ಒಂದೇ ಗಂಟೆಯ ಅವಧಿಯೊಳಗೆ ಶಿವಮೊಗ್ಗದಲ್ಲಿ ಐದು ಕಡೆ ಸರಗಳ್ಳತನ !
ಒಂದೇ ಗಂಟೆಯ ಅವಧಿಯೊಳಗೆ ಶಿವಮೊಗ್ಗದಲ್ಲಿ ಐದು ಕಡೆ ಸರಗಳ್ಳತನ ! ಒಂದೇ ಗ್ಯಾಂಗ್ ಕೃತ್ಯ ನಡೆಸಿರುವ ಶಂಕೆ ! ಎಲ್ಲಿಲ್ಲಿ ಚೈನ್ ಲಿಫ್ಟ್ ಮಾಡಿದ್ದಾರೆ ಗೊತ್ತಾ?ಒಂದೇ ಗಂಟೆಯ ಅವಧಿಯೊಳಗೆ ಶಿವಮೊಗ್ಗದಲ್ಲಿ ಐದು ಕಡೆ ಸರಗಳ್ಳತನ ! ಒಂದೇ ಗ್ಯಾಂಗ್ ಕೃತ್ಯ ನಡೆಸಿರುವ ಶಂಕೆ ! ಎಲ್ಲಿಲ್ಲಿ ಚೈನ್ ಲಿಫ್ಟ್ ಮಾಡಿದ್ದಾರೆ ಗೊತ್ತಾ?
ನವದೆಹಲಿ: ಒಂದೇ ಗಂಟೆಯ ಅವಧಿಯೊಳಗೆ ಶಿವಮೊಗ್ಗದಲ್ಲಿ ಐದು ಕಡೆ ಸರಗಳ್ಳತನ ! ಒಂದೇ ಗ್ಯಾಂಗ್ ಕೃತ್ಯ ನಡೆಸಿರುವ ಶಂಕೆ ! ಎಲ್ಲಿಲ್ಲಿ ಚೈನ್ ಲಿಫ್ಟ್ ಮಾಡಿದ್ದಾರೆ ಗೊತ್ತಾ?ಒಂದೇ ಗಂಟೆಯ ಅವಧಿಯೊಳಗೆ ಶಿವಮೊಗ್ಗದಲ್ಲಿ ಐದು ಕಡೆ ಸರಗಳ್ಳತನ ! ಒಂದೇ ಗ್ಯಾಂಗ್ ಕೃತ್ಯ ನಡೆಸಿರುವ ಶಂಕೆ ! ಎಲ್ಲಿಲ್ಲಿ ಚೈನ್ ಲಿಫ್ಟ್ ಮಾಡಿದ್ದಾರೆ ಗೊತ್ತಾ?
ಶಿವಮೊಗ್ಗ ನಗರದಲ್ಲಿ ದಾರಿಹೋಕರ ಸರಗಳ್ಳತನ ಮಾಡುವ ಗ್ಯಾಂಗ್ ಸಕ್ರೀಯವಾಗಿರೋದಕ್ಕೆ ನೆನ್ನೆ ನಡದ ಸರಣಿ ಕಳ್ಳತನಗಳೇ ಸಾಕ್ಷಿಯಾಗಿದೆ. ದೊಡ್ಡಪೇಟೆ ವಿನೋಬ ನಗರ ಹಾಗು ಕೋಟೆ ಠಾಣೆ ವ್ಯಾಪ್ತಿಯಲ್ಲಿ ಐದು ಕಡೆ ಕಳ್ಳರು ಸರಗಳ್ಳತನ ಹಾಗು ಮೊಬೈಲ್ ಕಳ್ಳತನ ಮಾಡಿದ್ದಾರೆ. ಒರ್ವ ಮಹಿಳೆಯ ಚೈನು ಕದಿಯುವ ದೃಷ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: South Africa vs India, 2nd ODI : ಹರಿಣಗಳ ವಿರುದ್ಧ ಭಾರತಕ್ಕೆ ಏಕದಿನ ಸರಣಿ ಸೋಲು
ಶರಾವತಿ ನಗರದ ಚರ್ಚ್ ಬಳಿ, ವಿನೋಬ ನಗರದ ಸಾಮಿಲ್ ಲೈಔಟ್, ಪ್ರಿಯಾಂಕ ಲೇಔಟ್ ಓಲ್ಡ್ ಬಾರ್ ಲೈನ್ ರೋಡ್, ಸವರ್ ಲೈನ್ ರಸ್ತೆ ಬಳಿ ಕಳ್ಳರು ಮಹಿಳೆಯ ಚೈನ್ ಹಾಗು ಮೊಬೈಲ್ ಕಳ್ಳತನ ಮಾಡಿದ್ದಾರೆ.ಸವರ್ ಲೈನ್ ಬಳಿ ಪೊಲೀಸ್ ಕುಟುಂಬದ ಮಹಿಳೆಯೊಬ್ಬರು ಬೈಕ್ ನಲ್ಲಿ ಬರುವಾಗ ಕಳ್ಳರು ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ…ಬ್ಯಾಗ್ ನಲ್ಲಿ ಎಂಟು ಸಾವಿರ ನಗದು ಹಾಗು 11 ಸಾವಿರ ಮೌಲ್ಯದ ಮೊಬೈಲ್ ಇತ್ತೆಂದು ಮಹಿಳೆ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : KL Rahul : ಸರಣಿ ಸೋಲಿನಿಂದ ಬೇಸತ್ತ ಕೆಎಲ್ ರಾಹುಲ್ : ದುಃಖದಿಂದ ಸೋಲಿಗೆ ಕಾರಣ ತಿಳಿಸಿದ ಕ್ಯಾಪ್ಟನ್
ಶರಾವತಿ ನಗರದ ಮಂಗಳಾ ಎಂಬುವರ ಹೊಸಮನೆ ಚರ್ಚ್ ಬಳಿ ನಡೆದುಕೊಂಡು ಹೋಗಬೇಕಾದ್ರೆ, ಬೈಕ್ ನಲ್ಲಿ ಬಂದ ಇಬ್ಬರು ಕಳ್ಳರು 55 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ.ಓಲ್ಡ್ ಬಾರ್ ಲೈನ್ ರಸ್ತೆಯ ವಾಸಿ ಎಲಿಜಬೆತ್ ಎಂಬುವರು ಓಲ್ಡ್ ಪೋಸ್ಟ್ ಆಫಿಸ್ ರಸ್ತೆಯಲ್ಲಿ ಹೋಗುವಾಗ 35 ಗ್ರಾಂ ಚಿನ್ನದ ಸರವನ್ನು ಕಳ್ಳರು ಕದ್ದಿದ್ದಾರೆ. ಕಳ್ಳರ ಬಂಧನಕ್ಕೆ ಎಸ್ಪಿ ಲಕ್ಷ್ಮಿ ಪ್ರಸಾದ್ ವಿಶೇಷ ತಂಡ ರಚಿಸಿದ್ದು, ಸಧ್ಯದಲ್ಲಿಯೇ ಆರೋಪಿಗಳ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Watch: ಉಲ್ಟಾ ಬ್ಲೌಸ್ ಧರಿಸಿ ಸುದ್ದಿಯಾದ ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.