ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಕರ್ಫ್ಯೂ ಶುಕ್ರವಾರ ಸಂಜೆ ಯಿಂದ ಸೋಮವಾರ ಬೆಳಿಗ್ಗೆ ವರೆಗೆ ಜಾರಿ ಇರಲಿದೆ. ಇದರಿಂದ ಸಾರಿಗೆ ಇಲಾಖೆಗೆ ಭಾರಿ ನಷ್ಟವಾಗಿದೆ. ಬಿಎಂಟಿಸಿ ಸಂಸ್ಥೆಗೆ ಒಟ್ಟು 6 ಕೋಟಿ ರೂಪಾಯಿ ಆದಾಯ ಇಳಿಮುಖವಾಗಿದೆ. 


COMMERCIAL BREAK
SCROLL TO CONTINUE READING

ಸಾಮಾನ್ಯ ದಿನಗಳಲ್ಲಿ ಬಿಎಂಟಿಸಿ(BMTC)ಗೆ ನಿತ್ಯ 3 ಕೋಟಿಗಿಂತ ಹೆಚ್ಚಿನ ಆದಾಯ ಬರುತ್ತಿತ್ತು. ಮೊನ್ನೆ ವೀಕೆಂಡ್ ಕರ್ಫ್ಯೂ ಕಾರಣದಿಂದ ಶನಿವಾರ 700, ಭಾನುವಾರ 1000 ಬಸ್ಸುಗಳ ಕಾರ್ಯಾಚರಣೆ ನಡೆಸಿವೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 


ಇದನ್ನೂ ಓದಿ : Bengaluru: ಟಿವಿ ನೋಡಬೇಡ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವಕ..!


ಬಿಎಂಟಿಸಿ ವೀಕೆಂಡ್ ಕರ್ಫ್ಯೂ(Weekend Curfew) ವೇಳೆ ಸಾರ್ವಜನಿಕ ಪ್ರಯಾಣಕ್ಕೆ ಅವಕಾಶ ನಿರ್ಬಂದಿಸಿದೆ. ಎರಡು ದಿನದಲ್ಲಿ KSRTC ಗೆ 10 ಕೋಟಿ ರೂಪಾಯಿ ಆದಾಯ ಇಳಿಕೆಯಾಗಿದೆ. ಶನಿವಾರ 4 ಕೋಟಿ ರೂ., ಮತ್ತು ಭಾನುವಾರ 6 ಕೋಟಿ ರೂ. ಆದಾಯ ಇಳಿಕೆಯಾಗಿದೆ.


ನಿತ್ಯ KSRTC ಗೆ 8 ಕೋಟಿ ಆದಾಯ ಬರುತಿತ್ತು. ವೀಕೆಂಡ್ ಕರ್ಫ್ಯೂ ವೇಳೆ ಶನಿವಾರ 4 ಕೋಟಿ, ಭಾನುವಾರ 2 ಕೋಟಿ ಆದಾಯ(KSRTC Revenue) ಬಂದಿದೆ. ಎರಡು ದಿನಗಳಲ್ಲಿ 10 ಕೋಟಿ ಆದಾಯ ಇಳಿಕೆಯಾಗಿದೆ. ಶನಿವಾರ 2500, ಭಾನುವಾರ 2500 ಬಸ್ಸುಗಳ ನ್ನು ಓಡಿಸಲಾಗಿದೆ. ವೀಕೆಂಡ್ ಕರ್ಫ್ಯೂ ವೇಳೆ ಸಾರ್ವಜನಿಕ ಪ್ರಯಾಣಕ್ಕೆ KSRTC ಅವಕಾಶ ಕಲ್ಪಿಸಿತ್ತು ಎಂದು KSRTC ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.