ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ಮೆಟ್ರೋ ಮಾರ್ಗ ಕಂಪ್ಲೀಟ್, ಟ್ರಯಲ್ ರನ್ ಗೆ ಮುಹೂರ್ತ ಫಿಕ್ಸ್ .!
ಅಕ್ಟೋಬರ್ 25 ರಿಂದ ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ವರೆಗೆ ಮೆಟ್ರೋ ಮಾರ್ಗದ ಟ್ರಯಲ್ ರನ್ ಆರಂಭವಾಗಲಿದೆ. ಒಟ್ಟು 45 ದಿನಗಳ ಕಾಲ ಟ್ರಯಲ್ ರನ್ ನಡೆಯಲಿದೆ.
ಬೆಂಗಳೂರು : ದಸರಾ ಸಮಯದಲ್ಲಿ ಬೆಂಗಳೂರಿಗರಿಗೆ ಗುಡ್ ನ್ಯೂಸ್ ಸಿಕ್ಕಿದೆ. ವೈಟ್ ಫೀಲ್ಡ್ ನಿವಾಸಿಗಳಿಗೆ ನಮ್ಮ ಮೆಟ್ರೋ ಸಿಹಿ ಸುದ್ದಿ ನೀಡಿದೆ. ಹೌದು, ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ವರೆಗೆ ಮೆಟ್ರೋ ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. ಈ ಮಾರ್ಗದ ಟ್ರಯಲ್ ರನ್ ಗೆ ಮುಹೂರ್ತ ಕೂಡಾ ಫಿಕ್ಸ್ ಆಗಿದೆ.
ಅಕ್ಟೋಬರ್ 25 ರಿಂದ ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ವರೆಗೆ ಮೆಟ್ರೋ ಮಾರ್ಗದ ಟ್ರಯಲ್ ರನ್ ಆರಂಭವಾಗಲಿದೆ. ಒಟ್ಟು 45 ದಿನಗಳ ಕಾಲ ಟ್ರಯಲ್ ರನ್ ನಡೆಯಲಿದೆ. ಸುಮಾರು 2 ವರ್ಷಗಳಿಂದ ಬೈಯಪ್ಪನಹಳ್ಳಿ ಹಾಗೂ ವೈಟ್ ಫೀಲ್ಡ್ ನಡುವಿನ ಕಾಮಗಾರಿ ವಿಳಂಬವಾಗಿತ್ತು. ಇದೀಗ ಹಬ್ಬದ ಹೊತ್ತಿನಲ್ಲೇ ಈ ಭಾಗದ ಜನರ ನಿರೀಕ್ಷೆ ಕೊನೆಗೊಂಡಿದೆ.
ಇದನ್ನೂ ಓದಿ : Video : ಎಣ್ಣೆ ಹೊಡೆದು 5 ಅಡಿ ನಾಗರಹಾವಿನ ಜೊತೆ ಹುಚ್ಚಾಟವಾಡಿದ ಯುವಕ!
ಅಕ್ಟೋಬರ್ 25 ರಿಂದ ಈ ಮಾರ್ಗದಲ್ಲಿ ಟ್ರಯಲ್ ರನ್ ಆರಂಭವಾಗಲಿದೆ. ಮುಂದಿನ ವರ್ಷ ಮಾರ್ಚ್ ನಲ್ಲಿ ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ವರೆಗೂ ಮೆಟ್ರೋ ಸಂಚಾರ ಮಾಡುವ ಅವಕಾಶ ಸಿಗಲಿದೆ. 2020ರಲ್ಲೇ ಮುಗಿಯಬೇಕಿದ್ದ ಕಾಮಗಾರಿ, ಹಲವು ಸಮಸ್ಯೆಗಳ ಕಾರಣಗಳಿಂದಾಗಿ ವಿಳಂಬವಾಗಿತ್ತು.
ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ವರೆಗೆ ಮೆಟ್ರೋ ಮಾರ್ಗದ ಟ್ರಯಲ್ ರನ್ ಬಗ್ಗೆ ನಮ್ಮಮೆಟ್ರೋ ನಿಗಮ ಖಚಿತ ಮಾಹಿತಿ ನೀಡಿದೆ. ಈ ಮೂಲಕ ಕೆಂಗೇರಿಯಿಂದ ಬೈಯ್ಯಪ್ಪನಹಳ್ಳಿ ವರೆಗಿನ ನೇರಳೆ ಮಾರ್ಗದ ವಿಸ್ತರಣೆಯಿಂದ ಇದೀಗ ಮತ್ತಷ್ಟು ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಇದನ್ನೂ ಓದಿ : Mysore Dasara 2022 : ಐತಿಹಾಸಿಕ ಜಂಬೂಸವಾರಿ ಮೆರವಣಿಗೆ ಸಂಸ್ಕೃತಿ ನಗರಿ ಮೈಸೂರು ರೆಡಿ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.