ಬೆಂಗಳೂರು: ಹಿಂದೂ ಮುಸ್ಲಿಂ(Hindu Muslim)ರು ಸಹೋದರರಂತೆ ಬಾಳಬೇಕು ಎಂಬುದು ನನ್ನ ಅಪೇಕ್ಷೆ. ಆದರೆ ಕೆಲ‌ವು ಕಿಡಿಗೇಡಿಗಳು ಸೌಹಾರ್ದತೆ ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ಸಿಎಂ ಈಗಾಗಲೇ ಕೊಟ್ಟಿದ್ದಾರೆ ಎಂದು  ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ(BS Yediyurappa) ಹೇಳಿದರು. 


COMMERCIAL BREAK
SCROLL TO CONTINUE READING

ಯಾರೂ ರಾಜ್ಯದ ಸಾಮರಸ್ಯವನ್ನು ಕದಡಬೇಡಿ. ಹಿಂದೂ ಮುಸ್ಲಿಮರು ಒಂದೇ ತಾಯಿ ಮಕ್ಕಳಂತೆ ಬಾಳಬೇಕು. ಮುಸ್ಲಿಮರು‌ ನೆಮ್ಮದಿ ಗೌರವದಿಂದ ಬಾಳಬೇಕಿದೆ. ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಸಿಎಂ ಸೂಚಿಸಿದ್ದಾರೆ ಎಂದರು. 


ಇದನ್ನು ಓದಿ: ಪಾಕ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್‌ರ ಲಂಡನ್‌ ನಿವಾಸದ ಮುಂದೆ ಪ್ರತಿಭಟನೆ


ಇನ್ನು ಇದೇ ಸಂದರ್ಭದಲ್ಲಿ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವ ವಿಚಾರವಾಗಿ ಮಾತನಾಡಿದರು. ಕಾಂಗ್ರೆಸ್‌(Congress) ಆಡಳಿತದಲ್ಲಿ ಆಗಿದ್ದ ಬೆಲೆ ಏರಿಕೆಗೆ ಹೋಲಿಸಿದರೆ ಈಗಿನ ದರ ಏನೇನು ಅಲ್ಲ. ಕಾಂಗ್ರೆಸ್‌ನವ್ರಿಗೆ ಬೇರೇನೂ ಚಟುವಟಿಕೆ ಇಲ್ಲ. ಹೀಗಾಗಿ ಈ ಕೆಲಸಗಳನ್ನು ಮಾಡ್ತಿದಾರೆ ಎಂದು ನುಡಿದರು. 


ಅವರಿಗೆ ನಾನು ಒಂದು ಮಾತು ಹೇಳಲು ಇಷ್ಟಪಡುತ್ತೇನೆ.  ನಾವೆಲ್ಲರೂ ಒಟ್ಟಾಗಿ ಸೇರಿ ರಾಜ್ಯದ ಅಭಿವೃದ್ಧಿ ಮಾಡಬೇಕು. ಸಣ್ಣ ಪುಟ್ಟ ವಿಷಯಗಳಿಗೆ ಗೊಂದಲ ಉಂಟು ಮಾಡುವ ಕೆಲಸ ಮಾಡಬಾರದು. ವಿಶೇಷವಾಗಿ ಸಿದ್ದರಾಮಯ್ಯ, ಡಿಕೆಶಿಯವರು ಗೊಂದಲ ಮೂಡಿಸುವ ಕೆಲಸ ಮಾಡಬಾರದು ಎಂದರು. 


ಇದನ್ನು ಓದಿ: White Hair Problem: ಬಿಳಿ ಕೂದಲಿನ ಸಮಸ್ಯೆಗೆ ಸರಳ ಮನೆಮದ್ದು


ನಾಳೆಯಿಂದ ಪ್ರವಾಸ: ನಾಳೆಯಿಂದ ಮೂರು ತಂಡಗಳಂತೆ ಮಾಡಿ ರಾಜ್ಯ ಪ್ರವಾಸ ಮಾಡುತ್ತಿದ್ದೇವೆ. ಪಕ್ಷ ಬಲಪಡಿಸಲು ಈ ಪ್ರವಾಸ ಕೈಗೊಳ್ಳುತ್ತಿದೇವೆ. ಮುಂದಿನ ಚುನಾವಣೆಗೆ ಸಿದ್ಧತೆಯನ್ನು ಈಗಾಗಲೇ ಮಾಡುತ್ತಿದ್ದೇವೆ ಎಂದರು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.