ಬೆಂಗಳೂರು : ಕಾಂಗ್ರೆಸಲ್ಲಿ ಕ್ಷಿಪ್ರಕ್ರಾಂತಿ ನೇತೃತ್ವ ವಹಿಸಿ ಕರ್ನಾಟಕದಲ್ಲಿ ಮತ್ತೆ ಯಡಿಯೂರಪ್ಪ (BS Yediyurappa) ಸರ್ಕಾರ ಪ್ರತಿಷ್ಟಾಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ರಮೇಶ್ ಜಾರಕಿಹೊಳಿಗೆ (Ramesh Jarakiholi) ಈಗ `ಸರಸ ಸೀಡಿ'ಯ ಸಂಕಷ್ಟ ಎದುರಾಗಿದೆ. ಇದು ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಹಲವು ಸ್ಥಿತ್ಯಂತರಗಳಿಗೆ ಕಾರಣವಾಗಬಹುದಾಗಿದೆ.


COMMERCIAL BREAK
SCROLL TO CONTINUE READING

ವಿಪಕ್ಷಗಳ ಕೈಗೆ `ಬ್ರಹ್ಮಾಸ್ತ್ರ' :
ನಾಳೆ ಯಡಿಯೂರಪ್ಪ (Yediyurappa) ಬಜೆಟ್ ಮಂಡಿಸಲಿದ್ದಾರೆ. ಈ ನಡುವೆ, ರಾಜ್ಯ ಸರ್ಕಾರವನ್ನು ನಾಲ್ಕೂ ದಿಕಿನಲ್ಲಿ ಸುತ್ತುವರಿದು ದಾಳಿ ನಡೆಸಲು ಉದ್ದೇಶಿಸಿದ್ದ ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ ಪಡೆಗೆ ಮಹಾ `ಬ್ರಹ್ಮಾಸ್ತ್ರ' ಸಿಕ್ಕಂತಾಗಿದೆ. ಶೀತಲ ಸಮರದಿಂದ ಕುಸಿದು ಹೋಗಿದ್ದ ಕಾಂಗ್ರೆಸ್ (Congress) ಹೋರಾಟಕ್ಕೂ ಟಾನಿಕ್ ಸಿಕ್ಕಂತಾಗಿದೆ. ಅಸೆಂಬ್ಲಿಯಲ್ಲಿ ಸಿದ್ದರಾಮಯ್ಯ ದಾಳಿಯಿಂದ ಯಡಿಯೂರಪ್ಪ ಹೇಗೆ ತಪ್ಪಿಸಿಕೊಳ್ಳುತ್ತಾರೆ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ.



ಇದನ್ನೂ ಓದಿ : Ramesh Jarkiholi: ಸಾಹುಕಾರನ ರಾಸಲೀಲೆ: ವಿಡಿಯೋ ಶೂಟ್ ಆಗಿದ್ದು ದೆಹಲಿಯ ಕರ್ನಾಟಕ ಭವನದಲ್ಲಿ!


`ಸಾಹುಕಾರ'ರ ತಲೆದಂಡ ಸನ್ನಿಹಿತ.? :
 ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ (Ramesh jarakiholi) ತಲೆದಂಡ ಬಹುತೇಕ ಖಚಿತ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ ಖುದ್ದು ರಾಜೀನಾಮೆ ನೀಡಬಹುದು. ಅಥವಾ ಯಡಿಯೂರಪ್ಪ ಅವರ ರಾಜೀನಾಮೆ ಕೇಳಬಹುದು. ಹೈಕಮಾಂಡ್ ಕೂಡಾ ರಾಜೀನಾಮೆಗೆ ಒತ್ತಡ ಹೇರಬಹುದು. ಜಾರಕಿಹೊಳಿ ಕೂಡಾ ಹೈಕಮಾಂಡ್ ಜೊತೆ ಮಾತುಕತೆ ನಡೆಸಿ ರಾಜೀನಾಮೆ ಕುಣಿಕೆಯಿಂದ ಪಾರಾಗಬಹುದು. ಆದರೆ, ಸದ್ಯದ ಸ್ಥಿತಿಯಲ್ಲಿ ಜಾರಕಿಹೊಳಿ ರಾಜೀನಾಮೆ ಅನಿವಾರ್ಯ ಎನ್ನಲಾಗಿದೆ.


ಸಾಹುಕಾರರು ಸಿಡಿದೇಳಬಹುದು.!
ಅಚಾನಕ್ ಎದುರಾದ ಈ `ಸರಸ ಸೀಡಿ ಸಂಕಟ' ಯಿಂದ ಪಾರಾಗಲು ಜಾರಕಿಹೊಳಿ ಬಂಡಾಯದ ಮುನ್ಸೂಚನೆ ನೀಡಬಹುದು. ರಾಜೀನಾಮೆ (Resignation) ನೀಡಲ್ಲ ಎಂಬ ದಾಟಿಯಲ್ಲಿ ಈಗಾಗಲೇ ಜಾರಕಿಹೊಳಿ ಮಾತಾಡಿದ್ದಾರೆ. ತನ್ನ ಜೊತೆ ಇನ್ನೂ ಹಲವು ಶಾಸಕರಿದ್ದು, ರಾಜೀನಾಮೆ ಕೇಳಿದರೆ ಸರ್ಕಾರವೇ ಕುಸಿದುಬೀಳಬಹುದು ಎಂಬ ಸೂಚನೆ ನೀಡಬಹುದು. ಆದರೆ, ಈ ತಂತ್ರ ಫಲಿಸುವ ಸಾಧ್ಯತೆ ತುಂಬಾ ಕಡಿಮೆ. `ಸರಸ ಸೀಡಿ ಪ್ರಹಸನ' ರಾಜಕೀಯ ವಿಷಯಕ್ಕಿಂತ ಹೆಚ್ಚಾಗಿ, ನೈತಿಕ ವಿಚಾರವನ್ನು ಪ್ರತಿಫಲಿಸುತ್ತಿದೆ. ಜಲಸಂಪನ್ಮೂಲ ಸಚಿವರು ನೈತಿಕ ರೀತಿಯಲ್ಲಿ ನಡೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. 



ಇದನ್ನೂ ಓದಿ : 'ಅದು ಫೇಕ್ ವಿಡಿಯೋ ಯಾಕೆ ರಾಜೀನಾಮೆ ನೀಡಬೇಕು?’


ಸಾಹುಕಾರರನ್ನು ಹಣಿಯಲು ತಂತ್ರ.!
ರಮೇಶ್ ಜಾರಕಿಹೊಳಿ ಬಗ್ಗೆ ಬಿಜೆಪಿ (BJP) ಮತ್ತು ಕಾಂಗ್ರೆಸಲ್ಲಿ ಹಲವು ನಾಯಕರಿಗೆ ಅಸಮಾಧಾನ ಇದೆ. ಅಂಥವರಿಗೆ ರಮೇಶ್ ಜಾರಕಿಹೊಳಿಯವರನ್ನು ಹಣಿಯಲು ಸುವರ್ಣಾವಕಾಶ ಸಿಕ್ಕಂತಾಗಿದೆ. ಸರಸ ಸೀಡಿ (CD) ಇಟ್ಟು ಕೊಂಡು ರಮೇಶ್ ಜಾರಕಿಹೊಳಿಯವರನ್ನು ರಾಜ್ಯ ರಾಜಕೀಯ ಮತ್ತು ಬೆಳಗಾವಿ ರಾಜಕೀಯದಿಂದ ದೂರ ಇಡಬಹುದು. 


ಸಾಹುಕಾರರ ವಿರುದ್ಧ ಎಫ್ಐಆರ್ ದಾಖಲಾಗಬಹುದು. 
ಜಾರಕಿಹೊಳಿ ವಿರುದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಲೈಂಗಿಕ ದೌರ್ಜನ್ಯದ ದೂರು ನೀಡಿದ್ದಾರೆ. ಆದರೆ, ಸಂತ್ರಸ್ತ ಯುವತಿ ಇದುವರೆಗೆ ದೂರು ನೀಡಿಲ್ಲ. ಪೊಲೀಸರು ಸಂತ್ರಸ್ತೆಯ ವಿಚಾರಣೆ ನಡೆಸಬಹುದು. ಒಂದು ವೇಳೆ ಯುವತಿ ರೇಪ್ (Rape) ಎಂದು ಹೇಳಿಕೆ ಕೊಟ್ಟುಬಿಟ್ಟರೆ ಪ್ರಕರಣ ಸಂಪೂರ್ಣ ಬದಲಾಗಿ, ಜಾರಕಿಹೊಳಿ ಬಂಧನಕ್ಕೊಳಗಾಗಬಹುದು. ವಿಡಿಯೋ ಪೂರ್ವ ನಿಯೋಜಿತವೇ ಎಂಬ ಬಗ್ಗೆಯೂ ತನಿಖೆ ನಡೆಯಬಹುದು. ಈ ಕೇಸ್ ಮುಂದೆ ಯಾವ ತಿರುವು ಕೂಡಾ ಪಡೆದುಕೊಳ್ಳಬಹುದು. ಕಾಂಗ್ರೆಸ್, ಬಿಜೆಪಿ ಎರಡೂ ಸರ್ಕಾರಗಳನ್ನೂ ಅಲ್ಲಾಡಿಸುತ್ತಿದ್ದ ರಮೇಶ್ ಜಾರಕಿಹೊಳಿ, ಮಹಾಖೆಡ್ಡಾವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಅದರಿಂದ ಹೊರಬರುವುದು ಅಷ್ಟೊಂದು ಸುಲಭವಿಲ್ಲ. ಜಾರಕಿಹೊಳಿ ಮೊದಲು ನೈತಿಕ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.