ಸಂಸದೆ ಸುಮಲತಾ ಹಾಗೂ ಆಪ್ತರ ಜೊತೆ ಗುರುತಿಸಿಕೊಳ್ಳದಂತೆ ಖಡಕ್ ವಾರ್ನಿಂಗ್ !
Mandy : ಚುನಾವಣೆ ಕುರಿತಂತೆ ಸಂಸದೆ ಸುಮಲತಾ ಜೊತೆ ಇನ್ಮುಂದೆ ಗುರುತಿಸಿಕೊಳ್ಳಬೇಡಿ.ಸುಮಲತಾ ಬೆಂಬಲಿಗರು ನಡೆಸುವ ಸಭೆಗು ಹೋಗಬೇಡಿ. ಸಂಸದೆ ಬೆಂಬಲಿಗರು ಕಾಂಗ್ರೆಸ್ಸಿಗರನ್ನ ಕರೆಯಲುಬೇಡಿ.!
ಮಂಡ್ಯ:ಚುನಾವಣೆ ಕುರಿತಂತೆ ಸಂಸದೆ ಸುಮಲತಾ ಜೊತೆ ಇನ್ಮುಂದೆ ಗುರುತಿಸಿಕೊಳ್ಳಬೇಡಿ.ಸುಮಲತಾ ಬೆಂಬಲಿಗರು ನಡೆಸುವ ಸಭೆಗು ಹೋಗಬೇಡಿ. ಸಂಸದೆ ಬೆಂಬಲಿಗರು ಕಾಂಗ್ರೆಸ್ಸಿಗರನ್ನ ಕರೆಯಲುಬೇಡಿ.! ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಾಧ್ಯಮದ ಮೂಲಕ ಸೂಚನೆ ಹೊರಡಿಸಿದ್ದಾರೆ.
ಇತ್ತಿಚೇಗೆ ಡಿ.ಕೆ.ಶಿವಕುಮಾರ್ ವಿರುದ್ದ ವಾಗ್ದಾಳಿ ಬಳಿಕವು ಸುಮಲತಾ ಬೆಂಬಲಿಗರ ಪಡೆ ಜೊತೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಪಕ್ಷಕ್ಕೆ ಮುಜುಗರ ಎನಿಸುತ್ತಿದೆ. ಎಂಪಿ ಚುನಾವಣೆ ಬಳಿಕ ನಡೆದ ಎಲ್ಲ ಚುನಾವಣೆಗಳಲ್ಲಿ ಸುಮಲತಾ ಅವರು ತಟಸ್ಥವಾಗಿದ್ದಾರೆ.
ಇದನ್ನೂ ಓದಿ: ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ 6-7 ಅಭ್ಯರ್ಥಿಗಳ ಬದಲಾವಣೆ ಸುಳಿವು ಕೊಟ್ಟ ಎಚ್ಡಿಕೆ
ಕಾಂಗ್ರೆಸ್ ಆ ಎಲ್ಲ ಎಲೆಕ್ಷನ್‍ಗಳಲ್ಲಿ ಹೋರಾಟ ಮಾಡಿದೆ. ಆದ್ದರಿಂದ ಅವರ ಸಭೆಗಳಿಗೆ ಹೋಗುವುದು ಸಮಂಜಸವಲ್ಲ. ಅದರ ಅವಶ್ಯಕತೆಯು ಇಲ್ಲ.ಸಂಸದೆ ಸುಮಲತಾ ಜೊತೆ ಇನ್ಮುಂದೆ ಗುರುತಿಸಿಕೊಳ್ಳಬೇಡಿ.ನಡೆಸುವ ಸಭೆಗೂ ಹೋಗಬೇಡಿ.ಸಂಸದೆ ಬೆಂಬಲಿಗರು ಕಾಂಗ್ರೆಸ್ಸಿಗರನ್ನ ಕರೆಯಲುಬೇಡಿ ಎಂದು ಹೇಳುವ ಮೂಲಕ ಸುಮಲತಾ ವಿಚಾರದಲ್ಲಿ ಕೈ ನಾಯಕರು ಮತ್ತಷ್ಟು ಅಂತರ ಕಾಪಾಡುತ್ತಿದ್ದಾರೆ.
ಇದನ್ನೂ ಓದಿ:ಕೋಟೆನಾಡಿಗೆ ಅದ್ಧೂರಿ ಎಂಟ್ರಿ ಕೊಟ್ಟ ಜನಾರ್ದನ್ ರೆಡ್ಡಿ..!https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.