ಬೆಂಗಳೂರು : ಸಂಪುಟ ವಿಸ್ತರಣೆ (Cabinet Expansion) ನಂತರ ಆಗಿರುವ ಬೆಳವಣಿಗೆಗಳಿಂದ ಮುಖ್ಯಮಂತ್ರಿ ಯಡಿಯೂರಪ್ಪ (B S Yadiyurppa) ಕೆಂಡಾ ಮಂಡಲವಾಗಿದ್ದಾರೆ. 7 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವುದು ಬಿಜೆಪಿಯ ಹಲವಾರು ಇತರ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಸಂಪುಟ ಸೇರುವ ನಿರೀಕ್ಷೆ ಇಟ್ಟುಕೊಂಡಿದ್ದ ಹಲವು ನಾಯಕರು ಹತಾಶರಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಹೇಳಿಕೆಗಳನ್ನು ನೀಡತೊಡಗಿದ್ದಾರೆ. ಇದರ ನಡುವೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ‘ಸೀಡಿ ಬಾಂಬ್’ ಸಿಡಿಸಿದ್ದಾರೆ.  ಈ ಎಲ್ಲಾ ಬೆಳವಣಿಗೆಗಳು ಯಡಿಯೂರಪ್ಪ ಆಕ್ರೋಶಕ್ಕೆ ಕಾರಣವಾಗಿದೆ.


COMMERCIAL BREAK
SCROLL TO CONTINUE READING

‘ಯಾವ ಸೀಡಿಗೂ ಹೆದರಲ್ಲ’
ಬಿಜೆಪಿಯ (BJP) ಕೆಲವು ಶಾಸಕರ ಮಾತುಗಳಿಂದ ಸಿಡಿಮಿಡಿಗೊಂಡಿರುವ ಯಡಿಯೂರಪ್ಪ (Yadiyurappa) ಮಾಧ್ಯಮಗಳೊಂದಿಗೆ ಮಾತನಾಡಿದರು. ‘’ಯಾವ ಸೀಡಿಗೂ ಹೆದರುವವನಲ್ಲ ನಾನು. ಯಾವುದೇ ಅಸಮಾಧಾನವಿದ್ದರೆ ವರಿಷ್ಠರಿಗೆ ದೂರು ಕೊಡಿ. ಹಗುರವಾಗಿ ಮಾತನಾಡಿ ಪಕ್ಷದ ಘನತೆಗೆ ಕುಂದು ತರಬೇಡಿ’’ ಎಂದು ಮನವಿ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ : H.Nagesh: ರಾಜೀನಾಮೆ ನೀಡಿದ ಬೆನ್ನಲ್ಲೇ ನಾಗೇಶ್ ಗೆ ಸಂಪುಟ ದರ್ಜೆ ಸ್ಥಾನಮಾನ ಹುದ್ದೆ..!


‘’ವರಿಷ್ಠರ ಆಶೀರ್ವಾದ ನನ್ನ ಮೇಲಿದೆ”
ವರಿಷ್ಠರ ಆಶೀರ್ವಾದ ನನ್ನ ಮೇಲಿದೆ. ಅವರ ಸಂದೇಶದಂತೆ ಸಂಪುಟ (Cabinet) ವಿಸ್ತರಣೆ ಮಾಡಿದ್ದೇನೆ. ನನ್ನ  ಇತಿಮಿತಿಯಲ್ಲಿ ಏನು ಮಾಡಬಹುದೋ ಅದನ್ನೆಲ್ಲಾ ಮಾಡಿದ್ದೇನೆ. ತಪ್ಪಾಗಿದ್ದರೆ ವರಿಷ್ಠರು ಸರಿಪಡಿಸುತ್ತಾರೆ ಎಂದು ಹೇಳಿದ್ದಾರೆ ಯಡಿಯೂರಪ್ಪ.


ಏನಿದು ಬ್ಲ್ಯಾಕ್ ಮೇಲ್ ಸೀಡಿ..?
ಶಾಸಕ ಯತ್ನಾಳ್  (Yatnal) ಅವರಿಗೆ ಸಂಪುಟದಲ್ಲಿ ಸ್ಥಾನ ಮಿಸ್ ಆಗಿದೆ. ಹಾಗಾಗಿ ಯಡಿಯೂರಪ್ಪ ವಿರುದ್ಧ ಹರಿಹಾಯ್ದು ಮಾತನಾಡಿದ್ದಾರೆ. ಕೆಲವರು ಸೀಡಿ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ ಮಂತ್ರಿಗಳಾಗಿದ್ದಾರೆ. ಯಡಿಯೂರಪ್ಪ ರಕ್ತ ಸಂಬಂಧಿಗೆ ಹಣ ನೀಡಿ ಸಂಪುಟ ಸೇರಿದ್ದಾರೆ. ಸಂಪುಟಕ್ಕೆ ಸೇರಿದ ಮೂವರು ಮಂತ್ರಿಗಳು ಈ ಹಿಂದೆ ನೆಲಮಂಗಲ ರೆಸಾರ್ಟ್ ನಲ್ಲಿ (Resort) ಸಭೆ ನಡೆಸಿ, ಯಡಿಯೂರಪ್ಪ ಪದಚ್ಯುತಿಗೆ ಒಳಸಂಚು ನಡೆಸಿದ್ದರು. ಬಂಡಾಯಕ್ಕೆ ನನ್ನ ಬೆಂಬಲ ಕೂಡಾ ಕೋರಿದ್ದರು. ನಾನದಕ್ಕೆ ಸೊಪ್ಪು ಹಾಕಿರಲಿಲ್ಲ ಎಂದು ಹೇಳಿದ್ದರು. 


ಪವರ್ ಕಾರಿಡಾರ್ ನಲ್ಲಿ ಸೀಡಿಯದ್ದೇ ಚರ್ಚೆ:
ಯತ್ನಾಳ್ ಸೀಡಿ ಇಟ್ಟು ಬ್ಲಾಕ್ ಮೇಲ್ ವಿಚಾರ ಹೇಳುತ್ತಿರುವಂತೆಯೆ ರಾಜಕೀಯ ಪಡಸಾಲೆಯಲ್ಲಿ ಅದರದ್ದೇ ಚರ್ಚೆ ಆರಂಭವಾಗಿದೆ. ಅದು ಯಾರ ಸೀಡಿ, ಅದರಲ್ಲಿ ಯಾರಿದ್ದಾರೆ..? ಅದು ಮುಂದೆ ಯಾವ ತಿರುವು ಪಡೆಯಬಹುದು ಇತ್ಯಾದಿ ಪ್ರಶ್ನೆಗಳು ಸೃಷ್ಟಿಯಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.