Details of Vande Bharat Express Train : ಕರ್ನಾಟಕ ರಾಜ್ಯದ ಮೂರನೇ ವಂದೇ ಭಾರತ ಎಕ್ಸಪ್ರೆಸ್‌ ರೈಲು ನಿನ್ನೆ ಅಂದರೆ ಸೆ.24 ರಂದು ಉದ್ಘಾಟನೆಗೊಂಡಿದ್ದು, ಇವತ್ತು ಅಂದರೆ ಸೆ.25 ರಂದು ಸೇವೆಗಳನ್ನು ಪ್ರಾರಂಭಿಸಿದೆ. ಬಹುನಿರೀಕ್ಷಿತ ವಂದೇ ಭಾರತ ಎಕ್ಸಪ್ರೆಸ್‌ ರೈಲು ಕಾಚೇಗೌಡದಿಂದ -ಯಶವಂತಪುರದವರೆಗೆ ಸಂಚರಿಸಲಿದ್ದು, ಹೊಸ ರೈಲು ಭಾರತದ ಎರಡು ಪ್ರಮುಖ ಟೆಕ್‌ ಸಿಟಿಗಳಾದ ಬೆಂಗಳೂರು-ಹೈದರಾಬಾದ್‌ನಗರಗಳನ್ನು ಸಂಚರಿಸಲಿದೆ.


COMMERCIAL BREAK
SCROLL TO CONTINUE READING

ರೈಲ್ವೆ ಅಧಿಕಾರಗಳು ಪ್ರಯಾಣಿಕರಿಗೆ ಚೇರ್‌ಕಾರ್ ಟಿಕೆಟ್ 1540 ರೂ ಮತ್ತು ಕಾರ್ಯನಿರ್ವಾಹಕ ವರ್ಗದ ಟಿಕೆಟ್‌ಗಳ ಬೆಲೆ 2865 ರೂ ಎಂಧು ತಿಳಸಿದೆ. ಇದಕ್ಕೆ ವ್ಯತಿರಿಕ್ತವಾಗಿ ಕಾಚೇಗೂಡದಿಂದ ಯಶವಂತಪುರದವರೆಗೆ ಪ್ರಯಾಣದ ದರ ಸ್ವಲ್ಪ ಹೆಚ್ಚಾಗಿರುತ್ತದೆ. ಮತ್ತು ಚೇರ್‌ಕಾರ್ ಟಿಕೆಟ್ 1600 ರೂ ಮತ್ತು ಕಾರ್ಯನಿರ್ವಾಹಕ ವರ್ಗದ ಟಿಕೆಟ್‌ಗಳ ಬೆಲೆ 2915 ರೂ ಆಗಿರುತ್ತದೆ.


ಇದನ್ನು ಓದಿ - ರಾಜ್ಯದ ಈ ಜಿಲ್ಲೆಗಳಲ್ಲಿ ಜಲಪ್ರಳಯದ ಮುನ್ನೆಚ್ಚರಿಕೆ! ಮಿಂಚು-ಗುಡುಗು ಸಹಿತ ಭಾರೀ ಗಾಳಿ ಬೀಸುವ ಸಾಧ್ಯತೆ


ಈಗಾಗಲೇ ಈ ಮಾರ್ಗದ ಅಂದರೆ ಬೆಂಗಳೂರು ಮತ್ತು ಹೈದರಾಬಾದ್‌ ಸಂಚರಿಸುವ ವಂದೇ ಭಾರತ ಎಕ್ಸಪ್ರೆಸ್‌ ರೈಲಿನ ಉದ್ಘಾಟನೆಯನ್ನು ಕಳೆದ ಭಾನುವಾರ ಅಂದರೆ ಸೆ.24 ರಂದು ಪ್ರಧಾನಿ ನರೇಂದ್ರ ಮೋದಿಯವರು ರೈಲಿಗೆ ಚಾಲನೆ ನೀಡಿದ್ದಾರೆ.


ಕಾಚೇಗೌಡ-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 20703 ಎಂದು ಗುರುತಿಸಲಾಗಿದ್ದು, ಅದೇ ದಿನ ಬೆಳಿಗ್ಗೆ 5:30 ಕ್ಕೆ ಕಾಚೇಗೌಡದಿಂದ ಹೊರಟು ಮಧ್ಯಾಹ್ನ 2 ಗಂಟೆಗೆ ಯಶವಂತಪುರ ತಲುಪಲಿದೆ. ರೈಲು ಮಹಬೂಬ್‌ನಗರ 6:49/6:50 ಕ್ಕೆ, ಕರ್ನೂಲ್ ಸಿಟಿ 8:24/8:25 ಕ್ಕೆ, ಅನಂತಪುರ 10:44/10:45 ಕ್ಕೆ, ಮತ್ತು ಧರ್ಮಾವರಂ ಸೇರಿದಂತೆ ಮಾರ್ಗ ಪ್ರಮುಖ ನಿಲ್ದಾಣಗಳ ಮೂಲಕ ಹಾಯ್ದು ಹೋಗಲಿದೆ.


ಶಾದ್‌ನಗರದಲ್ಲಿ ಮಧ್ಯಾಹ್ನ 1:15ಕ್ಕೆ ಆಗಮನ, ಮಧ್ಯಾಹ್ನ 1:17ಕ್ಕೆ ನಿರ್ಗಮನ, ಮಹಬೂಬನಗರದಲ್ಲಿ ಮಧ್ಯಾಹ್ನ 1:58ಕ್ಕೆ ಆಗಮನ, ಮಧ್ಯಾಹ್ನ 2:00ಕ್ಕೆ ನಿರ್ಗಮನ, ಗದ್ವಾಲ್‌ದಲ್ಲಿ ಮಧ್ಯಾಹ್ನ 3:30ಕ್ಕೆ ಆಗಮನ, 3:32ಕ್ಕೆ ನಿರ್ಗಮನ, ಕರ್ನೂಲ್ ನಗರದಲ್ಲಿ ಸಂಜೆ 4:15 ಕ್ಕೆ ಆಗಮನ, 4:17 ಕ್ಕೆ ನಿರ್ಗಮನ, ಧೋನೆಯಲ್ಲಿ ಸಂಜೆ 5:35 ಕ್ಕೆ ಆಗಮನ, 5:37 ಕ್ಕೆ ನಿರ್ಗಮನ, ಅನಂತಪುರದಲ್ಲಿ ರಾತ್ರಿ 7:25ಕ್ಕೆ ಆಗಮನ, 7:27ಕ್ಕೆ ನಿರ್ಗಮನ, ಧರ್ಮಾವರಂನಲ್ಲಿ ರಾತ್ರಿ 8:05ಕ್ಕೆ ಆಗಮನ, ರಾತ್ರಿ 8:10ಕ್ಕೆ ನಿರ್ಗಮನವಾಗಲಿದ್ದು, ರೈಲು ಈ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.


ಇದನ್ನು ಓದಿ - ರಾಕೇಶ್ ಶರ್ಮಾ ಅವರಿಂದ ಗಗನಯಾನ ಯೋಜನೆ ತನಕ ಭಾರತದ ಬಾಹ್ಯಾಕಾಶ ಯಾನ
 
ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಒಟ್ಟು ಎಂಟು ಕೋಚ್‌ಗಳನ್ನು ಒಳಗೊಂಡಿದ್ದು ಮತ್ತು ಎರಡು ಡ್ರೈವಿಂಗ್ ಟ್ರೈಲರ್ ಕೋಚ್‌ಗಳು, ನಾಲ್ಕು ಮೋಟಾರ್ ಕೋಚ್‌ಗಳು ಮತ್ತು ಎರಡು ಟ್ರೈಲರ್ ಕೋಚ್‌ಗಳನ್ನು ಒಳಗೊಂಡಿರುತ್ತದೆ. ಪ್ರಯಾಣಿಕರು ವಾರದಲ್ಲಿ ಆರು ದಿನ ಈ ಸೇವೆಯನ್ನು ಪಡೆಯಬಹುದಾಗಿದ್ದು, ಬುಧವಾರ ಮಾತ್ರ  ಈ ಸೇವೆಯಲ್ಲಿ ವಿನಾಯಿತಿ ಇದೆ.


ಈ ಎರಡು ಟೆಕ್‌ ಪ್ರದೇಶಗಳಿಗೆ ತಲುಪಲು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಪ್ರಯಾಣಿಕರಿಗೆ ಸುಲಭೀಕರಿಸುತ್ತದೆ. ಮತ್ತು ಕಡಿಮೆ ಸಮಯದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತಲುಪಲು ಸಹಾಯ ಮಾಡುತ್ತದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.