್ಯಾದ್ಯಂತ ತೆರೆದ ಶುದ್ಧ ಕುಡಿಯುವ ನೀರಿನ ಘಟಕಗಳು ಅಲ್ಪಾವಧಿಯಲ್ಲೇ ಜೀವ ಕಳೆದುಕೊಂಡವು. ಈ ಟೆಂಡರ್‌ನಲ್ಲಿ ನೀವು ಸಂಗ್ರಹಿಸಿದ ಕಪ್ಪುಹಣದಲ್ಲಿ ಚಹಾ ಕುಡಿದಿರೋ ಅಥವಾ ಕುಡಿಸಿದಿರೋ? ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮರಳು ಮಾಫಿಯಾ ರಾಜ್ಯಾದ್ಯಂತ ತಲೆ ಎತ್ತಿತ್ತು. ಸಿದ್ದರಾಮಯ್ಯ ರಕ್ತ ಸಂಬಂಧಿಗಳು ಹಾಗೂ ಆಪ್ತ ಸಚಿವರು ಈ ದಂಧೆಯ ಡೀಲ್ ಮಾಸ್ಟರ್‌ಗಳಾಗಿದ್ದರು. ಈ ದಂಧೆಯ ಮೂಲಕ ಸಂಗ್ರಹವಾದ ಕಪ್ಪವನ್ನು ವರಿಷ್ಠರಿಗೆ ಸಂದಾಯ ಮಾಡಿ, ಚಹಾ ಕುಡಿದಿರಲಿಲ್ಲವೇ?’ ಅಂತಾ ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಹಾವು- ಮುಂಗುಸಿಗಳಂತಿದ್ದ ಸಾರಾ ಮಹೇಶ್, ವಿಶ್ವನಾಥ್ ಈಗ ಭಾಯಿ-ಭಾಯಿ

ಸಿದ್ದರಾಮಯ್ಯನವರೇ ನೀವು ಕುಡಿದ, ಕುಡಿಸಿದ ಚಹಾದಲ್ಲಿ ಬಣ್ಣ, ರುಚಿ, ಶಕ್ತಿ ಇತ್ತೇ? ಸಿದ್ದರಾಮಯ್ಯನವರು ವರಿಷ್ಠರಿಗೆ ಬಣ್ಣ, ರುಚಿ, ಶಕ್ತಿ ಈ ಮೂರು ಗುಣಗಳ ಹೊಸ ಬ್ರ್ಯಾಂಡ್ ಚಹಾ ಕುಡಿಸಿ ಖುರ್ಚಿ ಉಳಿಸಿಕೊಂಡಿದ್ದೇ?’ ಅಂತಾ ವ್ಯಂಗ್ಯವಾಗಿ ಪ್ರಶ್ನಿಸಿ ಬಿಜೆಪಿ ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News