ಬೆಂಗಳೂರು:  Da Vinci Xi ರೋಬೋಟಿಕ್‌ ಟೆಕ್ನಾಲಜಿ ಮೂಲಕ ಕೇವಲ 53 ತಿಂಗಳಲ್ಲಿ ಬರೋಬ್ಬರಿ 500 ಮೂತ್ರಶಾಸ್ತ್ರ ಸಂಬಂಧಿಸಿದ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸುವ ಮೂಲಕ ಫೊರ್ಟಿಸ್‌ ಆಸ್ಪತ್ರೆ ಸಾಧನೆ ಮಾಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅದ್ದೂರಿಯಾಗಿ ನಡೆದ ಗವಿಸಿದ್ದೇಶ್ವರ ರಥೋತ್ಸವ; ದಕ್ಷಿಣ ಭಾರತದ ಕುಂಬಮೇಳದಲ್ಲಿ ಲಕ್ಷಾಂತರ ಭಕ್ತರು


ಈ ಕುರಿತು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫೋರ್ಟಿಸ್ ಆಸ್ಪತ್ರೆಯ ಮೂತ್ರಶಾಸ್ತ್ರ ತಜ್ಞ ಡಾ. ಮೋಹನ್ ಕೇಶವಮೂರ್ತಿ,  “ಡಾ ವಿನ್ಸಿ ಕ್ಸಿ (Da Vinci Xi) ಎಂಬ ರೋಬೋಟಿಕ್‌ನನ್ನು 2017ರಲ್ಲಿ ಪರಿಚಯಿಸಲಾಗಿತ್ತು. ಈ ರೋಬೋಟಿಕ್‌ ತಂತ್ರಜ್ಞಾನವನ್ನು ಬಳಸಿಕೊಂಡು ಮೂತ್ರಶಾಸ್ತ್ರಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ, ಯುರೋ-ಆಂಕೊಲಾಜಿ, ಯುರೋ-ಗೈನೆಕಾಲಜಿ, ಕಿಡ್ನಿ ಕಸಿ ಸೇರಿದಂತೆ ಹಲವು ರೀತಿಯ ಶಸ್ತ್ರಚಿಕಿತ್ಸೆಯನ್ನು ಕಡಿಮೆ ಅವಧಿಯಲ್ಲಿ, ರೋಗಿಗಳಿಗೆ ನೋವುಂಟಾಗದೇ, ಚಿಕಿತ್ಸೆ ನಂತರ ಉಂಟಾಗುವ ಸೋಂಕು ತಡೆಯುವುದು, ಯಾವುದೇ ಅಪಾಯವಿಲ್ಲದೇ ಸುಲಭವಾಗಿ ಹಾಗೂ ಯಶಸ್ವಿಯಾಗಿ ಮೂತ್ರಕೋಶಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಯನ್ನು ನಡೆಸಲು ಇದು ಸಾಕಷ್ಟು ಸಹಾಯ ಮಾಡಿದೆ. ಕೆಲವರಿಗೆ ಹಳೆ ಮಾದರಿಯ ಚಿಕಿತ್ಸೆಯ ನಂತರ ಡಯಾಬಿಟಿಸ್‌ ಬರುವ ಸಾಧ್ಯತೆ ಇರುತ್ತಿತ್ತು, ಆದರೆ, ರೋಬೋಟಿಕ್‌ ಚಿಕಿತ್ಸೆಯು ಆ ಅಪಾಯವನ್ನೂ ಕಡಿಮೆ ಮಾಡಿದೆ” ಎಂದರು.


ಈ ತಂತ್ರಜ್ಞಾನ ಬಳಸಿಕೊಂಡು ನಿಖರವಾದ ಶಸ್ತ್ರಚಿಕಿತ್ಸೆಗೆ ಅನುವು ಮಾಡಿಕೊಡುತ್ತದೆ. ಇದರ ಸಹಾಯದಿಂದಲೇ ಕೇವಲ 53 ತಿಂಗಳಲ್ಲಿ 500 ಶಸ್ತ್ರಚಿಕಿತ್ಸೆ ನಡೆಸಿ, ಮೈಲುಗಲ್ಲು ಸಾಧಿಸಿದ್ದೇವೆ. ಈ 500 ರೋಗಿಗಳ ಚಿಕಿತ್ಸೆಯು ಯಶಸ್ವಿಯಾಗಿರುವುದು ಮತ್ತೊಂದು ಸಂತಸದ ವಿಷಯ ಎಂದರು.


ಪ್ರಾಸ್ಟೇಟ್‌ ಕ್ಯಾನ್ಸರ್‌ ಪತ್ತೆಗೆ ಹೊಸ ಟೆಕ್ನಾಲಜಿ: ಮತ್ತೊಂದು ಮಹತ್ವದ ವಿಷಯವೆಂದರೆ, ಪುರುಷರನ್ನು ಅತಿ ಹೆಚ್ಚು ಬಾಧಿಸುವ ಪ್ರಾಸ್ಟೇಟ್‌ ಕ್ಯಾನ್ಸರ್‌ನನ್ನು ಆರಂಭದಲ್ಲಿಯೇ ಪತ್ತೆ ಹಚ್ಚಲು ದೇಶದಲ್ಲೇ ಮೊದಲ ಬಾರಿಗೆ ಫೋರ್ಟಿಸ್‌ ಆಸ್ಪತ್ರೆ ನೂತನ ಟೆಕ್ನಾಲಜಿಯನ್ನು ಕಂಡು ಹಿಡಿದಿದೆ. ಪ್ರಾಸ್ಟೇಟ್‌ ಕ್ಯಾನ್ಸರ್‌ನ ಪತ್ತೆಗೆ “ಟ್ರಾನ್ಸ್‌ರೆಕ್ಟಲ್ BK ಅಲ್ಟ್ರಾಸೌಂಡ್ MRI ಫ್ಯೂಷನ್ ಬಯಾಪ್ಸಿ”ಯನ್ನು ಬಳಸಿಕೊಂಡು, ನಿಖರವಾಗಿ ನೋಡಲು ಸಾಧ್ಯವಾಗಲಿದೆ ಎಂದು ವಿವರಿಸಿದರು. ಪ್ರಾಸ್ಟೇಟ್‌ ಗ್ರಂಥಿಯಲ್ಲಿ ಇರುವ (ಪುರುಷರಲ್ಲಿ ವೀರ್ಯವನ್ನು ಉತ್ಪಾಧಿಸುವ ಗ್ರಂಧಿಯನ್ನೇ ಪ್ರಾಸ್ಟೇಟ್‌ ಎನ್ನಲಾಗುವುದು) ಕ್ಯಾನ್ಸರ್‌ ಗಡ್ಡೆಯನ್ನು ಈ ಎಂಆರ್‌ಐನ ಮೂಲಕ ಸ್ಪಷ್ಟವಾಗಿ ನೋಡಬಹುದು. ಇದರಿಂದ ಆ ಕ್ಯಾನ್ಸರ್‌ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕಲು ನೆರವು ನೀಡಲಿದೆ. ಶೇ. 47ರಷ್ಟು ಪ್ರಮಾಣದಲ್ಲಿ ಗಡ್ಡೆಯ ಸ್ಪಷ್ಟವಾದ ದೃಶ್ಯಗಳನ್ನು ಈ ಟ್ರಾನ್ಸ್‌ರೆಕ್ಟಲ್ BK ಅಲ್ಟ್ರಾಸೌಂಡ್ MRI ಫ್ಯೂಷನ್ ಬಯಾಪ್ಸಿ ಮೂಲಕ ಪಡೆದುಕೊಳ್ಳಬಹುದು. ಪ್ರಾಸ್ಟಿಟ್‌ ಕ್ಯಾನ್ಸರ್‌ ಪತ್ತೆ ಅತ್ಯಂತ ಕಷ್ಟಕರವಾದ್ದು, ಇದುವರೆಗೂ ಇದರ ಪತ್ತೆಗೆ ನಿಖರವಾದ ಟೆಕ್ನಾಲಜಿ ಇಲ್ಲದಿರುವುದು, ಪ್ರಾರಂಭದಲ್ಲಿಯೇ ಪತ್ತೆ ಹಚ್ಚಲು ಕಷ್ಟವಾಗುತ್ತಿತ್ತು. ಇದೀಗ ಈ ಟೆಕ್ನಾಲಜಿ ಅಳವಡಿಸಿಕೊಳ್ಳುತ್ತಿರುವುದರಿಂದ ಈ ಕ್ಯಾನ್ಸರ್‌ ಹೊಂದಿರುವವರನ್ನು ಪ್ರಾರಂಭದಲ್ಲಿಯೇ ಪತ್ತೆ ಹಚ್ಚಲು ನೆರವಾಗಲಿದೆ ಎಂದರು.


ಬೆಂಗಳೂರಿನ ಫೋರ್ಟಿಸ್ ಹಾಸ್ಪಿಟಲ್ಸ್‌ನ ಬಿಸಿನೆಸ್ ಹೆಡ್ ಅಕ್ಷಯ್ ಓಲೇಟಿ, ಕೇವಲ 53 ತಿಂಗಳಲ್ಲಿ 500 ರೊಬೊಟಿಕ್ ಶಸ್ತ್ರಚಿಕಿತ್ಸೆ ನಡೆಸಿರುವುದು ನಿಜಕ್ಕೂ ನಮ್ಮೆಲ್ಲರ ಪ್ರಶಂಸೆಗೆ ಅರ್ಹವಾದ ಮೈಲಿಗಲ್ಲು. ದಾಖಲೆ ಸಮಯದ ಸಾಧನೆಯು ನಮ್ಮ ಮೂತ್ರಶಾಸ್ತ್ರ ತಂಡದ ಕ್ಲಿನಿಕಲ್ ಸಾಮರ್ಥ್ಯದ ಬಗ್ಗೆ ಹೇಳುತ್ತದೆ. ಇದಷ್ಟೇ ಅಲ್ಲದೆ, ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ನಮ್ಮ ರೋಗಿಗಳಿಗೆ ಉತ್ತಮ ಗುಣಮಟ್ಟದ ಆರೈಕೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. BK ಅಲ್ಟ್ರಾಸೌಂಡ್ MRI ಫ್ಯೂಷನ್ ಬಯಾಪ್ಸಿ ಪರಿಹಾರದ ಪರಿಚಯದೊಂದಿಗೆ, ರೋಗಿಗಳಲ್ಲಿ ಅತ್ಯುತ್ತಮವಾದ ವೈದ್ಯಕೀಯ ಫಲಿತಾಂಶಗಳನ್ನು ನೋಡಲು ನಾವು ಭರವಸೆ ಹೊಂದಿದ್ದೇವೆ. ಈ ನವೀನ ಪರಿಹಾರವು ಆರೋಗ್ಯ ರಕ್ಷಣೆಯ ಭವಿಷ್ಯವನ್ನು ಪ್ರತಿನಿಧಿಸುತ್ತದೆ ಮತ್ತು ಭಾರತದಲ್ಲಿ ಮೊದಲ ಬಾರಿಗೆ ಈ ತಾಂತ್ರಿಕ ಪ್ರಗತಿಯನ್ನು ಪರಿಚಯಿಸುವ ಮೂಲಕ ನಾವು ಮುಂಚೂಣಿಯಲ್ಲಿರಲು ಹೆಮ್ಮೆಪಡುತ್ತೇವೆ ಎಂದರು.


ಹೆಲ್ತ್‌ವೇರ್ ಇಂಡಿಯಾ ನಿರ್ದೇಶಕರಾದ ಶ್ರೀರಾಮ್ ನಾರಾಯಣ್ ಮಾತನಾಡಿ, ಮೌಲ್ಯವರ್ಧಿತ ಸೇವೆಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ನಮ್ಮ ಉತ್ಪನ್ನಗಳನ್ನು ಬಳಸುವ ಜನರಿಗೆ ಸೂಕ್ತ ಪ್ರಯೋಜನ ಸಿಗಬೇಕು ಎಂಬುದು ಪ್ರಾಥಮಿಕ ಜವಾಬ್ದಾರಿಯಾಗಿದೆ. ಈ ಅತ್ಯಾಧುನಿಕ ತಂತ್ರಜ್ಞಾನವು ಪ್ರಾಯೋಗಿಕವಾಗಿ ಮಹತ್ವದ ಪ್ರಾಸ್ಟೇಟ್ ಕ್ಯಾನ್ಸರ್ನ ಆರಂಭಿಕ ಪತ್ತೆಯನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದರು.


ರೋಬೋಟಿಕ್‌ ಚಿಕಿತ್ಸೆ ಪಡೆದ ರೋಗಿಗಳ ಅನುಭವ:


1. 12 ವರ್ಷದ ಕನಿಕಾ ಗೋಷ್ಠಿಯಲ್ಲಿ ಪಾಲ್ಗೊಂಡು, ಕೊನೆಯ ಹಂತದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದೆ. ಜೊತೆಗೆ, ಒಂದು ವರ್ಷದಿಂದ ಹಿಮೋಡಯಾಲಿಸಿಸ್‌ನಲ್ಲಿಯೂ ಇದ್ದೆ. ಇದರಿಂದ ರೋಬೋಟಿಕ್‌ ಶಸ್ತ್ರಚಿಕಿತ್ಸೆಯೂ ಕಷ್ಟಕರವೆಂದು ಹೇಳಲಾಗುತ್ತಿತ್ತು. ಆದರೆ, ವೈದ್ಯರ ತಂಡ ನನ್ನ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡು, ಯಶಸ್ವಿಯಾಗಿ ರೊಬೋಟಿಕ್‌ ಬಳಸಿಕೊಂಡು ಕಿಡ್ನಿ ಕಸಿ ಮಾಡಲಾಯಿತು. ಇದೀಗ ನನ್ನ ಆರೋಗ್ಯ ಸ್ಥಿರವಾಗಿದೆ ಎಂದರು.


2. ಶ್ರೀ ರಾಘವನ್: ನನ್ನ ವಯಸ್ಸು 66.  ನಾನು ಗ್ರೇಡ್ II ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಹೊಂದಿದ್ದೆ. ರೊಬೊಟಿಕ್ ಅಸಿಸ್ಟೆಡ್ ಲ್ಯಾಪರೊಸ್ಕೋಪಿಕ್ ರಾಡಿಕಲ್ ರೆಟ್ರೋಪ್ಯೂಬಿಕ್ ಪ್ರಾಸ್ಟೇಟೆಕ್ಟಮಿ (ಪ್ರಾಸ್ಟೇಟ್ ಗ್ರಂಥಿ ಮತ್ತು ಅದರ ಸುತ್ತಲಿನ ಕೆಲವು ಅಂಗಾಂಶಗಳನ್ನು ತೆಗೆಯುವುದು) ನಡೆಸಲಾಯಿತು. ಇದೀಗ ನಾನು ಆರೋಗ್ಯವಾಗಿದ್ದೇನೆ ಎಂದರು.


ಇದನ್ನೂ ಓದಿ: "ಸುಳ್ಳು ಹೇಳದೇ ಬಿಜೆಪಿಯವರು ಬದುಕಲು ಸಾಧ್ಯವಿಲ್ಲ"


ಇಂಟ್ಯೂಟಿವ್ ಇಂಡಿಯಾದ ಉಪಾಧ್ಯಕ್ಷ ಮತ್ತು ಕಂಟ್ರಿ ಜಿಎಂ ಮನ್‌ದೀಪ್ ಸಿಂಗ್ ಕುಮಾರ್, ಫೋರ್ಟಿಸ್ ಆಸ್ಪತ್ರೆ ರೆನಲ್ ಸೈನ್ಸಸ್ ಸ್ಪೆಷಾಲಿಟಿ ಕೌನ್ಸಿಲ್‌ನ ಅಧ್ಯಕ್ಷರು, ಡಾ ವಿನ್ಸಿ ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.