ಬೆಂಗಳೂರು : ರಾಜ್ಯದಲ್ಲಿ ಉಪಚುನಾವಣೆಯ (By Election)ಕಾವು ಜೋರಾಗಿದೆ. ನ. 3 ರಂದುರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳ ಉಪಚುನಾವಣೆ ನಡೆಯಲಿದೆ.


COMMERCIAL BREAK
SCROLL TO CONTINUE READING

ಆರ್ ಆರ್ ನಗರ ಮತ್ತು ಶಿರಾ ಉಪಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವುದಿಲ್ಲ ಎಂದಿದ್ದ ಸಿಎಂ ಯಡಿಯೂರಪ್ಪ (CM Yadiyurappa) ಕೊನೆಗೂ ಪ್ರಚಾರ ಕಣಕ್ಕೆ ಧುಮುಕಿದ್ದಾರೆ. ಇಂದು ಶಿರಾ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಮತಯಾಚನೆ ಮಾಡಲಿದ್ದಾರೆ. ಶಿರಾದ ಮಾದಲೂರಿನಲ್ಲಿ ಚುನಾವಣಾ ಪ್ರಚಾರದಲ್ಲಿ ಸಿಎಂ ಯಡಿಯೂರಪ್ಪ ಭಾಗಿಯಾಗಲಿದ್ದಾರೆ. 


ಸಿಎಂ ಯಡಿಯೂರಪ್ಪನವರು, ಅಶೋಕ್ ಸೇರಿ ಇಡೀ ರಾಜ್ಯ ಮಾರಲು ಹೊರಟಿದ್ದಾರೆ-ಡಿ.ಕೆ.ಶಿವಕುಮಾರ್


ಮಾದಲೂರಿನಿಂದಲೇ ಯಾಕೆ ಸಿಎಂ  ಪ್ರಚಾರ :


ಸಿಎಂ ಮಾದಲೂರಿನಿಂದ ಪ್ರಚಾರ ರಂಭಿಸಿರುವ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನ ಸಿಎಂ ಪ್ರಚಾರದ ವೇಳೆ ಈಡೇರಿಸಲಿದ್ದಾರೆ ಎಂಬ ಮಾತು ಕೂಡಾ ಕೇಳಿಬರುತ್ತಿದೆ. ಪ್ರಚಾರದ ವೇಳೆ ಮಾದಲೂರು ಕೆರೆಗೆ ನೀರು ಹರಿಸುವ ಬಗ್ಗೆ ಸಿಎಂ ಘೋಷಿಸಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಮಾದಲೂರು ಕೆರೆಗೆ ನೀರು ಹರಿಸಿದ್ದೇ ಆದರೆ ಇದು ಈ ಭಾಗದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಸುಮಾರು 40ರಿಂದ 50 ಹಳ್ಳಿಗಳು ಇದರ ಲಾಭ ಪಡೆಯಲಿವೆ. ಅಲ್ಲದೆ ಬಿಜೆಪಿ ಅಭ್ಯರ್ಥಿ ಪರ ಇಲ್ಲಿನ ಮತದಾರರ ಮತ ಸೆಳೆಯಲು ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರವೂ ಇದೆ. ಹೀಗಾಗಿ ಸಿಎಂ ಮಾದಲೂರಿನಿಂದ ಪ್ರಚಾರ ಆರಂಭಿಸಲಿದ್ದಾರೆ ಎನ್ನಲಾಗಿದೆ. 


ಇದೊಂದು ಪಂಚೇಂದ್ರಿಯವನ್ನು ಕಳೆದುಕೊಂಡು ಮರಗಟ್ಟಿ ಹೋಗಿರುವ ಸರ್ಕಾರ- ಸಿದ್ಧರಾಮಯ್ಯ ವಾಗ್ದಾಳಿ


ಇಂದು ಶಿರಾ ಅಭ್ಯರ್ಥಿ ಪರ ಮತ ಬೇಟೆ ನಡೆಸಲಿರುವ ಸಿಎಂ ಯಡಿಯೂರಪ್ಪ ನಾಳೆ ರಾಜರಾಜೇಶ್ವರಿ ನಗರದ ಅಭ್ಯರ್ಥಿ ಮುನಿರತ್ನ ಪರ ಬ್ಯಾಟಿಂಗ್  ನಡೆಸಲಿದ್ದಾರೆ