ಸಿದ್ದರಾಮಯ್ಯನವರೇ ಮೊದಲು ಮೊಸರಲ್ಲಿ ಕಲ್ಲು ಹುಡುಕುವುದು ಬಿಟ್ಟುಬಿಡಿ: ಬಿಜೆಪಿ ಟೀಕೆ

Congress v/s BJP: ಅಭಿವೃದ್ಧಿಯ ರಾಜಕಾರಣ ಎಂದರೆ ಅದು ರಾಜ್ಯದ ಅಭಿವೃದ್ಧಿಯಲ್ಲ, ಪಕ್ಷದ ನಾಯಕರ ಅಭಿವೃದ್ಧಿ ಇದು ಕಾಂಗ್ರೆಸ್ ಸಿದ್ಧಾಂತ ಎಂಬುದು ಬಹಿರಂಗ ಸತ್ಯವೆಂದು ಬಿಜೆಪಿ ಟೀಕಿಸಿದೆ.

Written by - Puttaraj K Alur | Last Updated : Feb 5, 2023, 12:32 PM IST
  • ಅಭಿವೃದ್ಧಿ ರಾಜಕಾರಣವೆಂದರೆ ಅದು ರಾಜ್ಯದ ಅಭಿವೃದ್ಧಿಯಲ್ಲ, ಪಕ್ಷದ ನಾಯಕರ ಅಭಿವೃದ್ಧಿ
  • ಸಿದ್ದರಾಮಯ್ಯನವರ ಸರ್ಕಾರ ಅಧಿಕಾರದಲ್ಲಿದ್ದಾಗ ಮಾಡಿದ್ದೂ ಇದನ್ನೇ
  • ಪೊಲೀಸ್ ಇಲಾಖೆ ಉನ್ನತೀಕರಣ ಹೆಸರಲ್ಲಿಯೂ ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರ
ಸಿದ್ದರಾಮಯ್ಯನವರೇ ಮೊದಲು ಮೊಸರಲ್ಲಿ ಕಲ್ಲು ಹುಡುಕುವುದು ಬಿಟ್ಟುಬಿಡಿ: ಬಿಜೆಪಿ ಟೀಕೆ title=
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟೀಕೆ

ಬೆಂಗಳೂರು: ಸಿದ್ದರಾಮಯ್ಯನವರೇ ಮೊದಲು ಮೊಸರಲ್ಲಿ ಕಲ್ಲು ಹುಡುಕುವುದನ್ನು ಬಿಟ್ಟುಬಿಡಿ ಎಂದು ಬಿಜೆಪಿ ಟೀಕಿಸಿದೆ. #CorruptCongress ಹ್ಯಾಶ್‍ಟ್ಯಾಗ್ ಬಳಸಿ ಭಾನುವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಮಾಜಿ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

‘ಅಭಿವೃದ್ಧಿಯ ರಾಜಕಾರಣ ಎಂದರೆ ಅದು ರಾಜ್ಯದ ಅಭಿವೃದ್ಧಿಯಲ್ಲ, ಪಕ್ಷದ ನಾಯಕರ ಅಭಿವೃದ್ಧಿ ಇದು ಕಾಂಗ್ರೆಸ್ ಸಿದ್ಧಾಂತ ಎಂಬುದು ಬಹಿರಂಗ ಸತ್ಯ. ಸಿದ್ದರಾಮಯ್ಯನವರ ಸರ್ಕಾರ ಅಧಿಕಾರದಲ್ಲಿದ್ದಾಗ ಮಾಡಿದ್ದೂ ಅದನ್ನೇ. ಅದಕ್ಕಾಗಿ ರೂಪಿಸಿದ 2100 ಕೋಟಿ ರೂ.ವೆಚ್ಚದ ಯೋಜನೆಯೇ ಹೆಬ್ಬಾಳದವರೆಗಿನ 6.9 ಕಿಮೀ ಉದ್ದದ ಉಕ್ಕಿನ ಫ್ಲೈಓವರ್‌ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: Electric shock: ವಿದ್ಯುತ್ ಪ್ರವಹಿಸಿ ಕಾರ್ಮಿಕರಿಬ್ಬರ ದಾರುಣ ಸಾವು

‘ಯಾವಾಗ ಜನರಿಂದ ವಿರೋಧ ಬರಲು ಶುರುವಾಯಿತೋ ಆಗ ಆ ಯೋಜನೆ ಕೈಬಿಟ್ಟು ಕಮಿಷನ್ ಸಂಗ್ರಹಕ್ಕೆ  2000 ಚಿಲ್ಲರೆ ಕೋಟಿ ರೂ. ವೆಚ್ಚದ ವೈಟ್ ಟ್ಯಾಪಿಂಗ್ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರ ಆರಂಭಿಸಿದ್ದು ಎಂಬುದಕ್ಕೆ ಆ ರಸ್ತೆಯ ಗುಣಮಟ್ಟ ಸಾಕ್ಷಿಯಾಗಿ ನಿಂತಿದೆ. ಪೊಲೀಸ್ ಇಲಾಖೆಯ ಉನ್ನತೀಕರಣ ಹೆಸರಲ್ಲಿಯೂ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರ ಮಾಡಿತು. 290.48 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿ, ಅದರಲ್ಲೂ 68.8 ಕೋಟಿ ರೂ. ಉಳಿಸಿಕೊಂಡು ಅದನ್ನು ನುಂಗಿ ಹಾಕಿತು. ಆ ಹಣ ಏನಾಯಿತು ಎಂಬುದೇ ತಿಳಿಯದಂತೆ ಕಡತ ರೂಪಿಸಿದ್ದು ಇದೇ ಸಿದ್ದರಾಮಯ್ಯನವರು’ ಎಂದು ಬಿಜೆಪಿ ಟೀಕಿಸಿದೆ.

‘ಈಗ ನಮ್ಮ ಸರ್ಕಾರ ಜನರ ಅಗತ್ಯಕ್ಕೆ ತಕ್ಕಂತೆ ಮೂಲ ಸೌಕರ್ಯ ಒದಗಿಸುತ್ತಾ ಬಂದಿದೆ. ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಈ ಕೆಲಸ ಮಾಡಿದ್ದಿದ್ದರೆ ರಾಜ್ಯದಲ್ಲಿ 45 ಲಕ್ಷಕ್ಕೂ ಅಧಿಕ ಶೌಚಾಲಯಗಳನ್ನು ನಮ್ಮ ಸರ್ಕಾರ ನಿರ್ಮಿಸುವ ಅಗತ್ಯವೇ ಇರಲಿಲ್ಲ. ಇಂತಹ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ಅಧಿಕಾರದಲ್ಲಿದ್ದಾಗ ಮಾಡುವುದಿಲ್ಲ, ಬೇರೆಯವರು ಮಾಡಿದಾಗ ಸಹಿಸದಿರುವುದು ಕಾಂಗ್ರೆಸ್ ನಾಯಕರ ಜಾಯಮಾನ, ಇದು ಗೊತ್ತಿದ್ದೂ ಸುಳ್ಳು ಆರೋಪ ಮಾಡುವ ನಿಮ್ಮ ಪ್ರಯತ್ನ ವ್ಯರ್ಥವಾಗುತ್ತದೆ ಸಿದ್ದರಾಮಯ್ಯನವರೇ. ಮೊದಲು ಮೊಸರಲ್ಲಿ ಕಲ್ಲು ಹುಡುಕುವುದನ್ನು ಬಿಟ್ಟುಬಿಡಿ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: PM Modi Karnataka Tour: ನಾಳೆ ಪ್ರಧಾನಿ ಮೋದಿ ಬೆಂಗಳೂರು ಮತ್ತು ತುಮಕೂರು ಪ್ರವಾಸ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News