Cabinet Meeting: ನಾಳೆ ಸಚಿವ ಸಂಪುಟ ಸಭೆ: ಹೊಸ ಖಾತೆ ಜೊತೆ ಬರಲಿದ್ದಾರೆ ನೂತನ ಸಚಿವರು..!
ಶುಕ್ರವಾರ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಸಂಜೆ ನಾಲ್ಕು ಗಂಟೆಗೆ ನಡೆಯಲಿರುವ ಸಭೆಗೆ ನೂತನ ಸಚಿವರು ಹೊಸ ಖಾತೆಗಳೊಂದಿಗೆ ಆಗಮಿಸಲಿದ್ದಾರೆ.
ಬೆಂಗಳೂರು: ಶುಕ್ರವಾರ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಸಂಜೆ ನಾಲ್ಕು ಗಂಟೆಗೆ ನಡೆಯಲಿರುವ ಸಭೆಗೆ ನೂತನ ಸಚಿವರು ಹೊಸ ಖಾತೆಗಳೊಂದಿಗೆ ಆಗಮಿಸಲಿದ್ದಾರೆ.
ಏಳು ಸಚಿವರು ಹೊಸದಾಗಿ ಪ್ರಮಾಣ ವಚನ() ಸ್ವೀಕರಿಸಿದ್ದು, ಯಾರ್ಯಾರಿಗೆ ಯಾವ ಯಾವ ಖಾತೆ ಹಂಚಿಕೆ ಮಾಡಲಾಗುವುದು ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ರಾಮಲಿಂಗಾರೆಡ್ಡಿ ಹಾಗೂ ಧೃವನಾರಾಯಣ್ ನೇಮಕ
ಸದ್ಯದ ಮಟ್ಟಿಗೆ ನಡೆಯುತ್ತಿರುವ ಚರ್ಚೆಯ ಪ್ರಕಾರ ಅರವಿಂದ ಲಿಂಬಾವಳಿ(Aravind Limbavali)ಗೆ ಉನ್ನತ ಶಿಕ್ಷಣಸ ಸಚಿವಾಲಯ, ಉಮೇಶ್ ಕತ್ತಿಗೆ ಸಣ್ಣ ನೀರಾವರಿ ಅಥವಾ ತೋಟಗಾರಿಕೆ ಸಚಿವಾಲಯ, ಯೋಗೇಶ್ವರ್ಗೆ ಪ್ರವಾಸೊದ್ಯಮ, ರೇಷ್ಮೆ ಸಚಿವಾಲಯ, ಎಂಟಿಬಿ ನಾಗರಾಜ್ಗೆ ಅಬಕಾರಿ ಇಲಾಖೆ, ಮುರಗೇಶ್ ನಿರಾಣಿಗೆ ಇಂಧನ ಅಥವಾ ಸಣ್ಣ ಕೈಗಾರಿಕೆ, ಅಂಗಾರಗೆ ಒಳನಾಡು, ಬಂದರು, ಮೀನುಗಾರಿಕೆ ಹಾಗೂ ಆರ್,ಶಂಕರ್ಗೆ ಕನ್ನಡ ಮತ್ತು ಸಂಸ್ಕೃತಿ, ಯುವಜನಸೇವಾ ಇಲಾಖೆಯ ಜವಾಬ್ದಾರಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಆರ್.ಶಂಕರ್ ಇದಕ್ಕೆ ಒಪ್ಪಲಿಲ್ಲ ಅಂದರೆ ಸಣ್ಣ ಕೈಗಾರಿಕೆ ಇಲಾಖೆಯ ಜವಾಬ್ದಾರಿಯನ್ನು ನೀಡುವ ಸಾಧ್ಯತೆಯಿದೆ.
'20 ಲಕ್ಷ ಕೋಟಿ ರೂ ಯಾರಿಗೆ ತಲುಪಿತು ಎಂಬುದರ ಬಗ್ಗೆ ಮಾಹಿತಿ ಕೊಡಿ'
ಇಂದು ರಾತ್ರಿ ಸಚಿವರ ಜತೆ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಲಿದ್ದಾರೆ. ನಾಳೆ ಬೆಳಿಗ್ಗೆ ಸಚಿವರ ಖಾತೆಗಳ ಪಟ್ಟಿ ಪ್ರಕಟ ಮಾಡಲಾಗುವುದು ಎನ್ನಲಾಗಿದೆ.
Sowmya Reddy: 'ಲೇಡಿ ಕಾನ್ಸ್ ಸ್ಟೇಬಲ್' ಮೇಲೆ ಹಲ್ಲೆ ಮಾಡಿದ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.