Snake Video: ಸ್ನಾನದ ಮನೆಯಲ್ಲಿ ಅಡಗಿ ಕೂತಿದ್ದ ಕಾಳಿಂಗ ಸರ್ಪ!

Snake Video: ತುಂಬಾ ವೈಲ್ಡ್ ಆಗಿದ್ದ ಕಾಳಿಂಗ ಸರ್ಪವನ್ನು ಹಿಡಿಯಲು ಹರಸಾಹಸ.

Written by - Yashaswini V | Last Updated : Apr 11, 2022, 10:05 AM IST
  • ಸ್ನಾನದಮನೆಯಲ್ಲಿ ಸುಮಾರು 11 ಅಡಿ ಉದ್ದದ 8 ಕೆಜಿ ತೂಕದ ಕಾಳಿಂಗ ಸರ್ಪ
  • ಸ್ನಾನದಮನೆಯಲ್ಲಿ ಕಾಳಿಂಗ ಸರ್ಪವನ್ನು ಕಂಡು ದಂಗಾದ ಮನೆ ಮಂದಿ
  • ಕಾಳಿಂಗ ಸರ್ಪವನ್ನು ಹಿಡಿಯಲು ಹರಸಾಹಾಸ
Snake Video: ಸ್ನಾನದ ಮನೆಯಲ್ಲಿ ಅಡಗಿ ಕೂತಿದ್ದ ಕಾಳಿಂಗ ಸರ್ಪ!
King Cobra in bathroom Viral Video

Snake Video: ವ್ಯಕ್ತಿ ಎಷ್ಟೇ ಶಕ್ತಿಶಾಲಿ ಆಗಿದ್ದರೂ ಅವರಿಗೆ ಪ್ರಾಣಿಗಳ ಬಗ್ಗೆ ಎಷ್ಟೇ ಪ್ರೀತಿಯಿದ್ದರೂ ಸಹ ಹಾವು ಎಂಬ ಹೆಸರು ಕೇಳಿದೊಡನೆಯೇ ಒಂದು ಕ್ಷಣವಾದರೂ ಎದೆ ನಡುಗುತ್ತದೆ. ಹಾವುಗಳಲ್ಲೇ ಕಾಳಿಂಗ ಸರ್ಪವನ್ನು ಅತ್ಯಂತ ವಿಷಕಾರಿ ಸರ್ಪ ಎಂದು ಹೇಳಲಾಗುತ್ತದೆ. ಅಂತಹ ಸರ್ಪ ಮನೆಗೆ ಬಂದಾಗ, ಅದರಲ್ಲೂ ಸ್ನಾನದ ಮನೆಯಲ್ಲಿ ಅಡಗಿ ಕೂತಾಗ ಹೇಗಿರುತ್ತೇ...! ಅಬ್ಬಬ್ಬಾ... ಅದನ್ನು ನೆನೆಸಿಕೊಂಡರೂ ಕೂಡ ಎದೆ ಝಲ್ ಎಂದೆನಿಸುತ್ತದೆ. ಅಂತಹದ್ದೇ ಒಂದು ಘಟನೆ ತೀರ್ಥಹಳ್ಳಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

Add Zee News as a Preferred Source

ಸ್ನಾನದ ಮನೆಯಲ್ಲಿ ಅಡಗಿ ಕೂತಿದ್ದ ಕಾಳಿಂಗ ಸರ್ಪ:
ವಾಸ್ತವವಾಗಿ, ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿಯ ತ್ಯಾನಂದೂರು ಗ್ರಾಮದಲ್ಲಿ ಅನಂತ ನಾಯ್ಕ್ ಎಂಬುವರ ಮನೆಯ  ಸ್ನಾನದಮನೆಯಲ್ಲಿ ಸುಮಾರು 11 ಅಡಿ ಉದ್ದದ 8 ಕೆಜಿ ತೂಕದ ಕಾಳಿಂಗ ಸರ್ಪವೊಂದು ಅಡಗಿ ಕುಳಿತಿತ್ತು ಎನ್ನಲಾಗಿದೆ. ಇದನ್ನು ಕಂಡ ಮನೆಯವರು ದಂಗಾಗಿದ್ದಾರೆ.

ಇದನ್ನೂ ಓದಿ- Child With Snake Video: ಪುಟ್ಟ ಬಾಲಕಿಯ ಮುಂದೆ ದೈತ್ಯ ಹಾವು, ಮುಂದೇನಾಯ್ತು... ಈ ವಿಡಿಯೋ ನೋಡಿ...

ವಿಷಯ ತಿಳಿಯುತ್ತಿದ್ದಂತೆ ಹಾವು ಹಿಡಿಯಲು ಶಿವಮೊಗ್ಗದ ಸ್ನೇಕ್ ಕಿರಣ್ ಎಂಬುವವರನ್ನು ಕರೆಸಲಾಗಿದೆ. ಈ ಕಾಳಿಂಗ ಸರ್ಪ ಎಷ್ಟು ವೈಲ್ಡ್ ಆಗಿತ್ತೆಂದರೆ ಹಾವು ಹಿಡಿಯಲು ಸ್ನೇಕ್ ಕಿರಣ್ ಅವರು ಹರಸಾಹಸ ಪಡಬೇಕಾಯಿತು. ಈ ವೇಳೆ ಹಾವು ಹಲವು ಬಾರ್ ಬುಸ್ ಎಂದು ಸ್ನೇಕ್ ಕಿರಣ್ ಅವರನ್ನು ಎದುರಿಸಿದ್ದೂ ಉಂಟು. ಆದಾಗ್ಯೂ, ತುಂಬಾ ವೈಲ್ಡ್ ಆಗಿದ್ದ ಕಾಳಿಂಗ ಸರ್ಪವನ್ನು ಹಿಡಿದು ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಕಾಡಿಗೆ ಬಿಡಲಾಗಿದೆ. 

ಇದನ್ನೂ ಓದಿ- Snake Birth Video: ಹಾವಿನ ಜನನದ ವಿಡಿಯೋ..! ಅಬ್ಬಬ್ಬಾ, ಇದನ್ನೊಮ್ಮೆ ನೋಡಿ...

ಸುಮಾರು 11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿಯುವ ಈ ಸಾಹಸಮಯ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ನೀವೂ ಒಮ್ಮೆ ನೋಡಿ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News