Bengaluru: ಟಿವಿ ನೋಡಬೇಡ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವಕ..!

ಚಾಕು ಇರಿದುಕೊಂಡು ಯುವಕ ಸೈಯದ್ ಸಾಹಿಲ್ ಎಂಬಾತ ಬೆಂಗಳೂರಿನ ಜೆ.ಜೆ.ನಗರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ

Written by - Malathesha M | Last Updated : Feb 24, 2022, 09:27 PM IST
  • ಟಿವಿ ನೋಡಬೇಡ ಅಂತ ಪೋಷಕರು ಹೇಳಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ
  • ಚಾಕು ಇರಿದುಕೊಂಡು ಸೈಯದ್ ಸಾಹಿಲ್ ಎಂಬಾತ ಬೆಂಗಳೂರಿನ ಜೆ.ಜೆ.ನಗರದಲ್ಲಿ ಆತ್ಮಹತ್ಯೆಗೆ ಶರಣು
  • ಟಿವಿ ನೋಡುವುದು ಬಿಟ್ಟು ಎಲ್ಲಾದರು ಕೆಲಸ ಮಾಡು ಎಂದು ಬುದ್ದಿವಾದ ಹೇಳಿದ್ದಕ್ಕೆ ಸೂಸೈಡ್
Bengaluru: ಟಿವಿ ನೋಡಬೇಡ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವಕ..! title=
ಟಿವಿ ನೋಡಬೇಡ ಎಂದಿದ್ದಕ್ಕೆ ಯುವಕ ಸೂಸೈಡ್

ಬೆಂಗಳೂರು: ಬರೀ ಟವಿ ನೋಡಬೇಡ, ತಿರುಗಾಟ ಕಡಿಮೆ ಮಾಡಿ ಕೆಲಸಕ್ಕೆ ಹೋಗು ಎಂಬ ಪೋಷಕರ ಮಾತಿಗೆ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru) ನಡೆದಿದೆ. ಜವಾಬ್ದಾರಿ ಇಲ್ಲದೆ ತಿರುಗಾಡುತ್ತಿದ್ದ ಮಗನಿಗೆ ಕೆಲಸಕ್ಕೆ ಹೋಗುವಂತೆ ಬೈದು ಬುದ್ದಿ ಹೇಳಿದಕ್ಕೆ ಮನೆಯಲ್ಲಿದ ತರಕಾರಿ ಕತ್ತರಿಸುವ ಚಾಕುವಿನಿಂದ ಕುಯ್ದುಕೊಂಡು ಈ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.   

ಜಗಜೀವನ್ ರಾಮ್ ನಗರ ಪೊಲೀಸ್ ಠಾಣಾ(Jagjivan Ram Nagar Police Station)ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, 23 ವರ್ಷದ ಸೈಯ್ಯದ್ ಸಾಹೀಲ್ ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ತಿಳಿದುಬಂದಿದೆ.‌ ಜೆ‌‌.ಜೆ.ನಗರದ ಬಾಡಿಗೆ ಮನೆಯಲ್ಲಿ ಮೃತನ ಕುಟುಂಬ ವಾಸವಾಗಿತ್ತು. ದುಶ್ಚಟಗಳಿಗೆ ದಾಸನಾಗಿದ್ದ  ಸಾಹೀಲ್ ಸ್ಕ್ರಾಪ್ ಕೆಲಸಕ್ಕೆ ಹೋಗುತ್ತಿದ್ದ. ಏರಿಯಾ ಹುಡುಗರೊಂದಿಗೆ ಸೇರಿಕೊಂಡು ಓಡಾಡಿಕೊಂಡಿದ್ದ ಇವನನ್ನು ಗಮನಿಸಿದ ಪೋಷಕರು ನೊಂದಿದ್ದರು.

ಇದನ್ನೂ ಓದಿ: COVID-19 3ನೇ ಅಲೆ: ಕಲ್ಯಾಣ ಮಂಟಪಗಳ ಶೇ.40ರಷ್ಟು ಬುಕಿಂಗ್ ರದ್ದು

ನಿನ್ನೆ(ಜ.9) ಕೆಲಸಕ್ಕೆ ಹೋಗದೆ ಮನೆಯಲ್ಲಿರುವಾಗ ತಂದೆ ಬೈದು ಬುದ್ದಿ ಹೇಳಿದ್ದಾರೆ. ನಿನ್ನ ಜೀವನ ರೂಪಿಸಿಕೋ, ಪೋಲಿ ಅಲೆಯಬೇಡ, ಹೆಚ್ಚು ಹೊತ್ತು ಟಿವಿ ನೋಡಬೇಡ ಎಂಬ ಬುದ್ದಿಮಾತಿಗೆ ಕೋಪಿಸಿಕೊಂಡ ಸೈಯ್ಯದ್ ಅಡುಗೆ ಮನೆಯಲ್ಲಿದ್ದ ತರಕಾರಿ ಕತ್ತರಿಸುವ ಚಾಕುವಿನಿಂದ ಕುಯ್ದುಕೊಂಡಿದ್ದ. ತನ್ನನ್ನು ಕೆಲಸಕ್ಕೆ ಹೋಗುವಂತೆ ಬಲವಂತ ಮಾಡದಂತೆ ತಾಯಿ ಎದುರು‌ ಕೂಗಾಡಿದ್ದ. ಆತನಿಗೆ ರಕ್ತಸ್ರಾವವಾಗರುವುದನ್ನು ಕಂಡು ತಾಯಿ ಪ್ಲಾಸ್ಟರ್ ಹಾಕಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು‌.‌

ಕೆಲ ಹೊತ್ತಿನ ಬಳಿಕ ಹೊಟ್ಟೆನೋವಿನಿಂದ ಬಳಲುತ್ತಿದ್ದನ್ನು ಕಂಡು ಪೋಷಕರು ಹೊಸನಗರ ಬಳಿಯ ಮಣಿಪಾಲ್‌ ಆಸ್ಪತ್ರೆ(Manipal Hospital)ಗೆ ಸೇರಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಇಂದು(ಜ.10) ನಸುಕಿನ ವೇಳೆ ಆತ‌ ಮೃತಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಪೋಷಕರಿಗೆ ಮೂವರು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳು ಸೇರಿ ಐವರ ಮಕ್ಕಳಿದ್ದು, ಈ ಪೈಕಿ ಸೈಯ್ಯದ್ 3ನೇಯವನಾಗಿದ್ದ.

ಇದನ್ನೂ ಓದಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೆ ಕೊರೊನಾ ದೃಢ, ಕಟೀಲ್ ಎರಡನೇ ಬಾರಿಗೆ ಕೊವಿಡ್ ಪಾಸಿಟಿವ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News